ಸಮುದ್ರ ತೀರದಲ್ಲಿ ಏಲಿಯನ್ ನಂತಹ ವಸ್ತು ಕಂಡು ಹೆದರಿದ ಜನ
ಸಮುದ್ರದೊಳಗೆ ಒಂದು ನಿಗೂಢ ಪ್ರಪಂಚವಿದೆ. ಅದರೊಳಗೆ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಮೀನುಗಳು ಮತ್ತು ಸಮುದ್ರ ಜೀವಿಗಳಿವೆ. ಡೈವರ್‌ಗಳು ಪ್ರತಿದಿನ ಅಂತಹ ಅಪರೂಪದ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಇನ್ನೂ ಅನೇಕ ವಿಷಯಗಳು ನಮ್ಮನ್ನು ಆಶ್ಚರ್ಯಗೊಳಿಸುತ್ತವೆ. ದಕ್ಷಿಣ ಆಫ್ರಿಕಾದ ಕಡಲತೀರದಲ್ಲಿ ಅಂತಹ ಒಂದು ದೃಶ್ಯ ಕಂಡುಬಂದಿದೆ. ಸಮುದ್ರ ತೀರದಲ್ಲಿ ಏಲಿಯನ್ ನಂತಹ ವಸ್ತು ಕಂಡುಬಂದಿದೆ. ಜನರು ಇದನ್ನು ಅನ್ಯಲೋಕದ ವಸ್ತು ಎಂದು ಪರಿಗಣಿಸಿ ಭಯಭೀತರಾಗಿದ್ದಾರೆ. ಸಮುದ್ರ ತೀರಕ್ಕೆ ಹೋಗಲು ಹೆದರುತ್ತಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ವ್ಯಕ್ತಿಯೊಬ್ಬರು ಶೇರ್ ಮಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಸಮುದ್ರದಿಂದ ಹೊರಬರುವ ವಿದೇಶಿಯರು ಎಂದು ಬರೆಯುವ ಮೂಲಕ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ವರದಿಯ ಪ್ರಕಾರ, ಜಾನ್ ವೋರ್ಸ್ಟರ್ ಎಂಬ ವ್ಯಕ್ತಿ ದಕ್ಷಿಣ ಆಫ್ರಿಕಾದ ಫೇಸ್‌ಬುಕ್ ಗುಂಪಿನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲಿಂದ ಅದು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.
ಫೋಟೋದಲ್ಲಿ ಭಯಾನಕವಾಗಿ ಕಾಣುವ ಈ ವಸ್ತುವಿನ ಮಹತ್ವವನ್ನು ತಿಳಿದು ಜನರು ಆಶ್ಚರ್ಯಚಕಿತರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಕಡಲ ತೀರದಲ್ಲಿ ಈ ದೃಶ್ಯವನ್ನು ಜಾನ್ ವೋರ್ಸ್ಟರ್ ಕಂಡರು. ಇವುಗಳು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಅಲೋವೆರಾದ ಸತ್ತ ಸಸ್ಯಗಳಂತೆ ಇವು ಕಾಣುತ್ತವೆ ಎಮದು ಬರೆದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಮೂಡಿಸಿದೆ.

ಈ ಫೋಟೋವನ್ನು ಹಂಚಿಕೊಂಡಿರುವ ವೋರ್ಸ್ಟರ್, ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಈ ದೃಶ್ಯ ಕಂಡು ನನಗೆ ಆಶ್ಚರ್ಯವಾಯಿತು. ಜನರು ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ವೆಸ್ಟರ್ನ್ ಕೇಪ್‌ನ ಸ್ಟಿಲ್ ಬೇನಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ವೋರ್ಸ್ಟರ್ ಹೇಳಿದ್ದಾರೆ.
ನನ್ನ ಈ ಫೋಟೋವನ್ನು ನೋಡಿದ ಅನೇಕ ಜನರು ಈ ಅನ್ಯಲೋಕದ ವಸ್ತುವನ್ನು ಸಮುದ್ರ ರಾಕ್ಷಸ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಅವರು ಹೇಳಿದರು. ಇದರೊಂದಿಗೆ ಜನ ನೀರಿನಲ್ಲಿ ಹೋಗುವುದು ಸುರಕ್ಷಿತವೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಫೋಟೋಗಳಿಂದ ಸಮುದ್ರಕ್ಕೆ ಜನ ಇಳಿಯಲು ಆತಂಕಗೊಂಡಿದ್ದಾರೆ. "ಇಂತಹ ದೃಶ್ಯ ನನ್ನ ರಜೆಯನ್ನು ಹಾಳು ಮಾಡಿದೆ. ನನಗೆ ಈಜಲು ಬರುವುದಿಲ್ಲ. ನಾನು ಈಗಾಗಲೇ ಶಾರ್ಕ್‌ಗಳಿಗೆ ಹೆದರುತ್ತಿದ್ದೇನೆ" ಎಂದು ಒಬ್ಬ ಫೇಸ್‌ಬುಕ್ ಬಳಕೆದಾರನೊಬ್ಬ ನರೆದಿದ್ದಾರೆ.












Click it and Unblock the Notifications