Get Updates
Get notified of breaking news, exclusive insights, and must-see stories!

ರಿಯಲ್‌ಮಿ 12 ಪ್ರೋ ಮೇಲೆ ಭರ್ಜರಿ ಆಫ್‌: ನೀವು ಇಷ್ಟು ಹಣವನ್ನು ಉಳಿಸಬಹುದು

ನೀವು ಆಫರ್ ಪ್ರೈಸ್‌ನಲ್ಲಿ ಮೊಬೈಲ್ ತೆಗೆದಿಕೊಳ್ಳುವ ಯೋಚನೆಯಲ್ಲಿದ್ದರೆ, ಇದೋ ನಿಮಗೆ ಬೆಸ್ಟ್‌ ಟೈಮ್‌. ಫ್ಲಿಪ್‌ಕಾರ್ಟ್‌ನಲ್ಲಿ 2024 ರ ಬಿಗ್ ಎಂಡ್ ಆಫ್ ಸೀಸನ್ ಸೇಲ್‌ ಆರಂಭವಾಗಿದೆ. ಇದರ ಅಡಿಯಲ್ಲಿ ನೀವು ಫೋನ್‌ಗಳ ಮೇಲೆ ಡಿಸ್ಕೌಂಟ್ ಪಡೆಯಬಹುದು. ಅಷ್ಟೇ ಏಕೆ ಭಾರೀ ಹಣವನ್ನು ಉಳಿಸಬಹುದು.

ಒಂದು ವೇಳೆ ನೀವು ಚೀನಾ ಮೂಲದ ಕಂಪನಿ ರಿಯಲ್‌ಮಿ ಕಂಪನಿಯ ಫೋನ್‌ಗಳ ಅಭಿಮಾನಿ ಆಗಿದ್ದರೆ, ಇದು ನಿಮಗೆ ಬೆಸ್ಟ್ ಅವಕಾಶ. ಈ ಆಫರ್‌ ಅಡಿಯಲ್ಲಿ ಹಲವು ಫೋನ್‌ಗಳ ಲಾಂಚ್‌ ಪ್ರೈಸ್‌ಗಳ ಮೇಲೆ ಡಿಸ್ಕೌಂಟ್‌ ಪಡೆಯಬಹುದು. ಇನ್ನು ಇದೇ ವರ್ಷ ಜನವರಿಯಲ್ಲಿ ಲಾಂಚ್ ಆದ Realme 12 Pro ಮೇಲೂ ಭಾರೀ ರಿಯಾಯಿತಿ ಪಡೆಯಬಹುದು.

Realme 12 Pro Discount and Features at Flipkart End of Season Sale 2024

ಬಿಗ್ ಎಂಡ್ ಆಫ್ ಸೀಸನ್ ಸೇಲ್‌ನಲ್ಲಿ ಈ ಫೋನ್‌ ಮೇಲೆ ಸುಮಾರು 8,000 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಈ ಮೊಬೈಲ್‌ ಲಾಂಚ್‌ ಪ್ರೈಸ್ ರೂ 29,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಈ ಫೋನ್‌ ಬೆಲೆ ಅಗ್ಗವಾಗಿದೆ. ಮಿಡ್‌ ರೇಂಜ್‌ ಮೊಬೈಲ್ ಪಡೆಯುವ ಯೋಚನೆ ಇದ್ದರೆ ಇದುವೆ ನಿಮಗೆ ಬೆಸ್ಟ್‌ ಚಾಯ್ಸ್‌ ಎಂದು ಹೇಳಬಹುದು.

ಈ ಮೊಬೈಲ್ ಕ್ಯಾಮೆರಾ ಹೇಗಿದೆ?

ಈ ಮೊಬೈಲ್ ಕ್ಯಾಮೆರಾ ಸಖತ್ ಆಗಿದೆ. ಈ ಮೊಬೈಲ್‌ ಹಿಂಭಾಗದಲ್ಲಿ ವೃತ್ತಾಕಾರದಲ್ಲಿ ಮೂರು ಕ್ಯಾಮೆರಾಗಳನ್ನು ಸೆಟಪ್‌ ಮಾಡಲಾಗಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಹೊಂದಿದ್ದು, ಸೆಕಂಡ್ರಿ ಕ್ಯಾಮೆರಾ 8 ಮೆಗಾ ಪಿಕ್ಸಲ್‌ ಹೊಂದಿದ್ದು. ಸೆಕಂಡ್ರಿ ಕ್ಯಾಮೆರಾ ಅಲ್ಟ್ರಾವೈಡ್‌ಗೆ ಸಹಾಯ ವಾಗುತ್ತದೆ. ಇನ್ನು ಸೆಲ್ಫಿ ಹಾಗೂ ಕರೆಗಳಿಗೆ ಈ ಮೊಬೈಲ್‌ನಲ್ಲಿ 16 ಮೆಗಾ ಪಿಕ್ಸಲ್‌ ಕ್ಯಾಮೆರಾ ನೀಡಲಾಗಿದೆ.

