Tata Altroz Racer: ಬಿಡುಗಡೆಗೂ ಮುನ್ನ ಗ್ರಾಹಕರಲ್ಲಿ ಭಾರೀ ಕುತೂಹಲ ಕೆರಳಿಸಿದ ಟಾಟಾದ ಹೊಸ ಮಾದರಿ ಕಾರಿನ ಟೀಸರ್
Tata Altroz Racer: ಭಾರತದ ದೈತ್ಯ ಕಂಪನಿಗಳಲ್ಲೊಂದಾದ ಟಾಟಾ ಆಟೋ ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದೆ. ಅಲ್ಲದೆ, ಈ ಕಂಪನಿ ಹೊಸ ಮಾದರಿಯ ಕಾರುಗಳನ್ನು ಬಿಡುವ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಇದೀಗ ಆಲ್ಟ್ರೊಜ್ ರೇಸರ್ ಮಾದರಿಯ ಕಾರು ಬಿಡುಗಡೆಯ ಬಗ್ಗೆ ಮಹತ್ವದ ಸುಳಿವೊಂದನ್ನು ನೀಡಿದೆ. ಹಾಗಾದರೆ ಇದರ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Tata Altroz Racer ಕಾರನ್ನು 2023ರಲ್ಲಿ ನವದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಟಾಟಾ ಕಂಪನಿಯು ಇದೀಗ ಬಿಡುಗಡೆಯ ಸುಳಿವು ಕೊಟ್ಟಿದ್ದು, ಇದು ಗ್ರಾಹಕರನ್ನು ಮತ್ತಷ್ಟು ಉತ್ಸುಕರನ್ನಾಗಿ ಮಾಡಿದೆ.

ಟಾಟಾ ಕಂಪನಿ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಆಲ್ಟ್ರೊಜ್ ಕಾರಿನಲ್ಲಿ ಈ ಹಿಂದೆ ಟರ್ಬೊ ಎಡಿಷನ್ ಪರಿಚಯಿಸಿದ್ದು, ಇದೀಗ ಇನ್ನು ಹೆಚ್ಚಿನ ಸಾಮರ್ಥ್ಯದ ಪರ್ಫಾಮೆನ್ಸ್ ಮತ್ತು ಹೊಸ ವಿನ್ಯಾಸದ ಸ್ಪೋರ್ಟಿ ಫಿರ್ಚಸ್ ಒಳಗೊಂಡಿರುವ ರೇಸರ್ ಎಡಿಷನ್ ಅನ್ನು ಬಿಡಲು ಸಿದ್ಧವಾಗಿದೆ.
ಇದು ಬೇರೆ ಸಾಮಾನ್ಯ ಕಾರಿಗಿಂತಲೂ ಹೆಚ್ಚು ಪವರ್ ಫುಲ್ ಮತ್ತು ಸ್ಪೋರ್ಟಿ ಆಗಿರುವ ನೂತನ ಆಲ್ಟ್ರೊಜ್ ರೇಸರ್ ಕಾರು ಮಾದರಿಯಲ್ಲಿ 1.2 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಇದು ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋ ಗೇರ್‌ಬಾಕ್ಸ್ ಆಯ್ಕೆಯನ್ನು ಕೂಡ ಒಳಗೊಂಡಿದೆ. ಇದು 120 ಹಾರ್ಸ್ ಪವರ್ & 170 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಈ ಮೂಲಕ ಹೊಸ ಹ್ಯುಂಡೈ ಐ20 ಎನ್‌ಲೈನ್ ಕಾರಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೊಸ ವಿನ್ಯಾಸಲ್ಲಿ ತಯಾರಾಗಿರುವ ಈ ಕಾರು ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಿಂದಾಗಿ ಸ್ಪ್ರೋಟಿ ಲುಕ್ ಮೂಲಕ ಗ್ರಾಹಕರರನ್ನು ಆಯಸ್ಕಾಂತದಂತೆ ತನ್ನೆಡೆಗೆ ಸೆಳೆಯಲಿದೆ. ಅಲ್ಲದೆ, ಮುಂಭಾಗದ ಬಂಪರ್‌ಗೆ ಹೊಸ ಲುಕ್ ನೀಡಲಾಗಿದೆ. ಹಾಗೂ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ಚಕ್ರಗಳು, ಬಾಡಿ ಡಿಕಾಲ್‌ಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಅನ್ನು ಹೊಂದಿರಲಿದೆ.
ಈ ಕಾರಿನ ಕ್ಯಾಬಿನ್‌ನ ಒಳಭಾಗವನ್ನು ಕೂಡ ಹೊಸ ವಿನ್ಯಾಸದಲ್ಲಿ ಗ್ರಾಹಕರನ್ನು ಆಕರ್ಷಿಸುವ ರೀತಿಯಲ್ಲಿ ತಯಾರು ಮಾಡಲಾಗಿದೆ. ಜೊತೆಗೆ ಉತ್ತಮ ಆಸನಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಹೆಚ್ಚು ಗಮನ ಸೆಳೆಯಲಿವೆ. ಹರ್ಮನ್ ಆಡಿಯೋ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಷನ್ ಸೀಟುಗಳು ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಒಳಗೊಂಡಿದೆ.
ಇನ್ನು ಈ ಹೊಸ ಮಾದರಿಯ ಕಾರು ಸಾಮಾನ್ಯ ಮಾದರಿಗಿಂತಲೂ 1,00,000- 1.50 ಲಕ್ಷ ರೂಪಾಯಿಯಷ್ಟು ದುಬಾರಿ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಟಾಟಾ ಮೊದಲಿನಿಂದಲೂ ಬೇರೆ ಬೇರೆ ಕಂಪನಿಗಳ ಹೊಸ ಮಾದರಿಯ ವಾಹನಗಳಿಗೆ ತಾನು ಕೂಡ ಏನು ಕಡಿಮೆಯಿಲ್ಲವೆಂಬಂತೆ ಪ್ರತಿಸ್ಪರ್ಧಿಯಾಗುವಂತಹ ಹೊಸ ಮಾದರಿಯ ಕಾರುಗಳನ್ನು ಬಿಡುತ್ತಲೇ ಬರುತ್ತಿದೆ.












Click it and Unblock the Notifications