Tata Altroz Facelift: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಅತ್ಯಾಕರ್ಷಕ ಆಲ್ಟ್ರೋಜ್ ಫೇಸ್‌ಲಿಫ್ಟ್, ವಿಶೇಷತೆ ದರಗಳ ಮಾಹಿತಿ
ಟಾಟಾ ಮೋಟರ್ಸ್ ಯುವಪೀಳಿಗೆಯ ಇಷ್ಟಕ್ಕೆ ತಕ್ಕಂತೆ ಹೊಸ ಹೊಸ ಮಾದರಿಯ ಕಾರ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಲೇ ಬಂದಿದೆ. ಇದು ಭಾರತ್ ಪ್ರಮುಖ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. ಹಾಗೆಯೇ ಇದೀಗ ಶೀಘ್ರದಲ್ಲೇ ಮತ್ತೆ ಅತ್ಯಾಕರ್ಷಕ ಹೊಸ ಕಾರನ್ನು ಪರಿಚಯಿಸಲು ಮುಂದಾಗಿದೆ. ಹಾಗಾದರೆ ಇದರ ವಿಶೇಷತೆ, ದರಗಳು ಹಾಗೂ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ತನ್ನ ಇತ್ತೀಚಿನ ಐಷಾರಾಮಿ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಇದೆ. ಅತ್ಯಾಧುನಿಕ ವಿಶೇಷತೆಗಳನ್ನು ಹೊಂದಿರುವ ಎಸ್‌ಯುವಿ ಅದರ ಅಸಾಧಾರಣ ವಿನ್ಯಾಸ, ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ದೃಢವಾದ ಕಾರ್ಯಕ್ಷಮತೆಯೊಂದಿಗೆ ಹೊಸ ಟ್ರೆಂಡ್ ಸೃಷ್ಟಿಸಲು ಮುಂದಾಗಿದೆ. ಇದು ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿ ಆಗುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಪ್ರತಿಕ್ರಿಯೆಗಳು ಬರುತ್ತಿವೆ.

ಈ ಕಾರ್‌ನ ವಿಶೇಷತೆಗಳೇನು?
* ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಅನ್ನು ಅನೇಕ ಆಧುನಿಕ ಮತ್ತು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇನ್ನು ಮೂಲಗಳ ಪ್ರಕಾರ, ಇದರ ಇಂಟೀರಿಯರ್ ಕ್ಯಾಬಿನ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ.
* ಇದು 7.0 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್ ಮತ್ತು 6 ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತಿದೆ.
* ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ನೀಡಿ ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಗರಿಷ್ಠ ರಕ್ಷಣೆಯನ್ನು ಖಾತ್ರಿಪಡಿಸುತ್ತವೆ.
ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಎರಡು ಅಸಾಧಾರಣ ಎಂಜಿನ್‌ಗಳ ಆಯ್ಕೆಯನ್ನು ಹೊಂದಿದ್ದು, ಇದು 1.2L NA ಪೆಟ್ರೋಲ್ ಮತ್ತು 1.5L ಎಂಜಿನ್ ಅನ್ನು ಹೊಂದಿರುತ್ತದೆ. ಇದು ಕ್ರಮವಾಗಿ 88bhp ಮತ್ತು 110bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೆ, ಈ ಹ್ಯಾಚ್‌ಬ್ಯಾಕ್‌ನಲ್ಲಿ ಟ್ವಿನ್-ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದೊಂದಿಗೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.
ಇದರ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡಿಸಿಟಿಯೊಂದಿಗೆ ಜೋಡಿಸಬಹುದಾಗಿದೆ. ನಿಮ್ಮ ಅಗತ್ಯತೆಗೆ ಅನುಗುಣವಾಗಿ ನೀವು ಪೆಟ್ರೋಲ್ ಅಥವಾ ಡೀಸೆಲ್ ವಾಹನ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೂ, ನೀವು ಅಸಾಧಾರಣ ಕಾರ್ಯಕ್ಷಮತೆ ಮತ್ತು ಪ್ರಭಾವಶಾಲಿ ಇಂಧನ ದಕ್ಷತೆಯನ್ನು ನಿರೀಕ್ಷಿಸಬಹುದಾಗಿದೆ. ಇನ್ನೂ ಈ ವಾಹನದ ದರ ನಿಗದಿ ಆಗಿಲ್ಲ.
ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ 2024ರ ದರದ ಬಗ್ಗೆ ಕಂಪನಿಯು ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈವರೆಗೆ ಬಿಡುಗಡೆ ಆಗಿರುವ ವರದಿಗಳ ಪ್ರಕಾರ ಅದರ ಬೆಲೆ 6.65 ಲಕ್ಷದಿಂದ ಆರಂಭವಾಗಬಹುದು ಹಾಗೂ ಟಾಪ್ ಎಂಡ್ ಬೆಲೆ 10.80 ಲಕ್ಷವಿರಬಹುದು ಎಂದು ಹೇಳಲಾಗುತ್ತಿದೆ.
ಟಾಟಾದ ಈ ಐಷಾರಾಮಿ ಕಾರು ಡಾರ್ಕ್ ಎಡಿಷನ್, ಓರ್ಕಸ್ ವೈಟ್, ಮಿಡ್‌ನೈಟ್ ಬ್ಲೂ, ಗೋಲ್ಡನ್ ಸ್ಕೈ, ಹೈಲ್ಯಾಂಡ್ ಸಿಲ್ವರ್ ಮತ್ತು ಪ್ಯಾರಿಸ್ ಬ್ಲೂ ಸೇರಿದಂತೆ ಆರು ಬೆರಗುಗೊಳಿಸುವ ಬಣ್ಣದ ಆಯ್ಕೆಗಳೊಂದಿಗೆ ಇದು ಲಭ್ಯವಿದ್ದು, ನಿಮಗೆ ಬೇಕಾದ ಬಣ್ಣವನ್ನು ಕಸ್ಟಮೈಸ್ ಮಾಡಬಹುದಾಗಿದೆ. ಕ್ರೆಟಾ, ಹ್ಯುಂಡೈ i20, ಮಾರುತಿ ಬಲೆನೊ ಮತ್ತು ಫೋಕ್ಸ್‌ವ್ಯಾಗನ್ ಪೋಲೊಗಳಂತಹ ಕಾರ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂಉ Altroz ಫೇಸ್‌ಲಿಫ್ಟ್ ಎನ್ನಲಾಗುತ್ತಿದೆ.












Click it and Unblock the Notifications