ಕಿಯಾ, ಹ್ಯುಂಡೈ, ಟಾಟಾ, ಮಹೀಂದ್ರಾಗೆ ಸೆಡ್ಡು ಹೊಡೆಯಲು ಸಜ್ಜಾಗುತ್ತಿದೆ ಸ್ಕೋಡಾ ಕಂಪನಿಯ ಹೊಸ ಕಾರು
ಆಟೋಮೊಬೈಲ್ ದಿನಿದಿಂದ ದಿನಕ್ಕೆ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ತಾವೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಎಲ್ಲಾ ವಾಹನ ತಯಾರಿಕಾ ಕಂಪನಿಗಳು ಹೊಸ ಹೊಸ ವಿನ್ಯಾಸದಲ್ಲಿ ವಾಹನಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ನು ಇದೀಗ ಸ್ಕೋಡಾ ಕಂಪನಿಯ ಟಾಟಾ ನೆಕ್ಸಾನ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹಾಗಾದರೆ ಇದರ ವಿಶೇಷತೆ & ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಭಾರತದಲ್ಲಿ ಇದೀಗ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಸ್ಕೋಡಾ ಕಂಪನಿಯು ಕೂಡ ಈ ವಿಭಾಗದಲ್ಲಿ ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕಾರು ಇದೀಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕುಶಾಕ್ ಎಸ್‌ಯುವಿಗೂ ಪೈಪೋಟಿ ನೀಡಲಿದ್ದು, ಇದು ಉತ್ತಮ ಸೌಲಭ್ಯಗಳೊಂದಿಗೆ ಹೆಚ್ಚೆಚ್ಚು ಗ್ರಾಹಕರನ್ನು ತನ್ನೆಡೆಗೆ ಸೆಳೆಯಲಿದೆ.

ಹೊಸ ಸಬ್ ಕಂಪ್ಯಾಕ್ಟ್ ಎಸ್ಯುವಿಅನ್ನು ಪ್ರತಿಸ್ಪರ್ಧಿ ಕಾರುಗಳಿಂತಲೂ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಕಾರುಗಳಿಗೆ ಪ್ರಬಲ ಪೈಪೋಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸ್ಕೋಡಾ ಕಂಪನಿಯು ಹೊಸ ಕಾರುಗಳ ಬೆಲೆ ಇಳಿಕೆಗಾಗಿ ಪೋಕ್ಸ್ ವ್ಯಾಗನ್ ಕಂಪನಿ ಜೊತೆಗೂಡಿ ಇಂಡಿಯಾ 2.0 ಯೋಜನೆ ಪ್ರಾರಂಭ ಮಾಡಿದ್ದು, ಈ ಹೊಸ ಯೋಜನೆಯಡಿ ಶೇಕಡ 90ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಉಪಯೋಗಿಸುವ ಗುರಿ ಹೊಂದಿತ್ತು. ಆದರೆ ಕಾರಣಾಂತರಗಳಿಂದ ಸ್ಥಳೀಯ ಬಿಡಿಭಾಗಗಳ ಬಳಕೆ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಕಾರುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಈ ಬಾರಿ ಹೊಸ ಕಾರು ಬಿಡುಗಡೆಯ ವೇಳೆಗೆ ಮತ್ತೆ ತಪ್ಪು ಮರಕಳಿಸದಂತೆ ಕಂಪನಿಯು ಮುಂದಾಗಿದೆ.
ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ವೇಳೆ ಸ್ಕೋಡಾ ಕಂಪನಿಯು ಈ ಬಾರಿ ಶೇಕಡ 75 ರಿಂದ ಶೇಕಡ 76ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡುವ ಗುರಿಯನ್ನು ಹೊಂದಿದ್ದು, ಈ ಮೂಲಕ ಆಕರ್ಷಕ ಬೆಲೆಯಲ್ಲಿ ಹೊಸ ಕಾರನ್ನು ರಸ್ತೆಗಿಳಿಸುವ ಯೋಜನೆ ಹಾಕಿಕೊಂಡಿದೆ.
ಜೊತೆಗೆ ಹೊಸ ಕಾರು ಕುಶಾಕ್ ಕಾರಿನಲ್ಲಿರುವಂತೆ ಎಂಜಿನ್ ಆಯ್ಕೆ ಜೊತೆಗೆ ಹಲವು ಸೌಲಭ್ಯಗಳನ್ನು ಹೊಂದಿರಲಿದೆ. ಇದು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಕಾರುಗಳನ್ನು ಬಜೆಟ್ ದರದಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಸ್ಕೋಡಾ ಕಂಪನಿಯು ಹೊಸ ಕಾರನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆಯೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಕುಶಾಕ್ ಕಾರಿನಂತೆಯೇ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಸುರಕ್ಷತೆಗೆ ಅನುಗುಣವಾಗಿ ಗುಣಮಟ್ಟವನ್ನು ಒಳಗೊಂಡಿರಲಿದೆ.
ಮೂಲಗಳ ಪ್ರಕಾರ ಸ್ಕೋಡಾ ಹೊಸ ಕಾರು 1.0 ಲೀಟರ್, 3-ಸಿಲಿಂಡರ್ ಪ್ರೇರಿತ ಟರ್ಬೊ ಪೆಟ್ರೋಲ್ ಎಂಜಿನ್ ನೀಡುವ ಸಾಧ್ಯತೆಯಿದ್ದು, ಇದು ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ. ಈ ಮೂಲಕ ಇದು ಉತ್ತಮ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್‌ನಲ್ಲಿ ಗ್ರಾಗಕರನ್ನು ಸೆಳೆಯಲಿದೆ. ಇನ್ನು ಇದು 2025ರ ಮೊದಲ ತಿಂಗಳಿನಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದರ ಎಕ್ಸ್‌ಶೋ ರೂಂ ದರ 8-13 ಲಕ್ಷ ನಿಗದಿಯಾಗುವ ಸಾಧ್ಯತೆಯಿದೆ.












Click it and Unblock the Notifications