Samsung: ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್ ಮಾಡಲಿದೆ ಸ್ಯಾಮ್‌ಸಂಗ್
ಭಾರತದ ಮಾರುಕಟ್ಟೆಗೆ ಪ್ರತಿ ತಿಂಗಳು ಹೊಸ ಹೊಸ ಮೊಬೈಲ್‌ಗಳು ಲಾಂಚ್ ಆಗಲಿವೆ. ಈ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಚೀನಾ ಮೊಬೈಲ್ ಕಂಪನಿಗಳು ಹೊಂದಿವೆ. ಈ ಮಧ್ಯ ಕೊರಿಯಾ ಕಂಪನಿ ಸ್ಯಾಮ್‌ಸಂಗ್ ಸಹ ತಮ್ಮ ಉತ್ತಮ ಗುಣ ಮಟ್ಟದ ಫೋನ್‌ಗಳಿಂದ ತನ್ನ ಛಾಪನ್ನು ಉಳಿಸಿಕೊಂಡಿದೆ. ಈಗ ಈ ಕಂಪನಿ ಮತ್ತೊಂದು ಮೊಬೈಲ್ ಲಾಂಚ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಸ್ಯಾಮ್‌ಸಂಗ್ ಈಗ ಸದ್ದಿಲ್ಲದೇ ತನ್ನ ಮತ್ತೊಂದು ಫೋನ್ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನ್ನು ಈ ಬಾರಿ ಟಾರ್ಗೆಟ್ ಮಾಡಿರುವ ಸ್ಯಾಮ್‌ಸಂಗ್, ಮರುಕಟ್ಟೆಯಲ್ಲಿ ಧುಳೆಬ್ಬಿಸುವ ಯೋಚನೆಯನ್ನು ಹೊಂದಿದೆ. ಈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದ, ಮಿಡ್ ರೇಂಜ್ ಹಾಗೂ ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ವರೆಗೆ ತನ್ನ ಹಿಡಿತ ಹೊಂದಿದೆ. ಈಗ ಹಿಡಿತ ಹೊಂದಿರುವ ಸೆಗ್ಮೆಂಟ್‌ನಲ್ಲಿ ಮತ್ತೊಂದು ಫೋನ್ ಲಾಂಚಮಾಡಲಿದೆ. ಈ ನೂತನ ಮೊಬೈಲ್ ಹೆಸರು Samsung Galaxy M35 5G.

ಸ್ಯಾಮ್‌ಸಂಗ್ ಭಾರತದಲ್ಲಿ Samsung Galaxy M35 5G ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಜುಲೈ 17 ರಂದು ಲಾಂಚ್ ಮಾಡಲಿದೆ. ಸ್ಯಾಮ್‌ಸಂಗ್ ಈ ಫೋನ್ ಭಾರತದಲ್ಲಿ ಲಾಂಚ್ ಆಗುವ ಮುನ್ನವೇ ಇದರ ವಿಶೇಷತೆಗಳು ಬಹಿರಂಗವಾಗಿವೆ. ಈ ಫೋನ್ 4 ವರ್ಷಗಳ ಓಎಸ್ ಅಪ್‌ಗ್ರೇಡ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ರೂ 20 ಸಾವಿರದವರೆಗೆ ಬೆಲೆ ಬ್ರಾಕೆಟ್‌ನಲ್ಲಿ ಬಿಡುಗಡೆ ಮಾಡಬಹುದು.
ಏನೆಲ್ಲಾ ವಿಶೇಷತೆಗಳಿಂದ ಕೂಡಿದ ಸ್ಮಾರ್ಟ್‌ಫೋನ್?
ಈ ಫೋನ್ 6.6 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿರಲಿದ್ದು, 120Hz ನ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ 1000 ನೀಟ್ಸ್ ಗರಿಷ್ಠ ಹೊಳಪನ್ನು ಫೋನ್ ನೀಡುತ್ತದೆ. ಈ ಫೋನ್‌ನಲ್ಲಿ Exynos 1380 ಪ್ರೊಸೆಸರ್ ಅನ್ನು ನೀಡಲಾಗಿದೆ. ಇದರಲ್ಲಿ 8GB RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್ ಸಿಗಲಿದ್ದು,ಇದರಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್‌ನ ಆಯ್ಕೆಸಹ ಲಭ್ಯ.

ಬ್ಯಾಟರಿ ಕ್ಯಾಪಿಸಿಟಿ ಎಷ್ಟು?
ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದ್ದು, ಉಳಿದ ಎರಡೂ ಕ್ಯಾಮೆರಾ ಗಳು 8, 2 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿರುವ ಸಾಧ್ಯತೆ ಇದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ನೀವು 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದರಲ್ಲಿ ನೀಡು ಸಾಧ್ಯತೆ ಇದೆ. ಇನ್ನು ಈ ಫೋನ್ 6000mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್‌ನೊಂದಿಗೆ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ.
ಯಾವ ಬಣ್ಣಗಳಲ್ಲಿ ಸಿಗುತ್ತದೆ?
ಇದರ ಟೀಸರ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಸಿಗಲಿದೆ. ಇದರಿಂದ Samsung Galaxy M35 5G ಅನ್ನು ಪ್ರೈಮ್ ಡೇ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಂಪನಿಯು ಇದನ್ನು ಗಾಢ ನೀಲಿ, ತಿಳಿ ನೀಲಿ ಮತ್ತು ಬೂದು ಬಣ್ಣದ ಆಯ್ಕೆಗಳೊಂದಿಗೆ ನೀಡುವ ಸಾಧ್ಯತೆ ಇದೆ.












Click it and Unblock the Notifications