Tata Cars: ಶೀಘ್ರದಲ್ಲೇ ದರ್ಬಾರ್ ಶುರು ಮಾಡಲಿವೆ ಟಾಟಾದ ಹೊಸ 3 ಕಾರುಗಳು-ವಿಶೇಷತೆ & ದರಗಳ ಮಾಹಿತಿ ತಿಳಿಯಿರಿ
Tata Cars: ಕಾಲ ಬದಲಾದಂತೆ ಜನರು ಚೇಂಜ್ ಕೇಳ್ತಾನೇ ಇರ್ತಾರೆ. ಹಾಗೆಯೇ ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಟೋಮೊಬೈಲ್ ಕ್ಷೇತ್ರದಲ್ಲಿಯೂ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಕಾರುಗಳ ವಿಚಾರಕ್ಕೆ ಬಂದರೆ, ಇದೀಗ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಕೈಗೆಟಕುವ ದರದಲ್ಲಿ ಹೊಸ ಹೊಸ ಕಾರುಗಳನ್ನು ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿವೆ. ಹಾಗೆಯೇ ಭಾರತದ ದೈತ್ಯ ಕಂಪನಿಗಳಲ್ಲಿ ಒಂದಾದ ಟಾಟಾ ಮೂರು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಕಾರುಗಳನ್ನು ಬಿಡುವ ಮೂಲಕ ಟಾಟಾ ಮೋಟಾರ್ಸ್ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಇನ್ನು ಈ ಕಂಪನಿಯು ಶೀಘ್ರದಲ್ಲೇ ಮೂರು ನೂತನ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹಾಗಾದರೆ ಅವುಗಳ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈ ಹೊಸ ಕಾರುಗಳು ಹೊಸ ವಿನ್ಯಾಸವನ್ನು ಹೊಂದಿರಲಿದ್ದು, ಇವುಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಇನ್ನು ಸಿಎನ್ ಜಿ ಮಾದರಿಯ ಕಾರು ಕೂಡ ಬಿಡುಗಡೆಯಾಗುತ್ತಿದ್ದು, ಇವು ಹೊಸ ಕಾರುಗಳು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಅತ್ಯಾಧುನಿಕ ಸೌಲಭ್ಯಗಳನಗಳನ್ನು ಹೊಂದಿರಲಿವೆ.
ಆಲ್ಟ್ರೊಜ್ ಫೇಸ್ ಲಿಫ್ಟ್: ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾಣದ, ಹೊಸ ವಿನ್ಯಾಸದ ಆಲ್ಟ್ರೊಜ್ ಫೇಸ್ ಲಿಫ್ಟ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರಲಗಲಿ ಈ ಬಾರಿ ಸ್ಟ್ಯಾಂಡರ್ಡ್ ಆವೃತ್ತಿಯ ಜೊತೆಗೆ ರೇಸರ್ ಎಡಿಷನ್ ಸಹ ಬಿಡುಗಡೆ ಮಾ ಮಾಡುತ್ತಿದೆ. ಇದು ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಗ್ರಾಹಕರನ್ನು ಸೆಳೆಯಲಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದು 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಷನ್ ಸೀಟ್‌ಗಳು ಸೇರಿದಂತೆ ಹಲವಾರು ಪ್ರೀಮಿಯಂ ವಿಶೇಷತೆಗಳನ್ನು ಒಳಗೊಂಡಿರಲಿದೆ. ಅಲ್ಲದೆ, ಸುರಕ್ಷತೆಗಾಗಿ ಆರಂಭಿಕ ವೆರಿಯೆಂಟ್‌ನಲ್ಲೂ 6 ಏರ್ ಬ್ಯಾಗ್‌ಗಳನ್ನು ಜೋಡಿಸಲಾಗುತ್ತಿದ್ದು, ಮೂಲಗಳ ಪ್ರಕಾರ, ಇದರ ಎಕ್ಸ್ ಶೋರೂಂ ದರ 7 ಲಕ್ಷದಿಂದ 11 ಲಕ್ಷ ರೂಪಾಯಿವರೆಗೂ ಇರಲಿದೆ ಎಂದು ಹೇಳಲಾಗುತ್ತದೆ.
ನೆಕ್ಸಾನ್ ಸಿಎನ್‌ಜಿ: ಇನ್ನು ಸಿಎನ್‌ಜಿ ಆವೃತ್ತಿಯೊಂದಿಗೆ ನೆಕ್ಸಾನ್ ಕಾರು ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಮೂರು ಆವೃತ್ತಿಯಲ್ಲೂ ಖರೀದಿಗೆ ಲಭ್ಯವಾಗುತ್ತಿರುವ ಮೊದಲ ಕಾರು ಮಾದರಿ ಆಗಲಿದೆ. ಇದು ಕಂಪ್ಯಾಕ್ಟ್ ಎಸ್‌ಯುವಿ ಖರೀದಿದಾರರಿಗೆ ಆಯ್ಕೆ ಹೆಚ್ಚಿಸಲಿದ್ದು, ಇದರೊಂದಿಗೆ ಹೊಸ ಕಾರು ಮೈಲೇಜ್ ವಿಚಾರವಾಗಿ ಮಾರುತಿ ಸುಜುಕಿ ಬ್ರೆಝಾಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ನೆಕ್ಸಾನ್ ಸಿಎನ್‌ಜಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐ ಸಿಎನ್‌ಜಿ ತಂತ್ರಜ್ಞಾನ ಒಳಗೊಂಡಿರಲಿದೆ. ಇದು ಪ್ರತಿ ಕೆ.ಜಿ.ಗೆ ಗರಿಷ್ಠ 25 ಕಿಲೋ ಮೀಟರ್ ಮೈಲೇಜ್ ಹಿಂದಿರುಗಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ, ಟ್ವಿನ್ ಸಿಲಿಂಡರ್ ಸಿಎನ್‌ಜಿ ಟ್ಯಾಂಕರ್ ವೈಶಿಷ್ಟ್ಯತೆಯ ಮೂಲಕ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ವಿನ್ಯಾಸದೊಂದಿಗೆ ಬೂಟ್ ಸ್ಪೆಸ್ ಹೆಚ್ಚಳ ಆಗಿರುವುದು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ ಎಂದು ಹೇಳಲಾಗುತ್ತಿದೆ.
ಕರ್ವ್ ಇವಿ: ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್‌ಫಾನಡಿ ಹೊಸ ಕರ್ವ್ ಕಾರು ಕೂಪೆ ಎಸ್‌ಯುವಿ ವಿನ್ಯಾಸವನ್ನು ಹೊಂದಿರಲಿದೆ. ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅಷ್ಟೇ ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಮಾರುಕಟ್ ಎಂಟ್ರಿ ಕೊಡಲಿದೆ. ಇದರಲ್ಲಿ ಎಲೆಕ್ಟ್ರಿಕ್ ಮಾದರಿ ಮಾತ್ರ 2024ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು 2025ರ ವೇಳೆಗೆ ಬಿಡುಗಡೆ ಆಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ
ಈ ಇವಿ ಆವೃತ್ತಿಯು ಪ್ರತಿ ಬಾರಿಯ ಫುಲ್ ಚಾರ್ಚ್‌ಗೆ 500 ಕಿಲೋ ಮೀಟರ್‌ಗೂ ಅಧಿಕ ಮೈಲೇಜ್ ಕೊಡುವ ಬ್ಯಾಟರಿ ಆಯ್ಕೆಯನ್ನು ಹೊಂದಿರಲಿದೆ. ಇದನ್ನು ಟಾಟಾ ಕಂಪನಿಯ ಎರಡನೇ ತಲೆಮಾರಿನ ಇವಿ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳದ್ದೆ ದರ್ಬಾರ್ ಶುರುವಾಗಿದ್ದು, ಎಲ್ಲಾ ಕಂಪನಿಗಳು ಕೂಡ ಹೀಗೆ ಗ್ರಾಹಕರನ್ನು ಸೆಳೆಯನ್ನು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಅದರಲ್ಲೂ ಇದೀಗ ಟಾಟಾ ಹೊಸ ಮೂರು ಕಾರುಗಳನ್ನು ಇಳಿಸಿ ತಾವು ಏನು ಕಡಿಮೆಯಿಲ್ಲ ಎಂಬಂತೆ ತನ್ನ ದರ್ಬಾರ್ ಶುರು ಮಾಡಲು ಮುಂದಾಗಿದ.












Click it and Unblock the Notifications