ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ: ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಸೆ. 15: ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹುಟ್ಟಿದ ದಿನವಾದ ಇಂದು ಇಂಜಿನಿಯರ್ಸ್ ಡೇ ಅಥವಾ ಅಭಿಯಂತರರ ದಿನವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಜನತೆಗೆ ಶುಭ ಕೋರಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ ಶ್ಲಾಘಿಸಿದ್ದಾರೆ.

"ಇಂಜಿನಿಯರ್ಸ್ ದಿನದಂದು ಎಲ್ಲಾ ಅಭಿಯಂತರರಿಗೂ ಶುಭಾಶಯಗಳು. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಪ್ರತಿಭಾನ್ವಿತ ಇಂಜಿನಿಯರ್‌ಗಳ ಬಳಗ ಇರುವುದು ನಮ್ಮ ದೇಶದ ಪುಣ್ಯ. ಇನ್ನಷ್ಟು ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವುದನ್ನೂ ಒಳಗೊಂಡು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಸೌಕರ್ಯ ವ್ಯವಸ್ಥೆ ಹೆಚ್ಚಿಸಲು ಸರಕಾರ ಶ್ರಮಿಸುತ್ತಿದೆ.

Engineers' Day 2022 : ಭಾರತದ ಜೊತೆ ತಾಂಜಾನಿಯಾ, ಶ್ರೀಲಂಕಾದಲ್ಲೂ ವಿಶ್ವೇಶ್ವರಯ್ಯರ ಜನ್ಮದಿನದಂದು ಎಂಜಿನಿಯರ್ಸ್ ಡೇEngineers' Day 2022 : ಭಾರತದ ಜೊತೆ ತಾಂಜಾನಿಯಾ, ಶ್ರೀಲಂಕಾದಲ್ಲೂ ವಿಶ್ವೇಶ್ವರಯ್ಯರ ಜನ್ಮದಿನದಂದು ಎಂಜಿನಿಯರ್ಸ್ ಡೇ

"ಇಂಜಿನಿಯರ್ಸ್ ಡೇಯಂದು ನಾವು ಸರ್ ಎಂ ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸ್ಮರಿಸುತ್ತೇವೆ. ಭವಿಷ್ಯದ ಇಂಜಿನಿಯರುಗಳಿಗೆ ವಿಶ್ವೇಶ್ವರಯ್ಯನವರ ಪ್ರೇರಣೆ ಹೀಗೇ ಮುಂದುವರಿಯಲಿ" ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಎಂಜಿನಿಯರ್‌ಗಳ ಬಗ್ಗೆ ತಮ್ಮ ಹಿಂದಿನ ಮನ್ ಕೀ ಬಾತ್ ಕಾರ್ಯಕ್ರಮವೊಂದರಲ್ಲಿ ತಾವು ಮಾತನಾಡಿದ ತುಣಕೊಂದನ್ನೂ ಪ್ರಧಾನಿಗಳು ಈ ವೇಳೆ ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.

 PM Narendra Modi Speech On Engineers Day: Govt to Enhance Infrastructure for Studying Engineering

ವಿಶ್ವೇಶ್ವರಯ್ಯ ಜನ್ಮದಿನ

ಸರ್ ಎಂ ವಿಶ್ವೇಶ್ವರಯ್ಯನವರ ಹೆಸರು ಕೇಳದ ಕನ್ನಡಿಗರು ಬಹುತೇಕ ಇಲ್ಲ. ಭಾರತದ ಅತ್ಯಂತ ಪ್ರತಿಭಾನ್ವಿತ ಇಂಜಿನಿಯರ್ ಎಂಬ ಖ್ಯಾತಿ ಅವರದ್ದು. ಮೈಸೂರಿನ ದಿವಾನರಾಗಿದ್ದ ಅವರು ರಾಜ್ಯದಲ್ಲಿ ಹಲವು ಮಹತ್ವದ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ದೇಶ ವಿದೇಶಗಳಲ್ಲಿ ಅವರ ಇಂಜಿನಿಯರಿಂಗ್ ಕೌಶಲ್ಯ ಕಾಣಸಿಗುತ್ತದೆ.

ಬ್ರಿಟಿಷರಿಂದಲೂ ಶ್ಲಾಘನೆಗೊಳಗಾಗಿ ಸರ್ ಬಿರುದು ಪಡೆದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಬಹಳ ಬಡತನದಲ್ಲಿ ಬೆಳೆದು ಉನ್ನತ ಹಂತಕ್ಕೆ ಏರಿದ್ದರು. ಕೆಆರ್‌ಎಸ್ ಅಣೆಕಟ್ಟು ಇತ್ಯಾದಿ ಅನೇಕ ಮಹತ್ವದ ಕಟ್ಟಡಗಳ ನಿರ್ಮಾಣ ಅವರಿಂದಲೇ ಸಾಧ್ಯವಾಗಿತ್ತು.