Realme 12 Pro Discount and Features at Flipkart End of Season Sale 2024

ಫೋನ್‌ ಡಿಸ್‌ಪ್ಲೇ, ಪ್ರೊಸೆಸರ್‌ ಹೇಗಿದೆ?

Realme 12 Pro 6.7-ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಕರ್ವ್‌ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 120Hz ರಿಫ್ರೆಶ್ ದರವನ್ನು ಇದು ಒಳಗೊಂಡಿದೆ. ಮತ್ತು 950nits ಗರಿಷ್ಠ ಹೊಳಪನ್ನು ಹೊಂದಿದೆ. ಇದರಲ್ಲಿ ಸ್ನ್ಯಾಪ್‌ ಡ್ರ್ಯಾಗನ್‌ 6 ಜನರೇಷನ್‌ 1 ಚಿಪ್‌ಸೆಟ್ ಅನ್ನು ಹೊಂದಿದೆ. ಫೋನ್ ಆಂಡ್ರಾಯಡ್ 14 ಆಧಾರಿತ ರಿಯಲ್‌ಮಿ UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹ್ಯಾಂಡ್‌ಸೆಟ್ 5,000mAh ಬ್ಯಾಟರಿಯೊಂದಿಗೆ 67W ಸೂಪರ್‌ ವೋಕ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ಈ ಹ್ಯಾಂಡ್‌ಸೆಟ್ ವೈ-ಫೈ 6, ಬ್ಲೂಟೂತ್ 5.2 ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಇದರಲ್ಲಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಒಳಗೊಂಡಿದೆ.

ಈ ಫೋನ್‌ ಬೆಲೆ ಎಷ್ಟು?

Realme 12 Pro 5G ಯ ​​8GB ರ್ಯಾಮ್‌ (RAM) + 128GB ಇಂಟರ್ನಲ್‌ ಸ್ಟೋರೇಜ್‌ ಫೋನ್‌ 21,999 ಲಭ್ಯ. ಇನ್ನೊಂದು ರೂಪಾಂತರ 8GB ರ್ಯಾಮ್‌ (RAM) + 256GB ಇಂಟರ್ನಲ್‌ ಸ್ಟೋರೇಜ್‌ ಫೋನ್‌ ಮತ್ತು 12GB + 256GB ರೂಪಾಂತರಗಳು ರೂ 26,999 ಮತ್ತು ರೂ 24,999 ಗೆ ಲಭ್ಯವಿದೆ.

12GB RAM ಹೊಂದಿರುವ ಫೋನ್, ಇದು 256GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದ್ದು ಇದು 8GB RAM ಅನ್ನು ನೀಡುವ ರೂಪಾಂತರಕ್ಕಿಂತ ಅಗ್ಗವಾಗಿದೆ. Axis Bank, HDFC ಬ್ಯಾಂಕ್, ICICI ಬ್ಯಾಂಕ್ ಮತ್ತು SBI ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಯ ಮೇಲೆ ಖರೀದಿದಾರರು ಹೆಚ್ಚುವರಿ ರೂ 1,000 ರಿಯಾಯಿತಿಯನ್ನು ಪಡೆಯಬಹುದು.

ಬೇಸ್ ಮತ್ತು 12GB ರೂಪಾಂತರಗಳ, ಆಯ್ದ ಮಾದರಿಗಳಲ್ಲಿ ಎಕ್ಸ್‌ಚೇಂಜ್‌ ಮೂಲಕ ನೀವು ಹೆಚ್ಚುವರಿ 1,000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಫೋನ್‌ನಲ್ಲಿ ಇಎಂಐ ಸೌಲಭ್ಯವೂ ಇದೆ. 12 ಪ್ರೊ 5G ನ್ಯಾವಿಗೇಟರ್ ಬೀಜ್ ಮತ್ತು ಸಬ್‌ಮರೀನ್ ಬ್ಲೂ ಶೇಡ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+