
ಯಶ್ ರಿಯಲ್ ಲೈಫ್: ಅಪ್ಪ, ಗಂಡ, ಸೇವಕ, ಉದ್ಯಮಿ, ಎಲ್ಲದರಲ್ಲೂ ಸೈ
ಬೆಂಗಳೂರು: ಕೆಜಿಎಫ್-2 ಸಿನಿಮಾಗೆ ಅಪ್ರತಿಮ ಎನಿಸುವಷ್ಟು ಸ್ಪಂದನೆ ದೇಶಾದ್ಯಂತ ಸಿಗುತ್ತಿದೆ. ಕೆಜಿಎಫ್‌ನ ಮೊದಲ ಭಾಗವನ್ನೂ ಮೀರಿಸುವ ಯಶಸ್ಸು ಎರಡನೇ ಭಾಗಕ್ಕೆ ಸಿಕ್ಕಿದೆ. ಹಿಂದಿಯಲ್ಲೂ ಕೆಜಿಎಫ್ ಜೊತೆಗೆ ಯಶ್ ಹೊಸ ಸೆನ್ಸೇಷನ್ ಹುಟ್ಟುಹಾಕಿದ್ದಾರೆ. ತಮಿಳುನಾಡು ಮತ್ತು ಆಂಧ್ರ, ತೆಲಂಗಾಣದ ಜನರೂ ಕೆಜಿಎಫ್ ಅಬ್ಬರಕ್ಕೆ ಮಾರುಹೋಗಿದ್ದಾರೆ. ಯಶ್ ಪಕ್ಕಾ ಪಾನ್ ಇಂಡಿಯಾ ಸ್ಟಾರ್ ಆಗುವತ್ತ ದೃಢ ಹೆಜ್ಜೆ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜಿನೀಕಾಂತ್ ಅವರು ತಮಿಳುನಾಡಿನ ಆಳರಸನಾಗಿ ಕೊಟ್ಟಿದ್ದು ಕರ್ನಾಟಕದ. ಮೈಸೂರಿನ ಬಸ್ ಡ್ರೈವರ್ ಮಗ ಯಶ್ ಈಗ ದೇಶವ್ಯಾಪಿ ಹೆಸರುವಾಸಿಯಾಗಿದ್ದಾರೆ. ಪುಷ್ಪಾ ಸಿನಿಮಾದ ಡೈಲಾಗ್ ಮತ್ತು ಆ್ಯಕ್ಟಿಂಗ್ ವೈರಲ್ ಆಗುತ್ತಿರುವಂತೆ ಕೆಜಿಎಫ್ ಸೀನ್‌ಗಳು ಟ್ರೆಂಡಿಂಗ್‌ನಲ್ಲಿ ಬರತೊಡಗುತ್ತಿವೆ.
KGF Chapter 2 : ಕೆಜಿಎಫ್ - 2 ಬಿಡುಗಡೆಗೆ ತಡೆ ಕೋರಿ ಕೋರ್ಟ್ನಲ್ಲಿ ದಾವೆ ಸಲ್ಲಿಕೆ
ಸಿನಿಮಾ ಹಿನ್ನೆಲೆ ಇಲ್ಲದೇ ಬಂದ ಯಶ್ ಇಷ್ಟೊಂದು ಅಗಾಧ ಯಶಸ್ಸಿನ ಬಳಿಕ ಯಾವ ಆ್ಯಟಿಟ್ಯೂಡ್ ಹೊಂದಿದ್ದಾರೆ ಎಂಬ ಕುತೂಹಲ ಸಹಜ. ಯಶ್ ಅವರು ಕಿರುತೆರೆಯಲ್ಲಿದ್ದಾಗಲಿಂದಲೂ ಅವರದ್ದು ನೇರಾನೇರ ಸ್ವಭಾವವೇ. ಕಡ್ಡಿತುಂಡಾಗುವಂತೆ ಮಾತನಾಡುವುದು ಅವರ ಜಾಯಮಾನ. ಅವರು ಸ್ಯಾಂಡಲ್‌ವುಡ್‌ನಲ್ಲಿ ಚಿತ್ರದಿಂದ ಚಿತ್ರಕ್ಕೆ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವಾಗ ಜನರು ಯಶ್ ಆ್ಯಟಿಟ್ಯೂಡ್ ಹೆಚ್ಚಿತು ಎಂದು ಮಾತಾಡಿಕೊಳ್ಳುವುದುಂಟು. ಆದರೆ, ಅವರ ಆ್ಯಟಿಟ್ಯೂಡ್ ಮೊದಲಿಂದಲೂ ಇರುವುದೇ ಹಾಗೆ. ಈಗ ಪ್ಯಾನ್ ಇಂಡಿಯಾ ಯಶಸ್ವಿ ಸಿನಿಮಾದ ಸ್ಟಾರ್ ಆಗಿದ್ದರೂ ಅವರ ಆ್ಯಟಿಟ್ಯೂಡ್ ಬದಲಾಗಿಲ್ಲ.
ಒಳ್ಳೆಯ ಮಗ, ಗಂಡ, ಅಪ್ಪ:
ಯಶ್ ಯಾವಾಗಲೂ ತಮ್ಮ ಕುಟುಂಬವನ್ನು ಯಾವ ವಿಚಾರದಲ್ಲೂ ಬಿಟ್ಟುಕೊಟ್ಟವರಲ್ಲ. ಹಿಂದೆಲ್ಲಾ ಕೆಲ ವೈಯಕ್ತಿಕ ವಿಚಾರಗಳಿಗೆ ಮಾಧ್ಯಮಗಳಲ್ಲಿ ವಿವಿಧ ರೀತಿಯ ಸುದ್ದಿಗಳು ಬಿತ್ತರವಾಗುತ್ತಿದ್ದರೂ ಅವರು ತಮ್ಮ ಕುಟುಂಬದೊಂದಿಗೆ ಗಟ್ಟಿಯಾಗಿ ನಿಂತಿದ್ಉದ ಆರೋಪಗಳನ್ನ ಎದುರಿಸಿದ್ದರು.
ಕುಕ್ಕೆಶ್ರೀ, ಧರ್ಮಸ್ಥಳ ದೇಗುಲಕ್ಕೆ ಯಶ್ ಭೇಟಿ, KGF2 ಯಶಸ್ಸಿಗಾಗಿ ಪ್ರಾರ್ಥನೆ
ಮದುವೆಯಾದ ಮೇಲೆ ಯಶ್ ಬಹಳಷ್ಟು ಬ್ಯುಸಿಯಾದರೂ ತಮ್ಮ ಹೆಂಡತಿ ಮತ್ತು ಮಗುವಿಗೆ ಕೊಡಲು ಬಿಡುವು ಮಾಡಿಕೊಳ್ಳುತ್ತಿದ್ದರು. ಏನೇ ಕೆಲಸ ಇದ್ದರೂ ಮನೆಯ ಸದಸ್ಯರಿಗೆ ಅವರು ಸಮಯ ಕೊಡುವುದನ್ನು ಮರೆಯುವುದಿಲ್ಲ. ರಾಧಿಕಾ ಪಂಡಿತ್ ಗರ್ಭಿಣಿಯಾಗಿದ್ದಾಗ ಅವರ ಪ್ರತಿಯೊಂದು ಸ್ಕ್ಯಾನಿಂಗ್ ವೇಳೆ ಯಶ್ ಅವರು ಜೊತೆಗೆ ತಪ್ಪದೇ ಹೋಗುತ್ತಿದ್ದರಂತೆ.

ಯಶ್ ತನ್ನ ಮಗು ಜೊತೆ ಖುಷಿಖುಷಿಯಿಂದ ಆಡುತ್ತಿರುವ ಹಲವು ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ನಾವು ನೀವು ನೋಡಿದ್ದೇವೆ. ಯಶ್ ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಕೆಲಸವೂ ಮುಖ್ಯ, ಕುಟುಂಬವೂ ಮುಖ್ಯ ಅವರಿಗೆ. ವರ್ಕ್ ಅಂಡ್ ಲೈಫ್ ಬ್ಯಾಲೆನ್ಸ್ ಮಾಡುವ ಕ್ಷಮತೆ ಅವರಿಗೆ ಸಿದ್ಧಿಸಿದೆ. ಅದು ಅವರ ಆ್ಯಟಿಟ್ಯೂಡ್ ಮತ್ತು ಹಾರ್ಡ್ ವರ್ಕ್.
