Red Xplosive: 175 ಕಿಲೋ ಮೀಟರ್ ಮೈಲೇಜ್ ಕೊಡುವ ₹56,000 ಬೆಲೆಯ ಬೈಕ್ ಇದು
ಕಾಲ ಬದಲಾದಂತೆ ಜನರು ಕೂಡ ಚೇಂಜ್ ಕೇಳ್ತಾರೆ. ಹಾಗೆಯೇ ಆಟೋಮೊಬೈಲ್ ಕ್ಷೇತ್ರದಲ್ಲೂ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಅದರಲ್ಲೂ ಇವಿ ದ್ವಿಚಕ್ರ ವಾಹನಗಳ ಮಾರಾಟದಲ್ಲಂತೂ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಬೇರೆ ಬೇರೆ ಕಂಪನಿಗಳ ಹೊಸ ಮಾದರಿಯ ಇವಿ ವಾಹನಗಳು ಲಗ್ಗೆ ಇಡುತ್ತಲೇ ಇವೆ. ಇದೀಗ 170 ಕಿಲೋ ಮೀಟರ್ ಮೈಲೇಜ್ ಕೊಡುವ ಬೈಕೊಂದು ಬಿಡುಗಡೆಯಾಗಿದೆ. ಹಾಗಾದರೆ ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇತ್ತೀಚೆಗಷ್ಟೇ ಭಾರದತದ ಮಾರುಕಟ್ಟೆಯಲ್ಲಿ 170 ಕಿಲೋ ಮೀಟರ್ ಮೈಲೇಜ್ ಕೊಡುವ ರೆಡ್ ಎಕ್ಸ್ಪೋಸಿವ್(Red Xplosive) ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಹೋಲಿಕೆ ಮಾಡಿದರೆ, ಇತರ ಕಂಪನಿಯ ಎಲೆಕ್ಟ್ರಿಕ್ ಬೈಕ್‌ಗಳಿಗೆ ಇದು ಸೆಡ್ಡು ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇತರ ಬೈಕ್‌ಗಳಿಗಿಂತ ಇದನ್ನು ವಿಭಿನ್ನವಾಗಿ ತಯಾರು ಮಾಡಲಾಗಿದೆ. ಇದರ ವಿನ್ಯಾಸವಂತೂ ಗ್ರಾಹಕರನ್ನು ತನ್ನ ಸೆಳೆಯುವಂತಿದೆ. ಇದು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಆದ್ದರಿಂದ ನೀವು ಕಡಿಮೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಬೈಕ್ ಉತ್ತಮ ಆಯ್ಕೆಯಾಗಿದೆ.
ವಿಶೇಷತೆಗಳ ವಿವರ: ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ತಯಾರು ಮಾಡಲಾಗಿರುವ ರೆಡ್ ಎಕ್ಸ್ಪೋಸಿವ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಹೆಡ್ ಲೈಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಕ್ರೂಸಿ ಕಂಟ್ರೋಲ್ ಹಾಗೂ ಸ್ಟ್ಯಾಂಡ್ ಸೆನ್ಸಾರ್‌ನಂತಹ ಫೀಚರ್ಸ್‌ಗಳಿದೆ.
ಇನ್ನು ವಿನ್ಯಾಸದಲ್ಲಿ ಇತರೆ ಎಲೆಕ್ಟ್ರಿಕ್ ಬೈಕ್‌ಗಳಿಗಿಂತ ವಿಭಿನ್ನ ಆಗಿರುವ ರೆಡ್ ಎಕ್ಸ್ಕ್ಲೂಸಿವ್, ನೋಡಲು ಥೇಟ್ ರೆಟ್ರೋನಂತೆ ಕಾಣುತ್ತದೆ. ಆದ್ದರಿಂದ ಗ್ರಾಹಕರು ಈ ಬೈಕ್ ಖರೀದಿಯತ್ತ ಗಮನಹರಿಸುತ್ತಿದ್ದಾರೆ.
ರೆಡ್ ಎಕ್ಸ್ಪೋಸಿವ್ ಬೈಕ್‌ನಲ್ಲಿ ಶಕ್ತಿಯುತ 2,000 ವಾಟ್ BLDC ಮೊಟರ್ ಅನ್ನು ಅಳವಡಿಕೆ ಮಾಡಲಾಗಿದ್ದು, ಇದು ಅತಿ ಹೆಚ್ಚಿನ ರೇಂಜ್ ನೀಡಲು ಸಹಕರಿಸುತ್ತದೆ. ಇದರ ಬ್ಯಾಟರಿಯನ್ನು 2 ಗಂಟೆಗಳ ಕಾಲ ಚಾರ್ಚ್ ಮಾಡಿದರೆ, 100%ವರೆಗೂ ಸಂಪೂರ್ಣ ಚಾರ್ಜ್ ಆಗಲಿದ್ದು, ಆಗ ನೀವು 170 ಕಿಲೋ ಮೀಟರ್ ಮೈಲೇಜ್ ಅನ್ನು ಈ ಬೈಕ್‌ನಿಂದ ಪಡೆಯಬಹುದಾಗಿದೆ. ಒಂದು ವೇಳೆ ಟಾಪ್ ಸ್ಪೀಡ್‌ನಲ್ಲಿ ಚಲಾಯಿಸಿದರೆ, ಪ್ರತಿ ಗಂಟೆಗೆ 70 ಕಿಲೋ ಮೀಟರ್ ತಲುಪುವ ಸಾಮರ್ಥ್ಯವವನ್ನು ಹೊಂದಿದೆ.
ಇದೀಹ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ಬೈಕ್‌ಗಳದ್ದೇ ದರ್ಬಾರ್ ಆಗಿದೆ ಮತ್ತು ಇ ಸ್ಕೂಟರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಆದ್ದರಿಂದ ಎಲ್ಲಾ ಕಂಪನಿಗಳು ಇವಿ ವಾಹನಗಳ ಬೆಲೆಯನ್ನು ಏರಿಕೆ ಮಾಡಿವೆ. ಆದರೆ ಎಕ್ಸ್ಪೋಸಿವ್ ಕಂಪನಿಯು ಇಷ್ಟೆಲ್ಲಾ ಅತ್ಯಾಕರ್ಶಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ವಾಹನವನ್ನು ತುಂಬಾ ಕಡಿಮೆ ಬೆಲೆಗೆ ನೀಡುತ್ತಿದೆ.
ಇನ್ನು ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿರುವ ರೆಡ್ ಎಕ್ಸ್ಪೋಸಿವ್(Red Xplosive) ಎಲೆಕ್ಟ್ರಿಕ್ ಬೈಕ್ ಇಂಡಿಯಾ ಮಾರ್ಟ್ಸ್ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ₹56,000 ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಇದೀಗ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಈ ವಾಹನಗಳ ದರ ಹೆಚ್ಚಾಗುತ್ತಲೇ ಇದೆ ಎಂದರೆ ತಪ್ಪಾಗಲಾರದು.












Click it and Unblock the Notifications