ಶಾಂಪೂ ಬಳಕೆದಾರರೇ ಎಚ್ಚರ..ಎಚ್ಚರ: ಎಣ್ಣೆ ಹಾಕಿದ್ರೆ ಮಾತ್ರ ಅಲ್ಲ ತಲೆಗೆ ಶಾಂಪೂ ಹಾಕಿದ್ರೂ ಲಿವರ್ ಡ್ಯಾಮೇಜ್
ಕೂದಲಿನ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತೀದ್ದೀರಾ..? ಕೂದಲು ಉದುರದಂತೆ ತಡೆಯಲು, ಕೂದಲು ಸೊಂಪಾಗಿ ಬೆಳೆಯಲು, ಕೂದಲು ರೇಷ್ಮೆಯಂತೆ ಸಿಲ್ಕಿಯಾಗಲು ಬ್ರಾಂಡೆಡ್ ಉತ್ಪನ್ನಗಳನ್ನು ಬಳಸುತ್ತೀದ್ದೀರಾ. ಹಾಗಾದರೆ ಮಿಸ್ ಮಾಡದೇ ಈ ಸ್ಟೋರಿ ಓದಿ. ಯಾಕೆಂದರೆ ಕೂದಲಿ ಅಂದಕ್ಕೆ ಬಳಸುವ ಶಾಂಪೂ ಸೇರಿದಂತೆ ಹೇರ್‌ಕೇರ್ ಉತ್ಪನ್ನಗಳು ನಿಮ್ಮ ಆರೋಗ್ಯವನ್ನೇ ಕೆಡಿಸಬಹುದು. ಶಾಂಪೂಗಳ ಬಳಕೆ ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿಕೊಡಬಹುದು.
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾದ ಕಾಸ್ಮೆಟಿಕ್ ಉದ್ಯಮವು ಪ್ರತಿ ವರ್ಷ 6%ರಷ್ಟು ಹೆಚ್ಚಾಗುತ್ತಿರುತ್ತದೆ. ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಿನಕ್ಕೊಂದು ಬ್ರಾಂಡ್‌ಗಳು ಮಾರುಕಟ್ಟೆಗೆ ಬರುತ್ತದೆ. ಹೇರ್ ಕೇರ್ ವಸ್ತುಗಳ ತಯಾರಿಕಾ ಉದ್ಯಮವು ಕೂಡ ಹೀಗೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬಳಕೆದಾರರ ಸಂಖ್ಯೆಯೂ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿಗೆ ವಿಜ್ಞಾನಿಗಳ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಶ್ಯಾಂಪೂಗಳು ಹಾಗೂ ಹೇರ್‌ಕೇರ್ ಉತ್ಪನ್ನಗಳು ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೆ ಅದರಲ್ಲಿನ ಬೃಹತ್ ಪ್ರಮಾಣದ ರಾಸಾಯನಿಕವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿನ ರಾಸಾಯನಿಕಗಳು ನಮ್ಮ ಕೂದಲಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅತ್ಯಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ. ಇದನ್ನು ಉಸಿರಾಡುವುದರಿಂದ ಶ್ವಾಸಕೋಶ ಹಾಗೂ ನರಮಂಡಲದ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ ಲಿವರ್ ಡ್ಯಾಮೇಜ್ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಯುನೈಟೆಡ್ ಸ್ಟೇಟ್ಸ್‌ನ ಪರ್ಡ್ಯೂ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಒಬ್ಬ ವ್ಯಕ್ತಿಯು ಮನೆಯಲ್ಲಿ ಒಂದು ಬಾರಿ ಕೂದಲ ರಕ್ಷಣೆಯ ಉತ್ಪನ್ನಗಳ ಬಳಕೆಯಿಂದ 17 ಮಿಗ್ರಾಂ ಹಾನಿಕಾರಕ ರಾಸಾಯನಿಕಗಳನ್ನು ಉಸಿರಾಡುತ್ತಾನೆ. ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಹೆಚ್ಚಿನವು ಪರಿಮಳಯುಕ್ತವಾಗಿರುತ್ತವೆ. ಈ ಪರಿಮಳ ಬರಲು ಬಳಸುವ ಕೆಲವು ರಾಸಾಯನಿಕಗಳು ಉಸಿರಾಡಲು ಅಪಾಯಕಾರಿಯಾಗಿದೆ. ಈ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕಗಳು ನಾವು ತಿಳಿದಿರುವುದಕ್ಕಿಂತ ಹೆಚ್ಚು ಮಾನವನ ದೇಹಗಳ ಮೇಲೆ ಆತಂಕಕಾರಿಯಾಗಿದೆ.

ಸದ್ಯ ಕೂದಲ ರಕ್ಷಣೆಯ ಉತ್ಪನ್ನಗಳಾದ ಶಾಂಪೂಗಳಲ್ಲಿನ ರಾಸಯನಿಕಗಳ ಮೇಲೆ ಈ ಅಧ್ಯಯನ ನಡೆದಿದ್ದು, ಹೇರ್ ಜೆಲ್‌ಗಳು, ಎಣ್ಣೆಗಳು, ಕ್ರೀಮ್‌ಗಳು ಮೇಲೆ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ವಿಜ್ಞಾನಿಗಳ ಪ್ರಕಾರ, ಕರ್ಲಿಂಗ್ ಐರನ್‌ಗಳು ಮತ್ತು ಹೇರ್ ಸ್ಟ್ರೈಟ್‌ನರ್‌ಗಳಂತಹ ಸಮಯದಲ್ಲಿ ಹೆಚ್ಚಿನ ಶಾಖ ಹಾಗೂ ವಿವಧ ಉತ್ಪನ್ನಗಳ ಬಳಕೆಯಿಂದ ರಾಸಾಯನಿಕಗಳು ಹೆಚ್ಚಾಗಿ ಉಂಟಾಗುತ್ತದೆ.
ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದು, ಇಂತಹ ಅಪಾಯಕಾರಿ ಉತ್ಪನ್ನಗಳನ್ನು ಬಳಸದಿರುವುದು ಉತ್ತಮ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ಮುಖ್ಯವಾಗಿ ಶಾಂಪೂ ಬಳಸುವ ಸಂಧರ್ಭದಲ್ಲಿ ಬಾತ್ರೂಮ್ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡುವುದರಿಂದ ಶೇಕಡಾ 90ರಷ್ಟು ಇದರ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಸಹ ತಿಳಿದು ಬಂದಿದೆ.
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications