ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ಮಾಹಿತಿಗಳು ರಿವೀಲ್‌-ಮಾಹಿತಿ ಇಲ್ಲಿದೆ ತಿಳಿಯಿರಿ

Tata Curvv Electric Car: ಆಟೋಮೊಬೈಲ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಈಗಾಗಲೇ ಮಾರುಕಟ್ಟೆಗಳಲ್ಲಿ ಬರೀ ಎಲೆಕ್ಟ್ರಿಕ್‌ ವಾಹನಗಳದ್ದೇ ಸದ್ದು ಜೋರಾಗಿದೆ. ಹಾಗೆಯೇ ವಿನೂತನ ಕಾರು ಮಾದರಿಗಳ ಮೂಲಕ ಎಸ್‌ಯುವಿ ವಿಭಾಗದಲ್ಲಿ ಒಂದೆಜ್ಜೆ ಮುಂದೆ ಸಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಕರ್ವ್ ಇವಿ ಅನಾವರಣಗೊಳಿಸಿದ್ದು, ಇದೀಗ ಇದರ ಬ್ಯಾಟರಿ ಆಯ್ಕೆಯ ಪ್ರಮುಖ ಮಾಹಿತಿಯನ್ನು ರಿವೀಲ್ ಮಾಡಿದೆ.

ಹೊಸ ಕರ್ವ್ ಇವಿ ಮಾದರಿಗಾಗಿ ಎರಡು ಬ್ಯಾಟರಿ ಆಯ್ಕೆ ಲಭ್ಯ ಇರಲಿದ್ದು, ಈ ಕಾರಿನ ಆರಂಭಿಕ ಮಾದರಿಯಾಗಿ 40.5 ಕೆವಿಹೆಚ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ 55 ಕೆವಿಹೆಚ್ ಬ್ಯಾಟರಿ ಆಯ್ಕೆ ಇರಲಿದೆ. 40.5 ಕೆವಿಹೆಚ್ ಬ್ಯಾಟರಿ ಪ್ಯಾಕ್ ಈಗಾಗಲೇ ನೆಕ್ಸಾನ್ ಇವಿ ಮಾದರಿಯಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸದಾಗಿ ನೀಡಲಾಗುತ್ತಿರವ 55 ಕೆವಿಹೆಚ್ ಬ್ಯಾಟರಿ ಹೆಚ್ಚು ಮೈಲೇಜ್ ನೀಡಲಿದೆ.

Tata Curve Electric Car Battery s informations Revealed Know details

ಇನ್ನು ಇದರ ಆರಂಭಿಕ ಮಾದರಿಯು ಒಂದು ಬಾರಿ ಚರ್ಚ್‌ ಮಾಡಿದರೆ, 465 ಕಿಲೋ ಮೀಟರ್‌ ಮೈಲೇಜ್ ನೀಡಿದರೆ, ಟಾಪ್ ಎಂಡ್ ಮಾದರಿಯು 550 ಕಿಲೋ ಮೀಟರ್‌ ಮೈಲೇಜ್ ಕೊಡಲಿದೆ ಎನ್ನುವ ಮಾತಿ ಲಭ್ಯವಾಗಿದೆ.

ಕರ್ವ್ ಹೊಸ ಕಾರಿನ ಟಾಪ್ ಎಂಡ್ ಮಾದರಿಯು ಹೆಚ್ಚಿನ ಸೌಲಭ್ಯಗಳೊಂದಿಗೆ ಉತ್ತಮ ಮೈಲೇಜ್ ಕೊಡಲಿದೆ. ಇದರ ದತ ಸ್ವಲ್ಪ ಮಟ್ಟಿಗೆ ದುಬಾರಿ ಆಗಿದೆ. ಆದ್ದರಿಂದ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಮಾದರಿಯ ಬ್ಯಾಟರಿ ಆಯ್ಕೆ ಮಾಡಬಹುದಾಗಿದ್ದು, ಆರಂಭಿಕ ಮಾದರಿಗೂ ಅನ್ವಯಿಸುವಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ.

ಈಗಾಗಲೇ ಅನಾವರಣಗೊಂಡಿರುವ ಟಾಟಾ ಕರ್ವ್ ಇವಿ ಅಗಸ್ಟ್ 7ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಇದರ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಸಖತ್ ಸ್ಪೋರ್ಟಿಯಾಗಲಿದೆ. ಹೊಸ ಕಾರಿನಲ್ಲಿ ಎತ್ತರದ ವ್ಹೀಲ್‌ನೊಂದಿಗೆ ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯೆರೆನ್ಸ್ ನೀಡಲಾಗಿದ್ದು, ಇದು ವೇಗ ಚಾಲನೆಯ ಸಂದರ್ಭದಲ್ಲೂ ಉತ್ತಮ ರೀತಿಯಲ್ಲಿ ನಿಯಂತ್ರಣ ಹೊಂದಿರಲಿದೆ.

ಹೊಸ ಕರ್ವ್ ಇವಿ ಕಾರು ಮಾದರಿಯು ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್‌ನಲ್ಲಿ ತಯಾರಾಗಿದ್ದು, ಇದು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೂಪೆ ಎಸ್‌ಯುವಿ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
ಜೊತೆಗೆ ಹೊಸ ಇವಿ ಮಾದರಿಯಲ್ಲಿ ನೆಕ್ಸಾನ್ ಇವಿಗಿಂತೂ ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳು ಮತ್ತು ಹೊಸ ಮಾನದಂಡಗಳನ್ನು ಒಳಗೊಂಡ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಇನ್ನು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹರಿಗೆ ಪನೊರಮಿಕ್ ಗ್ಲಾಸ್ ರೂಫ್ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಅಲ್ಲದೆ, ಕ್ಯಾಬಿನ್‌ ಒಳಭಾಗದಲ್ಲೂ ಹೆಚ್ಚಿನ ಮಟ್ಟದ ಸೌಲಭ್ಯಗಳನ್ನು ನೀಡಲಾಗಿದ್ದು, ಇದು ದೂರದ ಪ್ರಯಾಣಕ್ಕೂ ಅನೂಕರ ಆಗುವಂತಹ ಸ್ಥಳಾವಕಾಶವನ್ನು ಒಳಗೊಂಡಿದೆ. ಈ ಮೂಲಕ ಹೊಸ ಕರ್ವ್ ಕಾರು ಎಲೆಕ್ಟ್ರಿಕ್‌ನಲ್ಲಿ ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದೆ.

ಆದರೆ ಇದೀಗ ಟಾಟಾ ಕಂಪನಿಯು ಕರ್ವ್ ಇವಿ ಮಾತ್ರ ಬಿಡುಗಡೆ ಮಾಡುತ್ತಿದ್ದು, 2025ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳನ್ನು ಪರಿಚಯಿಸಲಿದೆ. ಆದ್ದರಿಂದ ಕರ್ವ್ ಇವಿ ಮುಂಬರುವ ಕೆಲವೇ ದಿನಗಳಲ್ಲಿ ಗ್ರಾಹಕರ ಕೈಸೇರಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ 17ರಿಂದ 22,00,000 ರೂಪಾಯಿ ಬೆಲೆಯಲ್ಲಿ ಮಾರಾಟ ಆಗಬಹುದಾಗಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+