ಈಗ ಇಂಜಿನಿಯರ್ಸ್‌ಗೆ ಮಹತ್ವದ ಕಾಲ

ಭಾರತದಲ್ಲಿ ವಿವಿಧ ಸೌಕರ್ಯ ಯೋಜನೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂಜಿನಿಯರ್‌ಗಳ ಪಾತ್ರ ಬಹಳ ದೊಡ್ಡದಿದೆ. ನಮ್ಮ ಆರ್ಥಿಕ ಪ್ರಗತಿಗೆ ಬೇಕಾದ ಪ್ರತಿಯೊಂದು ವಲಯಕ್ಕೂ ಇಂಜಿನಿಯರ್‌ಗಳ ಸೇವೆ ಅನಿವಾರ್ಯ. ರಾಷ್ಟ್ರೀಯ ಹೆದ್ದಾರಿಗಳಿಂದ ಹಿಡಿದು, ಮೆಟ್ರೋ, ಏರ್‌ಪೋರ್ಟ್, ಸಾಫ್ಟ್‌ವೇರ್ ಇತ್ಯಾದಿ ಎಲ್ಲದಕ್ಕೂ ಎಂಜಿನಿಯರ್‌ಗಳಿಗೆ ಬೇಡಿಕೆ ಇದೆ, ಅಗತ್ಯತೆ ಇದೆ.

 PM Narendra Modi Speech On Engineers Day: Govt to Enhance Infrastructure for Studying Engineering

ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಪ್ರತೀ ವರ್ಷ 5 ಲಕ್ಷ ಹೊಸ ಇಂಜಿನಿಯರ್‌ಗಳು ಅಡಿ ಇಡುತ್ತಾರೆ. ಸಿವಿಲ್, ಆರ್ಕಿಟೆಕ್ಚರ್ ಕೋರ್ಸ್ ಕೊಡುವ 500 ಕಾಲೇಜುಗಳು ದೇಶದಲ್ಲಿವೆ. ಭವಿಷ್ಯದಲ್ಲಿ ನಡೆಯುವ ದೊಡ್ಡ ಮೊತ್ತದ ರಸ್ತೆ, ಕಟ್ಟಡ ನಿರ್ಮಾಣ ಕಾರ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಇಂಜಿನಿಯರ್‌ಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಅಗತ್ಯತೆ ಇದೆ. ಹಾಗೆಯೇ, ಪರಿಸರಪೂರಕ ನಿರ್ಮಾಣ ತಂತ್ರಜ್ಞಾನ ಗೊತ್ತಿರುವ ಎಂಜಿನಿಯರ್‌ಗಳ ಅಗತ್ಯತೆ ಮುಂದಿನ ದಿನಗಳಲ್ಲಿ ಬಹಳ ಇದೆ.

ಭಾರತದಿಂದ ಹೊರಹೊಮ್ಮುವ ಒಟ್ಟಾರೆ ಕಾರ್ಬನ್ ಡೈ ಆಕ್ಸೈಡ್‌ನಲ್ಲಿ ಕಟ್ಟಡ ನಿರ್ಮಾಣದಿಂದಲೇ ಮೂರನೇ ಐದರಷ್ಟು ಪಾಲು ಇದೆ. ಹೀಗಾಗಿ, ಪರಿಸರ ಪೂರಕ ರೀತಿಯಲ್ಲಿ ಕಟ್ಟಡ ನಿರ್ಮಾಣ ಶೈಲಿಯನ್ನು ಬದಲಿಸುವ ಅಗತ್ಯ ಇದೆ ಎಂದು ತಜ್ಞರು ಹೇಳುತ್ತಾರೆ.

ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಇಂಜಿನಿಯರಿಂಗ್ ಶಿಕ್ಷಣದ ಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆ ತರುವ ಅಗತ್ಯತೆ ಇದೆ. ಹಾಗೆಯೇ, ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗುತ್ತದೆ.

ಇಂಜಿನಿಯರಿಂಗ್ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿ ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಮಾತುಗಳನ್ನಾಡಿರುವುದು ಸ್ವಾಗತಾರ್ಹ. ಅವರ ಮಾತು ಆದಷ್ಟೂ ಬೇಗ ಆಚರಣೆ ಬಂದಲ್ಲಿ ಭಾರತದ ರಾಷ್ಟ್ರ ನಿರ್ಮಾಣ ಇನ್ನಷ್ಟು ಬೇಗ ಆಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Prime Minister Narendra Modi has greeted people on Engineers' day, and said that our country is blessed to have talent pool of engineers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X