ಥಾಮಸ್ ಕಪ್ ಗೆದ್ದ ಭಾರತ ಹೊಸ ಇತಿಹಾಸ; ಪ್ರಧಾನಿ ಶ್ಲಾಘನೆ
ಬ್ಯಾಂಕಾಕ್, ಮೇ 15: ಭಾರತ ಬ್ಯಾಡ್ಮಿಂಟನ್ ತಂಡ ಥಾಮಸ್ ಕಪ್ ಟೂರ್ನಿ ಗೆದ್ದು ಹೊಸ ಇತಿಹಾಸ ಬರೆದಿದೆ. ಇದು ಬ್ಯಾಡ್ಮಿಂಟನ್ ಮಾತ್ರವಲ್ಲ ಭಾರತೀಯ ಕ್ರೀಡೆಗೆ ಒಂದು ಶ್ರೇಯ ನೀಡುವ ಗೆಲುವು. ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಥಾಮಸ್ ಕಪ್ ಗೆದ್ದಿರುವುದು.
ಥಾಯ್ಲೆಂಡ್ ದೇಶದ ರಾಜಧಾನಿಯಲ್ಲಿ ನಡೆದ ಥಾಮಸ್ ಕಪ್ 2022 ಟೂರ್ನಿಯ ಫೈನಲ್‌ನಲ್ಲಿ ಪ್ರಬಲಾತಿಪ್ರಬಲ ಬ್ಯಾಡ್ಮಿಂಟನ್ ತಂಡವೆನಿಸಿದ ಇಂಡೋನೇಷ್ಯಾವನ್ನು 3-0ಯಿಂದ ಭಾರತ ಸೋಲಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ತಂಡವೊಂದು 14 ಬಾರಿ ಚಾಂಪಿಯನ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದ್ದು ಕಡಿಮೆ ಸಾಧನೆಯಲ್ಲ. ಇದು ಟೆನಿಸ್‌ನಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಷ್ಟೇ ಪ್ರಮುಖ ಘಟ್ಟ.
ಪುರುಷರಿಗಾಗಿ ಆಡಿಸಲಾಗುವ ಥಾಮಸ್ ಕಪ್ ಮತ್ತು ಮಹಿಳೆಯರಿಗಾಗಿ ನಡೆಸುವ ಊಬರ್ ಕಪ್‌ಗಳ 70 ವರ್ಷ ಇತಿಹಾಸದಲ್ಲಿ ಭಾರತ ಹಿಂದೆಂದೂ ಫೈನಲ್ ತಲುಪಿರಲಿಲ್ಲ. ಥಾಮಸ್ ಕಪ್‌ನಲ್ಲಿ 1952, 1955 ಮತ್ತು 1979ರಲ್ಲಿ ಮೂರು ಬಾರಿ ಭಾರತ ತಂಡಗಳು ಈ ಹಿಂದೆ ಸೆಮಿಫೈನಲ್ ತಲುಪಿದ್ದವು. ಊಬರ್ ಕಪ್‌ನಲ್ಲಿ 2014 ಮತ್ತು 2016ರಲ್ಲಿ ಮಾತ್ರ ಭಾರತ ಮಹಿಳಾ ತಂಡಗಳು ಸೆಮಿಫೈನಲ್‌ವರೆಗೂ ಹೋಗಿದ್ದವು. ಅವಷ್ಟೇ ಭಾರತದ ಗರಿಷ್ಠ ಸಾಧನೆ ಎನಿಸಿತ್ತು.

ಇಂದು ಭಾನುವಾರ ಮುಕ್ತಾಯಗೊಂಡ ಹಣಾಹಣಿಯಲ್ಲಿ ಭಾರತದ 20 ವರ್ಷದ ಲಕ್ಷ್ಯ ಸೇನ್ ಇಂಡೋನೇಷ್ಯಾದ ಒಲಿಂಪಿಕ್ಸ್ ಪದಕ ವಿಜೇತ ಆಂಥೋನಿ ಗಿನ್‌ಟಿಂಗ್‌ರನ್ನು 8-21, 21-17, 21-16ರಿಂದ ಸೋಲಿಸಿದರು. ಎರಡನೇ ಪಂದ್ಯದಲ್ಲಿ ಭಾರತದ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2-1 ಗೇಮ್‌ಗಳಿಂದ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೋ ಜೋಡಿಯನ್ನು ಮಣಿಸಿದರು. ಮೂರನೇ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ನೇರ ಗೇಮ್‌ಗಳಿಂದ ಜೋನಾತನ್ ಕ್ರಿಸ್ಟೀಯನ್ನು ಪರಾಭವಗೊಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
HISTORY🇮🇳CREATED !
— Anurag Thakur (@ianuragthakur) May 15, 2022
Congratulations to the Indian men’s badminton team’s for winning the Thomas Cup!
This extraordinary feat, with succesive victories over Malaysia, Denmark and Indonesia, calls for matching honour by the nation.
1/2 pic.twitter.com/P3bTgsdtOS
ಪ್ರಧಾನಿ ಮೋದಿ ಅಭಿನಂದನೆ:
ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಹೇಳಿದ್ದಾರೆ. "ಭಾರತೀಯ ಬ್ಯಾಡ್ಮಿಂಟನ್ ಹೊಸ ಇತಿಹಾಸ ರಚಿಸಿದೆ. ಥಾಮಸ್ ಕಪ್‌ನಲ್ಲಿ ಭಾರತದ ಗೆಲುವಿನಿಂದ ಇಡೀ ದೇಶವೇ ಸಂಭ್ರಮಪಡುವಂತಾಗಿದೆ. ನಮ್ಮ ಹೆಮ್ಮೆಯ ತಂಡಕ್ಕೆ ಅಭಿನಂದನೆಗಳು. ಅವರ ಮುಂದಿನ ಹೆಜ್ಜೆಗಳಿಗೆ ಶುಭ ಹಾರೈಸುತ್ತೇನೆ. ಮುಂಬರುವ ಕ್ರೀಡಾಪಟುಗಳಿಗೆ ಈ ಸಾಧನೆ ಒಂದು ಪ್ರೇರಣೆಯಾಗುತ್ತದೆ," ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
The Indian badminton team has scripted history! The entire nation is elated by India winning the Thomas Cup! Congratulations to our accomplished team and best wishes to them for their future endeavours. This win will motivate so many upcoming sportspersons.
— Narendra Modi (@narendramodi) May 15, 2022
ಒಂದು ಕೋಟಿ ಬಹುಮಾನ ಘೋಷಣೆ:
14 ಬಾರಿ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಥಾಮಸ್ ಕಪ್ ಗೆದ್ದ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಒಂದು ಕೋಟಿ ರೂ ನಗದು ಬಹುಮಾನ ಪ್ರಕಟಿಸಿದ್ದಾರೆ. ಹಾಗೆಯೇ, ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೋನೇಷ್ಯಾ ತಂಡಗಳನ್ನು ಸತತವಾಗಿ ಸೋಲಿಸಿರುವುದು ಅಸಾಮಾನ್ಯ ಸಾಧನೆ ಎಂದೂ ಅನುರಾಗ್ ಠಾಕೂರ್ ತಮ್ಮ ಟ್ವೀಟ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ಧಾರೆ. ಥಾಮಸ್ ಕಪ್ ಗೆದ್ದ ಭಾರತದ ತಂಡದಲ್ಲಿ ಕಿದಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣಯ್, ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ ಮೊದಲಾದವರು ಇದ್ದರು.
(ಒನ್ಇಂಡಿಯಾ ಸುದ್ದಿ)
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications