Tata Curvv: ಲ್ಯಾಂಬೋರ್ಗಿನಿ ವಿನ್ಯಾಸದ ಟಾಟಾ ಕರ್ವ್ ಇವಿ ಇಂದಿನಿಂದಲೇ ಬುಕ್ಕಿಂಗ್ ಆರಂಭ
Tata Curvv EV: ಭಾರತದ ದೈತ್ಯ ಆಟೋಮೊಬೈಲ್ ಕಂಪನಿಗಳಲ್ಲೊಂದಾದ ಟಾಟಾ ಕಂಪನಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೈಗೆಟಕುವ ದರದಲ್ಲಿ, ಉತ್ತಮ ಸೌಲಭ್ಯಗಳುಳ್ಳ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಹಾಗೆಯೇ ಇದೀಗ ಇಂದು (ಆಗಸ್ಟ್ 12) ಟಾಟಾ ಕರ್ವ್ ಇವಿ (Tata Curvv EV) ಬುಕ್ಕಿಂಗ್ ಆರಂಭವಾಗಿದೆ. ಹಾಗಾದರೆ ಇದರ ದರ, ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಥೇಟ್ ಲ್ಯಾಬೋರ್ಗಿನಿ ವಿನ್ಯಾಸದಲ್ಲಿರುವ ಟಾಟಾ ಕರ್ವ್ ಇವಿ ಕಾರು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದು, ಇದು ಎರಡು ಮಾದರಿಗಳಲ್ಲಿ ಲಭ್ಯವಿದೆ. ಎಲೆಕ್ಟ್ರಿಕ್ (EV) ಮತ್ತು ಐಸಿಇಗಳಲ್ಲಿ ಲಭ್ಯವಿದೆ. ಈ ಎರಡು ಆಯ್ಕೆಯಲ್ಲಿ ಟಾಟಾ ಕರ್ವ್ ಇವಿ ಬುಕ್ಕಿಂಗ್ ಇಂದಿನಿಂದ (ಆಗಸ್ಟ್ 12) ಬುಕ್ಕಿಂಗ್ ಆರಂಭವಾಗಿದೆ. ಇದು ಕೂಪೆ ಶೈಲಿಯ ಎಸ್‌ಯುವಿ ಆಗಿದ್ದು, ಅಲ್ಲದೆ, ನೋಡಲು ಅತ್ಯಾಕರ್ಷಕವಾಗಿದ್ದು, ಗ್ರಾಹಕರನ್ನು ಆಯಸ್ಕಾಂತದಂತೆ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಟಾಟಾ ಕರ್ವ್ ವಿಶೇಷತೇ ಏನು?: ಕರ್ವ್ ಟಾಟಾ ನೆಕ್ಸಾನ್‌ಗಿಂತ 313 ಎಂಎಂ ಉದ್ದವಾಗಿದೆ. ಇದು 1.2 ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಡೀಸೆಲ್ ರೂಪಾಂತರದಲ್ಲಿ, ನೆಕ್ಸಾನ್‌ನಂತೆ 1.5 ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ, 450-500 ಕಿಲೋ ಮೀಟರ್‌ವರೆಗೂ ಮೈಲೇಜ್ ಕೊಡಲಿದೆ ಎಂದು ಹೇಳಲಾಗುತ್ತಿದೆ.
ಈ ಕಾರು ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. 45 ಕೆಡಬ್ಲ್ಯೂಹೆಚ್ (kWh) ಬ್ಯಾಟರಿಯನ್ನು ಒಳಗೊಂಡಿರುವ ರೂಪಾಂತರ ಸಂಪೂರ್ಣ ಚಾರ್ಜ್‌ನಲ್ಲಿ 500 ಕಿಲೋ ಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 150 ಪಿಎಸ್ ಗರಿಷ್ಠ ಶಕ್ತಿ ಹಾಗೂ 215 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ರೂಪಾಂತರ ಪೂರ್ತಿ ಚಾರ್ಜ್‌ನಲ್ಲಿ 500 ಕಿಲೋ ಮೀಟರ್ ಕ್ರಮಿಸುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 167 ಪಿಎಸ್ ಗರಿಷ್ಠ ಶಕ್ತಿ ಹಾಗೂ 215 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದೆ. ಕರ್ವ್ ಇವಿ ಬ್ಯಾಟರಿಯು ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 10 ರಿಂದ 80% ಚಾರ್ಜ್ ಆಗಲು 40 ನಿಮಿಷ ತೆಗೆದುಕೊಳ್ಳುತ್ತದೆ.
ಈ ಕಾರಿನಲ್ಲಿ ಒಂದು ಕುಟುಂಬ ಆರಮವಾಗಿ ಪ್ರಯಾಣ ಮಾಡಬಹುದಾಗಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಏರ್ ಪ್ಯೂರಿಫೈಯರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೊರೊಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ ಜೆಬಿಎಲ್-ಸೌಂಡ್ ಸಿಸ್ಟಮ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಾಟಾ ಕರ್ವ್ ಇವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಅದಕ್ಕಾಗಿ 6 ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹಾಗೂ 360 - ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಟಾಟಾ ಕರ್ವಿ ಇವಿ ದರ: ಟಾಟಾ ಕರ್ವಿ ಇವಿ ಕಾರಿನ ಎಕ್ಸ್‌ಶೋರೂಂ ದರ 17.49 ಲಕ್ಷ ರೂಪಾಯಿ ಆಗಿದ್ದು, ಟಾಪ್ ಎಂಡ್ ದರ 21.99 ಲಕ್ಷ ರೂಪಾಯಿ ಆಗಿದೆ. ಟಾಟಾ ಕರ್ವ್ ಭಾರತದಲ್ಲಿ ಕೂಪ್ ಶೈಲಿಯ ಎಸ್‌ಯುವಿ ವಿಭಾಗದಲ್ಲಿ ಹೊಸ ವಿನ್ಯಾಸದಾಗಿದ್ದು, ಇದು ತನ್ನ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.












Click it and Unblock the Notifications