Range Rover: ಬ್ರಿಟನ್ ಮೂಲದ ರಾಣಿ "ರೇಂಜ್ ರೋವರ್" ದರ ₹1,00,00,000 ಅರ್ಧದಷ್ಟು ಇಳಿಕೆಯಾಗಿದ್ದೇಕೆ?-ಕಾರಣ ಇಲ್ಲಿದೆ
Range Rover Price Decrease: ಐಷಾರಾಮಿ ಕಾರುಗಳಲ್ಲೊಂದಾದ ಬೃಹತ್ ಮೊತ್ತದ ರೇಂಜ್ ರೋವರ್ ಕಾರಿನ ದರ 1,00,00,000 ರೂಪಾಯಿಗೂ ಹೆಚ್ಚು ಇತ್ತು. ಆದರೆ ಇದೀಗ ಭಾರೀ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಷ್ಟು ಇಳಿಕೆಯಾಗಿದೆ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆಟೋಮೊಬೈಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುತ್ತಲೇ ಇವೆ. ಅಲ್ಲದೆ, ಭಾರೀ ಸ್ಪರ್ಧೆಯೂ ಏರ್ಪಟ್ಟಿದೆ. ಅದರಲ್ಲೂ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕಲ್ ವಾಹನಗಳದ್ದೇ ಸದ್ದು ಜೋರಾಗಿದೆ. ಎಲ್ಲಾ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ ದರದಲ್ಲಿ ಹೊಸ ಮಾದರಿಯ ವಾಹನ (ಕಾರು, ಬೈಕ್)ಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಇದರ ಬೆನ್ನಲ್ಲೇ ಐಷಾರಾಮಿ ಕಾರುಗಳ ಸಾಲಿಗೆ ಸೇರಿದ ರೇಂಜ್ ರೋವರ್ ಕಾರಿನ ದರ ಭಾರೀ ಇಳಿಯಾಗಿದ ಎನ್ನುವ ಮಾಹಿತಿ ಲಭ್ಯವಾಗಿದೆ.

ಬ್ರಿಟನ್ ಮೂಲದ ಇದೀಗ ಭಾರತದಲ್ಲೇ ತಯಾರಾಗುವ ರೇಂಜ್ ರೋವರ್ ಕಾರಿನ ದರ 1,00,00,000 ರೂಪಾಯಿ ಅರ್ಧದಷ್ಟು ಕಡಿಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನು ಮೊದಲಿಗೆ ಬ್ರಿಟೀಷ್ ರಾಣಿಯಂತಲೇ ಕರೆಯಲಾಗುತ್ತಿತ್ತು. ಯಾಕೆಂದರೆ ಇದು ಮೊದಲು ತಯಾರಾಗುತ್ತಿದ್ದುದು ಬ್ರಿಟನ್‌ನಲ್ಲಿ.
ಈ ಕಾರನ್ನು ಸಾಮಾನ್ಯವಾಗಿ ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರೆಟಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಇದೀಗ ಟಾಟಾ ಮಾಲೀಕತ್ವದ ಬ್ರಿಟೀಷ್ ಕಾರಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಇದೀಗ ಭಾರತದಲ್ಲಿಯೇ ತಯಾರಾಗುವ ಲ್ಯಾಂಡ್ ರೋವರ್ ಕಾರುಗಳ ಬೆಲೆಯಲ್ಲಿ ಬರೋಬ್ಬರಿ 56,00,000 ಲಕ್ಷ ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಈ ಐಷಾರಾಮಿ ಕಾರಿಗೆ ಇದೀಗ ಕೈಗೆಟಕುವ ದರದಲ್ಲಿ ಸಿಗುತ್ತಿದೆ ಎನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಕಾರಿನ ಬೆಲೆ ಕಡಿಮೆಯಾಗಲು ಕಾರಣವೇನು?: ಭಾರತದಲ್ಲಿ ಐಷಾರಾಮಿ ಕಾರನ್ನು ಒಂದು ಕೋಟೆಗೆ ಇಳಿಕೆಯಾಗಲು ಪ್ರಮುಖ ಕಾರಣ ಏನೆಂದು ಇಲ್ಲಿ ನೀಡಲಾಗಿದ್ದು, ಇಷ್ಟು ದಿನ ಲಂಡನ್‌ನಲ್ಲಿ ಉತ್ಪಾದನೆಯಾಗಿ, ಭಾರತ ಸೇರಿದಂತೆ ಇತರ ದೇಶಗಳಿಗೆ ಈ ಕಾರು ರಫ್ತಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಲಂಡನ್ ಹೊರಗಡೆ ಜಾಗ್ವಾರ್, ಲ್ಯಾಂಡ್ ರೋವರ್ ಕಾರು ಉತ್ಪಾದನೆಯಾಗುತ್ತಿದೆ. ಇದೀಗ ಭಾರತದಲ್ಲಿ ಜಾಗ್ವಾರ್, ಲ್ಯಾಂಡ್ ರೋವರ್ ಕಾರುಗಳು ಉತ್ಪಾದನೆಯಾಗುತ್ತಿರುವ ಹಿನ್ನೆಲೆ ಬೆಲೆಯಲ್ಲಿ ಭಾರಿ ಇಳಿಕೆ ಆಗಿದ ಎಂದು ತಿಳಿದುಬಂದಿದೆ.
ಇನ್ನು ಪುಣೆಯಲ್ಲಿ ಇದರ ಉತ್ಪಾದನೆ ಕೇಂದ್ರ ಸ್ಥಾಪನೆಯಾಗಿದ್ದು, ಇದೀಗ ಜಾಗ್ವಾರ್ ಲ್ಯಾಂಡ್ ರೋವರ್ ಸಿಕೆಡಿ ಯೂನಿಟ್ ಆಮದು ಮಾಡಿಕೊಂಡು ಪುಣೆ ಘಟಕದಲ್ಲಿ ಜೋಡಣೆ ಮಾಡಲಿದೆ. ಇದರಿಂದ ಶೇಕಡಾ 18ರಿಂದ 22 ರಷ್ಟು ಆಮದು ಸುಂಕ ಕಡಿತ ವಾಗುತ್ತಿದೆ. ಇದರಿಂದ ಗ್ರಾಹಕರಿಗೆ ತುಂಬಾ ಸಹಾಯವಾಗುತ್ತುದೆ. ಇದೀಗ ಕೋಟಿಗೂ ಹೆಚ್ಚು ಬೆಲೆಯ ಐಷಾರಾಮಿ ರೇಂಜ್ ರೋವರ್ ಆಟೋಬಯೋಗ್ರಪಿ ಕಾರು ಕೇಲವ 60,00,000 ಲಕ್ಷ ರೂಪಾಯಿಗೆ ಸಿಗಲಿದೆ. ರೇಂಜ್ ರೋವರ್ ಸ್ಪೋರ್ಟ್ ಕಾರಿನ ಬೆಲೆಯಲ್ಲಿ 40 ಲಕ್ಷ ರೂಪಾಯಿ ಇಳಿಕೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications