ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳ್ಳವರಿಗಷ್ಟೇ ಉಳ್ಳಾಗಡ್ಡಿ, ಮಿಕ್ಕವರಿಗೆ ಕಣ್ಣೀರೇ ಗಟ್ಟಿ!

|
Google Oneindia Kannada News

'ಉಳ್ಳಾಗಡ್ಡಿ ಇಲ್ಲಾಂದ್ರ ಊಟ ಹೆಂಗ್ ಆಗ್ತೈತಿ? ಬೆಳ್ಗಿ ನಾಷ್ಟಾದಿಂದ ಹಿಡ್ದು ಸಂಜಿ ಸ್ನ್ಯಾಕ್ಸ್ ಗೂ ನಮ್ಗ್ ಉಳ್ಳಾಗಡ್ಡಿ ಇದ್ರೆನೇ ಚೊಲೋ. ತಿನ್ನೋಕೇನೋ ಶಾನೆ ರುಚಿ, ಆದ್ರೆ ರೊಕ್ಕ ಮಾತ್ರ ಕೇಳ್ ಬ್ಯಾಡ್ರಿ...' ಅಂತ ಈರುಳ್ಳಿ ದರ ಏರಿಕೆಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ಸದ್ಯಕ್ಕೆ ಸರ್ವೇ ಸಾಮಾನ್ಯ.

ಒಂದು ಕೆಜಿ ಈರುಳ್ಳಿಗೆ ಕನಿಷ್ಠ 100 ರೂಪಾಯಿ ತೆರುವ ಸಂದರ್ಭದಲ್ಲಿ, ಒಂದು ಕಾಲದಲ್ಲಿ ಬೇಡಿಕೆಯೇ ಇಲ್ಲದೆ 20 ರೂಪಾಯಿಗೆಲ್ಲ ಚೀಲದ ತುಂಬ ಸಿಗುತ್ತಿದ್ದ ಈರುಳ್ಳಿ ಅಣಕ ಮಾಡಿದಂತೆನ್ನಿಸುತ್ತದೆ. ಸದ್ಯಕ್ಕೆ ಈರುಳ್ಳಿ ಕೊಳ್ಳುವವರೆಂದರೆ 'ಉಳ್ಳವನು' ಎಂಬಂಥ ಪರಿಸ್ಥಿತಿ ಇದೆ.

ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ! ಸರ್ಕಾರ ಬೀಳೋದು ಗ್ಯಾರಂಟಿ?ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ! ಸರ್ಕಾರ ಬೀಳೋದು ಗ್ಯಾರಂಟಿ?

ಈರುಳ್ಳಿ ದರವನ್ನು ಅಣಕಿಸುವ ಸಾಕಷ್ಟು ಜೋಕುಗಳು, ಮೀಮ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಲೆ ಏರಿಕೆಗಾಗಿ ಕೇಂದ್ರ ಸರ್ಕಾರವನ್ನು ಹಳಿವ ಕ್ರಿಯೆಯೂ ನಡೆದಿದೆ. ಈರುಳ್ಳಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಕಂಡ ಕೆಲವು ಜೋಕ್ ಗಳು ಇಲ್ಲಿವೆ.

ದುಬಾರಿ ಶಾಪಿಂಗ್

ದುಬಾರಿ ಶಾಪಿಂಗ್

ದುಬಾರಿ ವೀಕೆಂಡ್ ಶಾಪಿಂಗ್ ಎಂದು ಎರಡು ಈರುಳ್ಳಿ ಚಿತ್ರವನ್ನಿ ಟ್ವೀಟ್ ಮಾಡಿದ್ದಾರೆ ರಿತುಪರ್ಣ ನಾಥ್.

ಹೂಡಿಕೆ ಆಯ್ಕೆ

ಹೂಡಿಕೆ ಆಯ್ಕೆ

ಸದ್ಯಕ್ಕಿರುವ ಹೂಡಿಕೆ ಆಯ್ಕೆ

೧. ಸ್ಟಾಕ್ ಮಾರ್ಕೆಟ್

೨. ಈರುಳ್ಳಿ ಮಾರ್ಕೆಟ್

ಎಂದು ಕಿಚಾಯಿಸಿದ್ದಾರೆ ಮಹೇಶ್ ಮದನಗಲ್ಲು.

 ಶತಕ ಬಾರಿಸಿದ ಈರುಳ್ಳಿ! ಕತ್ತರಿಸುವಾಗಷ್ಟೇ ಅಲ್ಲ, ಕೊಳ್ಳುವಾಗಲೂ ಕಣ್ಣೀರು! ಶತಕ ಬಾರಿಸಿದ ಈರುಳ್ಳಿ! ಕತ್ತರಿಸುವಾಗಷ್ಟೇ ಅಲ್ಲ, ಕೊಳ್ಳುವಾಗಲೂ ಕಣ್ಣೀರು!

ಮುಗ್ಧ ಮಗುವಿನ ಪತ್ರ

ಮುಗ್ಧ ಮಗುವಿನ ಪತ್ರ

ದೇವರಿಗೆ ಪತ್ರ ಬರೆದ ಮುಗ್ಧ ಮಗುವೊಂದು ಕೇಳಿಕೊಳ್ಳುತ್ತಿತ್ತು....

ಒಂದು ಡಾಲರ್ ಗೆ 72 ರೂ.

ಪೆಟ್ರೋಲ್ ಗೆ 70 ರೂ.

ಹಾಲು 50 ರೂ.

ಈರುಳ್ಳಿ 100 ರೂ.

ಸದ್ಯ ದೇವರಿಗೆ ನಾನು ಕೃತಜ್ಞ. ಯಾಕಂದ್ರೆ ಪಾಸಿಂಗ್ ಮಾರ್ಕ್ಸ್ ಇನ್ನೂ 35 ಕ್ಕಿಂತ ಹೆಚ್ಚಾಗಿಲ್ಲ! ಎಂದು ಟ್ವೀಟ್ ಮಾಡಿದ್ದಾರೆ ನಿವೇಶ್ ಅಗರ್ವಾಲ್.

ಕಣ್ಣೀರು ತರಿಸುವ ಬೆಲೆ

ಕಣ್ಣೀರು ತರಿಸುವ ಬೆಲೆ

ಮೊದಲೆಲ್ಲ ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀರು ಬರುತ್ತಿತ್ತು. ಆದರೆ ಈಗ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತಿದೆ ಎಂದಿದ್ದಾರೆ ದೇವಾಶಿಶ್ ಸಾರಂಗಿ.

English summary
Onion Price Hike In India: Jokes And Mems On Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X