ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ: ವೈದ್ಯಕೀಯ ಪರೀಕ್ಷೆಗಳು ಹೇಗೆ? ಪೋಕ್ಸೋ ಕೇಸ್ ತನಿಖೆ ಹೇಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಮುರುಘಾ ಶ್ರೀ ಶಿವಮೂರ್ತಿ ಸ್ವಾಮೀಜಿಗಳ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ದೂರಿನ ಆಧಾರದಲ್ಲಿ ಅಪ್ರಾಪ್ತ ಸಂತ್ರಸ್ತೆಯರಿಗೆ ಮೆಡಿಕಲ್ ಮಾಡಿಸಲಾಗಿದೆ. ಮುರುಘಾ ಶ್ರೀಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ಪೋಕ್ಸೋ ಕಾಯ್ದೆ ಅನ್ವಯ ಏನೇನಾಗುತ್ತೆ ಅನ್ನೋದರ ವಿಶೇಷ ವರದಿಯಿಲ್ಲದೆ.

ಪೋಕ್ಸೋ ಕಾಯ್ದೆಯಿಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಪ್ರಮುಖವಾಗಿ ಕಾರಣವಾಗುವುದೇ ಅಪ್ರಾಪ್ತರು ನೀಡುವ ಹೇಳಿಕೆ. ಸುಮಾರು 15 ವರ್ಷವಯಸ್ಸಿನ ಮಕ್ಕಳ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂಬುದು ಮಕ್ಕಳು ಮಾಡಿರುವ ಪ್ರಮುಖವಾದ ಆರೋಪವಾಗಿದೆ. ಮಕ್ಕಳ ಆರೋಪಕ್ಕೆ ಉತ್ತರ ಸಿಗುವುದು ಕಷ್ಟದ ವಿಚಾರವಲ್ಲ.

 ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣ: ದೌರ್ಜನ್ಯಕ್ಕೊಳಗಾದ ಮಕ್ಕಳು ಬೆಂಗಳೂರಿಗೆ ಬಂದಿದ್ದೇಕೆ? ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣ: ದೌರ್ಜನ್ಯಕ್ಕೊಳಗಾದ ಮಕ್ಕಳು ಬೆಂಗಳೂರಿಗೆ ಬಂದಿದ್ದೇಕೆ?

ಮಕ್ಕಳು ಆರೋಪವನ್ನು ಮಾಡಿದ ಮೇಲೆ ಮತ್ತು ದೂರು ದಾಖಲಾದ ನಂತರದಲ್ಲಿ ಮಕ್ಕಳ ಹೇಳಿಕೆಯನ್ನು ದಾಖಸಿಕೊಳ್ಳಲಾಗಿದೆ. ಮಕ್ಕಳ ಹೇಳಿಕೆ ಆಧಾರವಾಗಿಟ್ಟುಕೊಂಡು ಮಕ್ಕಳಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯನ್ನು ಮುಗಿಸಿರುವ ಪೊಲೀಸರು ಮಕ್ಕಳ ಹೇಳಿಕೆಯನ್ನು ಅಧಿಕೃತವಾಗಿ ಕೊಡಿಸಲಿದ್ದಾರೆ. ಸಿಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಕ್ಕಳು ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ದಾಖಲಿಸಲಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿನ ರಿಪೋರ್ಟ್‌ ಸಹ ಮುಖ್ಯವೇ

ವೈದ್ಯಕೀಯ ಪರೀಕ್ಷೆಯಲ್ಲಿನ ರಿಪೋರ್ಟ್‌ ಸಹ ಮುಖ್ಯವೇ

ಮಕ್ಕಳು ಅಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯವನ್ನು ಎಸಗಿದರೆ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ. ಪೋಕ್ಸೋ ಕಾಯ್ದೆಯಲ್ಲಿ ಮಕ್ಕಳ ಹೇಳಿಕೆಯೇ ಪ್ರಮುಖವಾಗಿರುತ್ತದೆ. ಮಕ್ಕಳು ಹೇಳಿಕೆಯನ್ನು ನೀಡುವ ಸಮಯದಲ್ಲಿ ತಮ್ಮ ಮೇಲೆ ಅತ್ಯಾಚಾರವಾಗಿದೆಯೇ, ಬಲವಂತವಾಗಿ ಸೆಕ್ಸ್ ನಡೆಸಿದ್ದಾರೆಯೇ, ಅಥವಾ ಪ್ರೈವೆಟ್ ಪಾರ್ಟ್‌ಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾರೆಯೇ ಹೇಳಿರುತ್ತಾರೆ. ಆ ಹೇಳಿಕೆಯ ಆಧಾರದಲ್ಲಿಯೇ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮುರುಘಾ ಶ್ರೀಗಳ ಮೇಲೆ ದೂರನ್ನು ನೀಡಿರುವ ಮಕ್ಕಳು ಸಹ ಈಗಾಗಲೇ ಮೆಡಿಕಲ್ ಟೆಸ್ಟ್‌ಗೆ ಒಳಗಾಗಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಸಾಕ್ಷಿ

ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಸಾಕ್ಷಿ

ಮುರುಘಾ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಒಡನಾಡಿ ಸಂಸ್ಥೆ ಮುಖ್ಯಸ್ಥರೊಂದಿಗೆ ಮತ್ತು ಕೌನ್ಸಲಿಂಗ್ ಮಾಡಿದವರ ಬಳಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಹೇಳಿಕೆಯನ್ನೇ ಮಕ್ಕಳು ಪೊಲೀಸರ ಮುಂದೆ ಹೇಳಿದ್ದರು. ಇದಕ್ಕಾಗಿಯೇ ಮಕ್ಕಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಇಂಟರ್ ಕೋರ್ಸ್‌ ಆಗಿಯೇ ಇಲ್ಲವೋ ಎಂಬುದು ತಿಳಿದುಬರಲಿದೆ. ಅಂದರೆ ಮಕ್ಕಳಿನ್ನು ಸಂಬೋಗಕ್ಕೆ ಬಳಸಿದ್ದಾರೋ ಇಲ್ಲವೋ ತಿಳಿದು ಬರಲಿದೆ. ಆದರೆ ಯಾರು ನಿರಂತರವಾಗಿ ಸಂಭೋಗಿಸಿದ್ದಾರೆ ಎಂಬುದು ತಿಳಿದು ಬರುವುದಿಲ್ಲ. ಇದಕ್ಕಾಗಿಯೇ ಸಂತ್ರಸ್ತ ಮಕ್ಕಳ ಹೇಳಿಕೆಯೇ ಮುಖ್ಯವಾಗಿರುತ್ತದೆ. ಮಕ್ಕಳ ತಮ್ಮ ಮೇಲೆ ಯಾರು ದೌರ್ಜನ್ಯ ಎಸಗಿದ್ದಾರೆ ಎಂಬುದು ತಿಳಿಸುತ್ತಾರೆಯೇ ಅವರೇ ಆರೋಪಿಗಳಾಗಿರುತ್ತಾರೆ. ಇನ್ನು ಸಂತ್ರಸ್ತೆಯರಿಗೆ ಶ್ರೀಗಳು ಸಂಭೋಗವನ್ನು ನಡೆಸಿಲ್ಲ ಎನ್ನುವುದಾದರೇ ಬೇರೆಯವರು ನಡೆಸಿದ್ದಾರೆ ಎಂಬುದನ್ನು ಸಾಕ್ಷ್ಯಾಧಾರಗಳ ಸಹಿತವಾಗಿ ಸಾಬೀತು ಮಾಡಬೇಕಾಗುತ್ತದೆ.

ಶ್ರೀಗಳಿಗೆ ಯಾವ ರೀತಿ ಪರೀಕ್ಷೆ?

ಶ್ರೀಗಳಿಗೆ ಯಾವ ರೀತಿ ಪರೀಕ್ಷೆ?

ಮುರುಘಾ ಶ್ರೀ ಶಿವಮೂರ್ತಿ ಶರಣರುಗಳನ್ನು ಪೊಲೀಸರು ಬಂಧಿಸಲಿ ಬಂಧಿಸದೇ ಇರಲಿ ಪೊಲೀಸರು ಸಂತ್ರಸ್ತೆಯರು ಆರೋಪವನ್ನು ಮಾಡಿರುವುದರಿಂದ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಶ್ರೀಗಳಿಗೆ ಸೆಕ್ಸ್‌ ಮಾಡಲು ಶಕ್ತರಾಗಿದ್ದಾರೆಯೇ ಎಂಬ ವಿಚಾರದಲ್ಲಿ ಪರೀಕ್ಷೆಯು ನಡೆಯುತ್ತದೆ. ಶಿಶ್ನವು ನಿಮುರುವಿಕೆಯ ಬಗ್ಗೆಯಷ್ಟೇ ಪರೀಕ್ಷೆ ನಡೆಯುತ್ತದೆಯೇ ವಿನಃ ಸ್ವಾಮೀಜಿಯ ಪುರುಷತ್ವ ಪರೀಕ್ಷೆಯಾಗಲಿ, ವೀರ್ಯದ ಪರೀಕ್ಷೆಯಾಗಲಿ, ಮಕ್ಕಳಾಗುವ ಸಾಮರ್ಥ್ಯವಿದೆಯೇ ಎಂಬುದಾಗಲಿ ಪರೀಕ್ಷೆಯನ್ನು ನಡೆಸುವುದಿಲ್ಲ.

ಪೋಕ್ಸೋ ಕಾಯ್ದೆಯಲ್ಲಿ ಜಾಮೀನು ಪಡೆಯಬಹುದೇ?

ಪೋಕ್ಸೋ ಕಾಯ್ದೆಯಲ್ಲಿ ಜಾಮೀನು ಪಡೆಯಬಹುದೇ?

ಪೋಕ್ಸೋ ಕಾಯ್ದೆಯಲ್ಲಿ ಸಾಮಾನ್ಯವಾಗಿ ಜಾಮೀನು ಸಿಗುವುದು ಡೌಟ್ ಎಂದೇ ಎಲ್ಲರು ಭಾವಿಸಿರುತ್ತಾರೆ. ಆದರೆ ಶ್ರೀಗಳ ಮೇಲೆ ದುರುದ್ದೇಶ ಪೂರಕವಾಗಿ ಆರೋಪವನ್ನು ಮಾಡಲಾಗಿದೆ ಎಂಬುದು ತಿಳಿದುಬಂದರೆ. ಅಥವಾ ಸ್ವಾಮೀಜಿ ಎಲ್ಲಿಯೂ ತಪ್ಪಿಸಿಕೊಂಡು ಪಲಾಯನ ಮಾಡುವುದಿಲ್ಲ ಎಂದು ತಿಳಿದು ಬಂದರೆ. ನ್ಯಾಯಾಧೀಶರು ತಮ್ಮ ವಿವೇಚನೆಗೆ ಅನುಗುಣವಾಗಿ ಜಾಮೀನನ್ನು ಪಡೆಯಬಹುದಾಗಿದೆ.

English summary
POCSO Case against Shivamurthy Murugha Sharanaru; Know what is this case and what actions will be taken in POCSO case, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X