• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದಾಖಲೆ ಸೃಷ್ಟಿಸಿದ ದಕ್ಷಿಣ ಕೊರಿಯಾದ 'ಕೃತಕ ಸೂರ್ಯ'

|

ಸೋಲ್, ಡಿಸೆಂಬರ್ 29: ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾ ಹೊಸ ವಿಶ್ವದಾಖಲೆ ಸೃಷ್ಟಿಸಿದೆ. ಸುಮಾರು 20 ಸೆಕೆಂಡುಗಳ ಕಾಲ 100 ಮಿಲಿಯನ್ ಡಿಗ್ರಿಯಲ್ಲಿ ಕೃತಕ ಸೂರ್ಯನನ್ನು ಬೆಳಗಿಸಿದೆ. ವಾಸ್ತವ ಸೂರ್ಯನ ಕೇಂದ್ರ ಭಾಗವು 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಮಾತ್ರ ಉರಿಯಬಲ್ಲದು.

ದಕ್ಷಿಣ ಕೊರಿಯಾದ ಭೌತ ವಿಜ್ಞಾನಿಗಳು ಕೆಸ್ಟಾರ್ (ಕೊರಿಯಾ ಸೂಪರ್ ಕಂಡಕ್ಟಿಂಗ್ ಟೊಕಾಮ್ಯಾಕ್ ಅಡ್ವಾನ್ಸಡ್ ರೀಸರ್ಚ್) ಎಂಬ ವಾಹನ ಸಮ್ಮಿಳನ ಸಾಧನವಾದ 'ಕೃತಕ ಸೂರ್ಯ'ನನ್ನು ಬಳಸಿ ಪ್ರಯೋಗ ನಡೆಸಿದ್ದಾರೆ. ಈ ಸಮ್ಮಿಳನಕ್ಕೆ ವಿಜ್ಞಾನಿಗಳು 100 ಮಿಲಿಯನ್ ಡಿಗ್ರಿ ಉಷ್ಣಾಂಶವನ್ನು ಮೀರಬಲ್ಲ ಬಿಸಿ ಅಯಾನ್‌ಗಳಿಂದ ಸಂಯೋಜಿತಗೊಂಡ ಜಲಜನಕದ ಒಂದು ಪ್ಲಾಸ್ಮಾವನ್ನು ಉಪಯೋಗಿಸಿದ್ದಾರೆ. ಅಯಾನ್‌ಗಳನ್ನು ಮರಳಿ ಪಡೆಯಲು ಅತ್ಯಧಿಕ ತಾಪಮಾನವನ್ನು ನಿಭಾಯಿಸುವುದು ಅಗತ್ಯವಾಗಿದೆ.

ಸೂರ್ಯನ ಮೇಲೆ 'ಕ್ಯಾಂಪ್‌ಫೈರ್' ಕಂಡ ಬಾಹ್ಯಾಕಾಶ ವಿಜ್ಞಾನಿಗಳು..!

ರಾಷ್ಟ್ರೀಯ ಕೃತಕ ಸೂರ್ಯ ಪರಮಾಣು ಸಮ್ಮಿಳನ ರಿಯಾಕ್ಟರ್ ಅನ್ನು ಹೊತ್ತಿಸಿ, 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣತೆಯಲ್ಲಿ 20 ಸೆಕೆಂಡುಗಳ ಕಾಲ ಪ್ಲಾಸ್ಮಾವನ್ನು ಹೆಚ್ಚಿನ ತಾಪಮಾನದಲ್ಲಿ ನಿಭಾಯಿಸುವ ಮೂಲಕ ಈ ಸಂಶೋಧಕರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಮುಂದೆ ಓದಿ.

ಮೂರು ಕೇಂದ್ರಗಳ ಸಹಭಾಗಿತ್ವ

ಮೂರು ಕೇಂದ್ರಗಳ ಸಹಭಾಗಿತ್ವ

ಕೊರಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಷನ್ ಎನರ್ಜಿ (ಕೆಎಫ್‌ಇ) ಸಂಶೋಧನಾ ಕೇಂದ್ರ ಕೆಸ್ಟಾರ್, ಸೋಲ್ ನ್ಯಾಷನಲ್ ಯುನಿವರ್ಸಿಟಿ (ಎಸ್‌ಎನ್‌ಯು) ಮತ್ತು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಜಂಟಿ ಪ್ರಯೋಗದಲ್ಲಿ ನವೆಂಬರ್ 24ರಂದು ಈ ಸಾಧನೆಯನ್ನು ಮಾಡಿದೆ.

ಭವಿಷ್ಯಕ್ಕೆ ನಿರ್ಣಾಯಕ ಸಾಧನೆ

ಭವಿಷ್ಯಕ್ಕೆ ನಿರ್ಣಾಯಕ ಸಾಧನೆ

'ಫ್ಯೂಷನ್ ಎನರ್ಜಿಯನ್ನು ಈಡೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ 100 ಮಿಲಿಯನ್ ಪ್ಲಾಸ್ಮಾಗಳ ಸುದೀರ್ಘ ಕಾರ್ಯಾಚರಣೆಗೆ ತಂತ್ರಜ್ಞಾನಗಳು ಅಗತ್ಯವಾಗಿದ್ದವು. ಅಧಿಕ ದಕ್ಷತೆಯ ಪ್ಲಾಸ್ಮಾಗಳ ಸುದೀರ್ಘಾವಧಿ ಕಾರ್ಯಾಚರಣೆಯಲ್ಲಿ ತಂತ್ರಜ್ಞಾನವನ್ನು ಹೊಂದುವ ಸ್ಪರ್ಧೆಯಲ್ಲಿ 20 ಸೆಕೆಂಡುಗಳ ಕಾಲ ಪ್ಲಾಸ್ಮಾವನ್ನು ಅಧಿಕ ಉಷ್ಣಾಂಶದಲ್ಲಿ ನಿಭಾಯಿಸಿದ್ದು ಕೆಸ್ಟಾರ್‌ನ ಯಶಸ್ಸಾಗಿದೆ. ಇದು ಭವಿಷ್ಯದಲ್ಲಿ ಕಮರ್ಷಿಯಲ್ ನ್ಯೂಕ್ಲಿಯರ್ ಫ್ಯೂಷನ್ ರಿಯಾಕ್ಟರ್‌ಗೆ ಇದು ಅತ್ಯಂತ ನಿರ್ಣಾಯಕ ಅಂಶವಾಗಲಿದೆ' ಎಂದು ಕೆಎಫ್‌ಇದಲ್ಲಿನ ಕೆಸ್ಟಾರ್ ಸಂಶೋಧನಾ ಕೇಂದ್ರದ ನಿರ್ದೇಶಕ ಸಿ-ವೂ ಯೂನ್ ಹೇಳಿದ್ದಾರೆ.

ಕಪ್ಪುಕುಳಿಗೂ ಕೂದಲು, ಬ್ಲ್ಯಾಕ್ ಹೋಲ್‌ನ ಭಯಾನಕ ರಹಸ್ಯ

2018ರಲ್ಲಿ ಮೊದಲ ಸಾಧನೆ

2018ರಲ್ಲಿ ಮೊದಲ ಸಾಧನೆ

ಕಳೆದ ವರ್ಷದ ಪ್ಲಾಸ್ಮಾ ಕಾರ್ಯಾಚರಣೆಯು ಎಂಟು ಸೆಕೆಂಡುಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಈ ಬಾರಿ ಅದನ್ನು ದಾಟಿ ಹೊಸ ದಾಖಲೆ ನಿರ್ಮಿಸಲಾಗಿದೆ. 2018ರಲ್ಲಿ ಕೆಸ್ಟಾರ್ ಮೊದಲ ಬಾರಿಗೆ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ತಲುಪಿತ್ತು. ಆದರೆ ಆಗ ಅದು ಕೇವಲ 1.5 ಸೆಕೆಂಡ್‌ವರೆಗೆ ಉಳಿದುಕೊಂಡಿತ್ತು.

ಭೂಮಿಯಲ್ಲಿ ಫ್ಯೂಷನ್ ಮರುಸೃಷ್ಟಿ

ಭೂಮಿಯಲ್ಲಿ ಫ್ಯೂಷನ್ ಮರುಸೃಷ್ಟಿ

ಕೆಎಫ್‌ಇಯ ಕೆಸ್ಟಾರ್ 2008ರಲ್ಲಿ ತನ್ನ ಮೊದಲ ಫ್ಯೂಷನ್ ಸಾಧಿಸಿತ್ತು. 2025ರ ವೇಳೆಗೆ ಫ್ಯೂಷನ್ ಉರಿಸುವಿಕೆಯನ್ನು 300 ಸೆಕೆಂಡುಗಳ ಕಾಲ ವಿಸ್ತರಿಸುವುದು ಅದರ ಗುರಿಯಾಗಿದೆ. ಸೂರ್ಯನಿಂದ ಸಂಭವಿಸುವ ಫ್ಯೂಷನ್ ಪ್ರತಿಕ್ರಿಯೆಗಳನ್ನು ಭೂಮಿಯಲ್ಲಿ ಮರುಸೃಷ್ಟಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಟೊಕಾಮ್ಯಾಕ್ ಸಾಧನಗಳನ್ನು ಬಳಸಲಾಗುತ್ತಿದೆ. ಜಗತ್ತಿನಾದ್ಯಂತ ಸುಮಾರು 250 ಟೊಕಾಮ್ಯಾಕ್ ಸಾಧನಗಳಿವೆ.

English summary
South Korea's KFE research centre has managed to light up an artificial sun at 100 million degrees for a world record 20 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X