ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಾಕಾ ವಾಕಾ' ಖ್ಯಾತಿಯ ಪಾಪ್ ಗಾಯಕಿ ಶಕೀರಾಗೆ ಜೈಲು ಸಾಧ್ಯತೆ; ಏನಿದು ಪ್ರಕರಣ?

|
Google Oneindia Kannada News

'ವಾಕಾ ವಾಕಾ' ಹಾಡಿನ ಮೂಲಕ ಖ್ಯಾತಿ ಗಳಿಸಿದ ಪಾಪ್‌ ಸಂಗೀತದ ಹುಡುಗಿ, ಗಾಯಕಿ ಶಕೀರಾ ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಬಂದಿದೆ. ತೆರಿಗೆ ವಂಚನೆಗಾಗಿ ಸಿಂಗರ್ ಸ್ಪೇನ್‌ನಲ್ಲಿ 8 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಸುಮಾರು 117 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವ ಆರೋಪವು ಗಾಯಕಿ ಮೇಲಿದೆ.

ಸಂಗೀತದ ಸೂಪರ್‌ಸ್ಟಾರ್ ಆಗಿರುವ ಶಕೀರಾಗೆ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ನೀಡಬೇಕು ಎಂದು ಸ್ಪ್ಯಾನಿಷ್ ಪ್ರಾಸಿಕ್ಯೂಟರ್ ಶುಕ್ರವಾರ ಒತ್ತಾಯಿಸಿದ್ದಾರೆ. ಇತ್ತೀಚೆಗೆ, ಸಿಂಗರ್ ತೆರಿಗೆ ವಂಚನೆಯ ಆರೋಪದ ಮೇಲಿನ ಅರ್ಜಿಯನ್ನು ತಿರಸ್ಕರಿಸಿದ್ದರು, ನಂತರ ಈ ಬೇಡಿಕೆಯನ್ನು ಒತ್ತಾಯಿಸಲಾಗುತ್ತಿದೆ.
ಪ್ರಾಸಿಕ್ಯೂಟರ್‌ಗಳು ಶಕೀರಾಗೆ 24 ಮಿಲಿಯನ್ ಯುರೋಗಳ ದಂಡವನ್ನು ಸಹ ಒತ್ತಾಯಿಸಿದ್ದಾರೆ. ಆದರೆ, ಇದುವರೆಗೆ ನ್ಯಾಯಾಲಯದಿಂದ ಯಾವುದೇ ಹೇಳಿಕೆ ಕೇಳಿ ಬಂದಿಲ್ಲ ಅಥವಾ ವಿಚಾರಣೆ ದಿನಾಂಕವನ್ನೂ ನೀಡಿಲ್ಲ. ಶಕೀರಾ ಕೂಡ ತನ್ನ ವಕೀಲರ ಮೂಲಕ ಅರ್ಜಿಯನ್ನು ಸಲ್ಲಿಸಿ ಮತ್ತೆ ಕಾನೂನು ಹೋರಾಟ ಮುಂದೆವರಿಸಿದ್ದಾರೆ.

ಯಾವುದೇ ವಿಚಾರಣೆ ನ್ಯಾಯಾಲಯದಲ್ಲಿ ಪ್ರಾರಂಭವಾಗಬೇಕು ಆಗ ನಾವು ಪ್ರಕರಣವನ್ನು ಇತ್ಯರ್ಥ ಮಾಡಲು ಸಾಧ್ಯ ಎಂದು ಶಕೀರಾ ವಕೀಲರು ಹೇಳಿದ್ದಾರೆ. ಎಫ್‌ಸಿ ಬಾರ್ಸಿಲೋನಾ ಡಿಫೆಂಡರ್ ಗೆರಾರ್ಡ್ ಪಿಕ್ ಅವರೊಂದಿಗಿನ ಶಕೀರಾ ಸಂಬಂಧವು ಸಾರ್ವಜನಿಕವಾದ ನಂತರ 2011ರಲ್ಲಿ ಶಕೀರಾ ಸ್ಪೇನ್‌ಗೆ ತೆರಳಿ ಸ್ಪೇನ್‌ನಲ್ಲಿ ನೆಲಸಿದ್ದರು.

 ನಾನು ನಿರಪರಾಧಿ ಎಂದ ಗಾಯಕಿ ಶಕೀರಾ

ನಾನು ನಿರಪರಾಧಿ ಎಂದ ಗಾಯಕಿ ಶಕೀರಾ

ನಾನು ನಿರಪರಾಧಿ ಮತ್ತು ಈಗ ಈ ಪ್ರಕರಣವು ನ್ಯಾಯಾಲಯಕ್ಕೆ ಹೋಗಲಿ. ತೆರಿಗೆ ವಂಚನೆಯ ಎಲ್ಲಾ ಆರೋಪಗಳ ಮೇಲೆ ನಾನು ನಿರಪರಾಧಿ ಎಂದು ಅಲ್ಲಿ ಸಾಬೀತುಪಡಿಸುತ್ತೇನೆ. ನಾನು ಯಾವುದೇ ರೀತಿಯ ತೆರಿಗೆ ವಂಚನೆ ಮಾಡಿಲ್ಲ ಎಂದು ಶಕೀರಾ ಹೇಳಿದ್ದಾರೆ.

ಗಾಯಕಿ ಶಕೀರಾ ಅವರ ವಕೀಲರು ಹೇಳುವಂತೆ, 2014ರವರೆಗೆ ಶಕೀರಾ ಅಂತರರಾಷ್ಟ್ರೀಯ ಪ್ರವಾಸಗಳಿಂದ ಹೆಚ್ಚಿನ ಹಣವನ್ನು ಗಳಿಸಿದರು ಎಂದು ಹೇಳುತ್ತಾರೆ. ನಂತರ ಅವರು 2015ರಲ್ಲಿ ಹೆಚ್ಚು ಸಮಯ ಸ್ಪೇನ್‌ಗೆ ತೆರಳಿದರು ಮತ್ತು ಎಲ್ಲಾ ತೆರಿಗೆ ಬಾಧ್ಯತೆಗಳನ್ನು ಪೂರೈಸಿದರು. ಸ್ಪ್ಯಾನಿಷ್ ತೆರಿಗೆ ಅಧಿಕಾರಿಗಳಿಗೆ ಸಿಂಗರ್ 17.2 ಮಿಲಿಯನ್ ಯುರೋಗಳನ್ನು ಪಾವತಿಸಿದ್ದಾರೆ ಎನ್ನುತ್ತಾರೆ.

 ಶಕೀರಾ ವಿರುದ್ಧದ ತೆರಿಗೆ ಪ್ರಕರಣವೇನು?

ಶಕೀರಾ ವಿರುದ್ಧದ ತೆರಿಗೆ ಪ್ರಕರಣವೇನು?

ವೈಯಕ್ತಿಕ ಆದಾಯ ತೆರಿಗೆ ಮತ್ತು ಎಸ್ಟೇಟ್ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸುವ ಮೂಲಕ ದೇಶದ ತೆರಿಗೆ ಕಚೇರಿಗೆ € 14.5 ಮಿಲಿಯನ್ ವಂಚಿಸಿದ್ದಾರೆ ಎಂದು ಸ್ಪ್ಯಾನಿಷ್ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು ಸ್ಪ್ಯಾನಿಷ್‌ನ ಅನೇಕ ಪತ್ರಿಕೆಗಳು ವರದಿ ಮಾಡಿದೆ.

 2018ರಿಂದ ತೆರಿಗೆ ವಂಚನೆಯ ಆರೋಪ

2018ರಿಂದ ತೆರಿಗೆ ವಂಚನೆಯ ಆರೋಪ

ಪಾಪ್ ಗಾಯಕಿ ಶಕೀರಾ ಅವರ ತೆರಿಗೆ ವಂಚನೆಯ ಆರೋಪ 2018ರಲ್ಲಿ ಮೊದಲ ಬಾರಿಗೆ ಸುದ್ದಿಗೆ ಬಂದಿತು. ಆ ಸಮಯದಲ್ಲಿ, 2021ರಿಂದ 2014 ರವರೆಗಿನ ಗಳಿಕೆಯ ಮೇಲೆ ಸಿಂಗರ್ ಸುಮಾರು $ 155 ಮಿಲಿಯನ್, ಅಂದರೆ 120 ಕೋಟಿಗಳನ್ನು ಠೇವಣಿ ಮಾಡಿಲ್ಲ ಎಂದು ಸ್ಪ್ಯಾನಿಷ್ ವಕೀಲರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಶಕೀರಾ ಕೂಡ 2019ರ ಜೂನ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ತಮ್ಮ ಸಾಕ್ಷ್ಯದಲ್ಲಿ ತಮ್ಮ ಮೇಲಿನ ತಪ್ಪುಗಳನ್ನು ನಿರಾಕರಿಸಿದ್ದರು. ತೆರಿಗೆ ಕಚೇರಿಯಿಂದ ಮಾಹಿತಿ ಬಂದ ಕೂಡಲೇ ಹಣ ಜಮಾ ಮಾಡಿರುವುದಾಗಿಯೂ ಹೇಳಿಕೊಂಡಿದ್ದರು.

 ಪನಾಮಾ ಪೇಪರ್ಸ್‌ನಲ್ಲೂ ಶಕೀರಾ ಹೆಸರು

ಪನಾಮಾ ಪೇಪರ್ಸ್‌ನಲ್ಲೂ ಶಕೀರಾ ಹೆಸರು

ಶಕೀರಾ ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲಲ್ಲ, ಅದಕ್ಕೂ ಮುನ್ನ ಪನಾಮಾ ಪೇಪರ್ಸ್ ಸೋರಿಕೆಯಲ್ಲಿ ಆಕೆಯ ಹೆಸರೂ ಕಾಣಿಸಿಕೊಂಡಿತ್ತು. ‘ಮೊಸಾಕ್ ಫೋನ್ಸೆಕಾ' ಎಂಬ ಕಾನೂನು ಕಂಪನಿಯ ನೆರವಿನೊಂದಿಗೆ ತೆರಿಗೆ ಸ್ವರ್ಗ ಎಂದು ಕರೆಯಲ್ಪಡುವ ದೇಶಗಳಲ್ಲಿ ತಮ್ಮ ಆಸ್ತಿಗಳನ್ನು ನಿರ್ಮಿಸಿದ ಜನರನ್ನು ಪನಾಮಾ ಪೇಪರ್ಸ್ ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಶಕೀರಾಳ ಹೆಸರು ಪ್ರಕಟವಾಗಿತ್ತು. ಸ್ಪ್ಯಾನಿಷ್‌ನಲ್ಲಿ ಶಕೀರಾ 60 ಮಿಲಿಯನ್ ಆಲ್ಬಂಗಳನ್ನು ಮಾರಾಟ ಮಾಡಿದ್ದಾರೆ. ತನ್ನ ವಕೀಲರ ಮೂಲಕ ಹೇಳಿಕೆಯಲ್ಲಿ ತಾನು ನಿರಪರಾಧಿ ಎಂದು ಖಚಿತವಾಗಿದೆ ಎಂದು ಹೇಳುತ್ತಿದ್ದಾಳೆ ಆದರೆ ಶಕೀರಾ ನಿರಪರಾಧಿ ಎಂದು ಸಾಬೀತಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರೆ, ನ್ಯಾಯಾಲಯಕ್ಕೆ ಅಧಿಕೃತ ಉಲ್ಲೇಖವನ್ನು ಇನ್ನೂ ಘೋಷಿಸಲಾಗಿಲ್ಲ ಅಥವಾ ತನಿಖೆಯ ದಿನಾಂಕವನ್ನು ನಿಗದಿಪಡಿಸಲು ಇನ್ನು ಸಾಧ್ಯವಾಗಿಲ್ಲ.

Recommended Video

Dinesh Karthik ಭಾರತ ಕಂಡ ಶ್ರೇಷ್ಠ 360° ಆಟಗಾರ | *Cricket | OneIndia Kannada

English summary
Shakira's tax fraud case arose after the 45-year-old singer rejected a plea deal from prosecutors to settle the case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X