Maha Kumbh Mela 2025: ಮಹಾಕುಂಭ ಮೇಳದಲ್ಲಿ ಗಮನ ಸೆಳೆದ ಈ ಬಾಡಿ ಬಿಲ್ಡರ್‌ ಬಾಬಾ ಯಾರು?

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಹಲವು ಅಪರೂಪದ ಸಂಗತಿಗಳಿಗೆ ಸಾಕ್ಷಿಯಾಗುತ್ತಿದೆ. ಜಗತ್ತಿನ ಮೂಲೆ ಮೂಲೆಯಿಂದ ಮಹಾಕುಂಭಕ್ಕೆ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಈ ಪೈಕಿ ಕೆಲವರು ಎಲ್ಲರ ಚಿತ್ತ ತಮ್ಮತ್ತ ಸೆಳೆದಿದ್ದಾರೆ. ಸದ್ಯ ಪ್ರಯಾಗ್‌ರಾಜ್‌ನಲ್ಲಿ ಮಸ್ಕ್ಯುಲರ್ ಬಾಬಾ ಅಂತೂ ಫುಲ್‌ ಫೇಮಸ್‌ ಆಗಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಈ ಬಾರಿಯ ಮಹಾಕುಂಭ ಮೇಳಕ್ಕೆ ಕೋಟ್ಯಂತರ ಸಂತರು ಆಗಮಿಸಿದ್ದಾರೆ. ಈ ಪೈಕಿ ಆತ್ಮ ಪ್ರೇಮ್ ಗಿರಿ ಮಹಾರಾಜ್ ಅವರು ತಮ್ಮ ಮೈಕಟ್ಟಿನಿಂದಾಗಿ ಎಲ್ಲರ ನಡುವೆ ಎದ್ದು ಕಾಣುತ್ತಿದ್ದಾರೆ. ಸದ್ಯ ಇವರು ಮಸ್ಕ್ಯುಲರ್ ಬಾಬಾ ಎಂದೇ ಎಲ್ಲೆಡೆ ಫೇಮಸ್‌ ಆಗಿದ್ದಾರೆ.

Russian Saint Muscular Baba Gains Attention At Mahakumbh Mela In Prayagraj

ಮಹಾಕುಂಭಮೇಳಕ್ಕೆ ಬಂದಿರುವ 7 ಅಡಿ ಎತ್ತರದ ಬಾಬಾವೊಬ್ಬರು ನೆಟ್ಟಿಗರಿಂದ ಮಸ್ಕ್ಯುಲರ್ ಬಾಬಾ ಎಂಬ ಹೆಸರು ಪಡೆದುಕೊಂಡು ವೈರಲ್‌ ಆಗಿದ್ದಾರೆ. ಇವರು ಮೂಲತಃ ರಷ್ಯಾದವರು ಎಂದು ತಿಳಿದುಬಂದಿದೆ. ರಷ್ಯಾ ಮೂಲದ ಈ ಮಸ್ಕ್ಯುಲರ್ ಬಾಬಾ ಅವರ ಮೈಕಟ್ಟು ಯಾವ ದೇಹದಾರ್ಢ್ಯ ವ್ಯಕ್ತಿಗಿಂತ ಕಡಿಮೆಯೇನಿಲ್ಲ. ಇವರು 30 ವರ್ಷಗಳ ಹಿಂದೆ ಸನಾತನ ಧರ್ಮವನ್ನು ಸ್ವೀಕರಿಸಿ, ಹಿಂದೂ ಧರ್ಮದ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಾರು ಏಳು ಅಡಿ ಎತ್ತರ ಇರುವ ಗಿರಿ ಮಹಾರಾಜ್ ಅವರು ಕೇಸರಿ ವಸ್ತ್ರಗಳು ಹಾಗೂ ರುದ್ರಾಕ್ಷ ಮಾಲೆ ಧರಿಸಿ ಮಹಾ ಕುಂಭಮೇಳದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಇವರನ್ನು ಕಂಡ ಅನೇಕರು ಗಿರಿ ಮಹಾರಾಜ್ ಭಗವಾನ್ ಪರಶುರಾಮನ ಅವತಾರ ಎಂದೂ ಬಣ್ಣಿಸಿದ್ದಾರೆ.

Russian Saint Muscular Baba Gains Attention At Mahakumbh Mela In Prayagraj

ಇವರು 30 ವರ್ಷಗಳ ಹಿಂದೆ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ನಂತರ ಗಿರಿ ಅವರು ಹಿಂದೂ ಧರ್ಮವನ್ನು ಪ್ರಚಾರ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಮೊದಲು ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಬಳಿಕ ತಮ್ಮ ವೃತ್ತಿಜೀವನವನ್ನು ತೊರೆದು ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಮುಳುಗಲು ನಿರ್ಧರಿಸಿದರು ಎನ್ನಲಾಗಿದೆ. ಸದ್ಯ ಗಿರಿ ಮಹಾರಾಜ್‌ ಅವರು ನೇಪಾಳದಲ್ಲಿ ನೆಲೆಸಿದ್ದಾರೆ. ಅವರು ಪ್ರಮುಖ ಹಿಂದೂ ಸನ್ಯಾಸಿಗಳ ಗುಂಪಲ್ಲಿ ಒಂದಾದ ಜುನಾ ಅಖಾರದ ಸದಸ್ಯರೂ ಆಗಿದ್ದಾರೆ.

ಇನ್ನು ಈ ಆಳೆತ್ತರದ ಮಸ್ಕ್ಯುಲರ್ ಬಾಬಾ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಮೊದಲಿಗೆ ಈ ಬಾಬಾ ಅವರು ಫೋಟೋ ಶೇರ್‌ ಮಾಡಿದ್ದಾರೆ. ಇವರು ಯಾವ ನಟರಿಗೂ ಕಡಿಮೆ ಇಲ್ಲದ ಮೈಕಟ್ಟು ಹೊಂದಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಮೈಕಟ್ಟು ಕಂಡು ಎಲ್ಲರೂ ಬೆರಗಾಗಿದ್ದಾರೆ.

Russian Saint Muscular Baba Gains Attention At Mahakumbh Mela In Prayagraj

ಇನ್ನು ಈ ಬಾಬಾ ಅವರ ಮೂಲ ಹೆಸರು ಎಲೆಸ್ಕಿ ಗಾರ್ಸಿನ್ (Elesky Garcin) ಎಂದು ಹೇಳಲಾಗಿದೆ. ಆದರೆ ಈಗ ಇವರು ಆತ್ಮ ಪ್ರೇಮ್ ಗಿರಿಯಾಗಿ ಹೆಸರು ಬದಲಿಸಿಕೊಂಡಿದ್ದಾರೆ. ಈ ರಷ್ಯಾದ ಪ್ರಜೆಯ ಎತ್ತರ 7 ಅಡಿ ಎಂದೂ ಕೆಲವರು ಪತ್ತೆ ಹಚ್ಚಿದ್ದಾರೆ. ಇವರು ಸನಾತನ ಧರ್ಮವನ್ನು ಸ್ವೀಕರಿಸಿದ ನಂತರ ಈ ಸಂತನು ನೇಪಾಳದ ಗುಹೆಯಲ್ಲಿ 30 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ಹಲವರು ಈ ಬಾಬಾರನ್ನು ಪರಶುರಾಮನ ಅವತಾರ ಎಂದೇ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+