ಯಶ್ ಉದ್ಯಮಶೀಲತೆ:
ಯಶ್ ಅವರು ಕಷ್ಟಪಟ್ಟು ಕೆಲಸ ಮಾಡುವುದಷ್ಟೇ ಅಲ್ಲ ಅವರೊಬ್ಬ ಪಕ್ಕಾ ಉದ್ಯಮಶೀಲತೆಯ ಬುದ್ಧಿ ಇರುವವರೂ ಹೌದು. 'ವಿಲನ್' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅವರು ಒಂದು ಪರ್ಫ್ಯೂಮ್ ಪ್ರಾಡಕ್ಟ್ ಅನ್ನು ಮಾರುಕಟ್ಟೆಗೆ ತಂದಿದ್ದಾರೆ. ಈ ಕ್ಷೇತ್ರದಲ್ಲಿ ಅನುಭವ ಇರುವ ಆಶುತೋಷ್ ವಲನಿ ಮತ್ತು ಪ್ರಿಯಾಂಕಾ ಶಾ ಅವರ ಜೊತೆ ಪಾಲುದಾರಿಕೆಯಲ್ಲಿ ಯಸ್ ಅವರು ಪರ್ಫ್ಯೂಮ್ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇಷ್ಟೆ ಅಲ್ಲ, ಮುಂದಿನ ದಿನಗಳಲ್ಲಿ ಫ್ಯಾಷನ್ ಉಡುಪು ಕ್ಷೇತ್ರದಲ್ಲೂ ಅವರು ಒಂದು ಕೈ ನೋಡುವ ನಿರ್ಧಾರಕ್ಕೆ ಬಂದಿದ್ಧಾರೆ.
ಸಮಾಜಸೇವಕ ಯಶ್:
ಯಶ್ ಯಾವತ್ತೂ ಬರೀ ಸಿನಿಮಾ ಅಂತ ಕೂತವರಲ್ಲ. ಸಿನಿಮಾ ಜೊತೆಗೆ ಇನ್ನೂ ಹಲವು ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಾರೆ. ಯಶೋ ಮಾರ್ಗ ಫೌಂಡೇಶನ್ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಅವರು ಅನೇಕ ಜನೋಪಯೋಗಿ ಕೆಲಸ ಮಾಡುತ್ತಿರುವುದು ಕರ್ನಾಟಕದ ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ. ಉತ್ತರ ಕರ್ನಾಟಕದಲ್ಲಿ ಅನೇಕ ಹಳ್ಳಿಗಳು ನೀರಿಲ್ಲದ ಸ್ಥಿತಿಯಲ್ಲಿವೆ. ಅಲ್ಲಿಗೆ ನೀರು ಒದಗಿಸುವ ಕೆಲಸವನ್ನ ಯಶ್ ಮೊದಲು ಆರಂಭಿಸಿದರು. ಬಳಿಕ ಹಲವು ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಮಾಡಿಸಿದರು. ಕೊರೋನಾ ಬಂದ ಅವಧಿಯಲ್ಲಿ ಬಹಳ ಮಂದಿಗೆ ಅವರು ಸಹಾಯ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಧನಸಹಾಯ ಮಾಡಿದರು.
ಯಶ್ ರೀಲ್‌ನಲ್ಲಿ ಹೇಗೆ ಸೂಪರ್ ಸ್ಟಾರೋ ಹಾಗೆ ರಿಯಲ್ ಲೈಫ್‌ನಲ್ಲೂ ಸೂಪರ್ ಸ್ಟಾರ್ ಎನಿಸುತ್ತಿರುವುದಂತೂ ಹೌದು.
(ಒನ್ಇಂಡಿಯಾ ಸುದ್ದಿ)