Renault: ರೆನಾಲ್ಟ್ ಕಂಪನಿಯಿಂದ ಗ್ರಾಹಕರಿಗೆ ಬಿಗ್ ಆಫರ್-ಮಾಹಿತಿ, ವಿವರ ಇಲ್ಲಿದೆ
ಆಟೋಮೊಬೈಲ್ ಕ್ಷೇತ್ರದಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲಿದೆ. ಅದರಲ್ಲೂ ಇವಿ ವಾಹನಗಳು ಬಂದಾಗಿನಿಂದ ಭಾರತದ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಕಂಪನಿಗಳು ನಾ ಮುಂದು ತಾಮುಂದು ಎನ್ನುತ್ತಾ ಕಡಿಮೆ ದರದಲ್ಲಿ ಕಾರು, ಬೈಕ್‌ಗಳನ್ನು ಬಿಡುಗಡೆ ಮಾಡುತ್ತಲಿವೆ. ಹಾಗೆಯೇ ಇದೀಗ ಫ್ರೆಂಚ್ ಕಾರು ಉತ್ಪಾದನಾ ಕಂಪನಿ ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಮೂರು ಕಾರುಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಹಾಗಾದರೆ ಆ ಕಾರುಗಳು ವಿಶೇಷತೆ ಮತ್ತು ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೆನಾಲ್ಟ್ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಕಿಗರ್, ಹ್ಯಾಚ್‌ಬ್ಯಾಕ್ ಕ್ವಿಡ್ ಮತ್ತು 7-ಸೀಟರ್ ಕಾರ್ ಟ್ರೈಬರ್ ಈ ಎಲ್ಲ ಮೂರು ಮಾದರಿಯ ಕಾರುಗಳ ಮೇಲೆ ಭಾರೀ ರಿಯಾಯಿತಿ ನೀಡಲು ಮುಂದಾಗಿದೆ.

ಕಂಪನಿಯು ಗ್ರಾಹಕರಿಗೆ ಕ್ಯಾಷ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಮತ್ತು ಲಾಯಲ್ಟಿ ಬೋನಸ್‌ನಂತಹ ಆಫ್‌ರ್‌ಗಳನ್ನು ನೀಡಿದೆ. ಇದರ ಹೊರತಾಗಿಯೂ, ಕಂಪನಿಯು ತನ್ನ ವಾಹನ ಸ್ಕ್ರ್ಯಾಪ್ಪೇಜ್ ಯೋಜನೆ R.E.Li.V.E ಅಡಿಯಲ್ಲಿ ಗ್ರಾಹಕರಿಗೆ ಹೆಚ್ಚುವರಿ ಎಕ್ಸ್‌ಚೇಂಜ್ ಪ್ರಯೋಜನಗಳನ್ನು ನೀಡುವುದು ಘೋಷಣೆ ಮಾಡಿದೆ. ಕಂಪನಿಯು ವಿವಿಧ ವಾಹನಗಳ ಮೇಲೆ ಏನೆಲ್ಲ ಆಫರ್ ನೀಡುತ್ತಿದೆ ಎಂಬ ಮಾಹಿತಿ ಇಲ್ಲಿದೆ.
ರೆನಾಲ್ಟ್ ಕಿಗರ್: ಈ ಕಾರಿನ ಬೆಲೆ 6 ಲಕ್ಷದಿಂದ 11.23 ಲಕ್ಷ ರೂಪಾಯಿ ಇದ್ದು, ಈ ಕಾಂಪ್ಯಾಕ್ಟ್ ಎಸ್‌ಯುವಿನಲ್ಲಿ ಗ್ರಾಹಕರು 40,000 ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದು. ಈ ಕಾರು ನೇರವಾಗಿ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್‌ನೊಂದಿಗೆ ಪ್ರತಿಸ್ಪರ್ಧಿಯಾಗಿದೆ ಅಂತಲೇ ಹೇಳಬಹುದು.
ರೆನಾಲ್ಟ್ ಕ್ವಿಡ್: ಕಂಪನಿಯ ಹ್ಯಾಚ್‌ಬ್ಯಾಕ್ ಕಾರು ಕ್ವಿಡ್ ಮೇಲೂ ರಿಯಾಯಿತಿ ನೀಡಿದ್ದು, ಗ್ರಾಹಕರು ಈ ಕಾರಿನ ಮೇಲೆ 40,000 ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 4.70 ಲಕ್ಷ ರೂಪಾಯಿ ಇದ್ದರೆ ಮತ್ತು ಟಾಪ್ ಎಂಡ್ ಮಾಡೆಲ್ ಬೆಲೆ 6.45 ಲಕ್ಷ ರೂಪಾಯಿ ಇದೆ. ಇದು ಮಾರುತಿ ಸುಜುಕಿ ಆಲ್ಟೊ ಕೆ-10 ಗೆ ಪ್ರತಿಸ್ಪರ್ಥಿಯಾಗಿದೆ.
ರೆನಾಲ್ಟ್ ಟ್ರೈಬರ್: ಗ್ರಾಹಕರು ಈ ಕಾರಿನ ಮೇಲೆ 35,000 ರೂಪಾವರೆಗೆ ರಿಯಾಯಿತಿ ಪಡೆಯಬಹುದಾಗಿದ್ದು, ಇದರ ಬೆಲೆ 6-8.98 ಲಕ್ಷ ರೂಪಾಯಿವರೆಗೆ ಇದೆ. ಇದು 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7 ಸೀಟರ್ ಕಾರಾಗಿದೆ. ಫ್ಯಾಮಿಲಿ ಟ್ರಾವೆಲ್ ಮಾಡಲು ಹೇಳಿ ಮಾಡಿಸಿದ ಕಾರು ಇದಾಗಿದೆ.












Click it and Unblock the Notifications