ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವದ ಸುದ್ದಿ: 2 ಗಂಟೆಯಲ್ಲಿ ವರದಿ ನೀಡುವ ಓಮಿಕ್ರಾನ್‌ ಟೆಸ್ಟ್‌ ಕಿಟ್‌ ಅಸ್ಸಾಂನಲ್ಲಿ ಅಭಿವೃದ್ಧಿ

|
Google Oneindia Kannada News

ದಿಬ್ರೂಘರ್‌, ಡಿಸೆಂಬರ್‌ 12: ಓಮಿಕ್ರಾನ್‌ ಬಗ್ಗೆ ದಿನದಿಂದ ದಿನಕ್ಕೆ ಹೆಚ್ಚು ಕಾಳಜಿ ವ್ಯಕ್ತವಾಗುತ್ತಿರುವ ನಡುವೆ ವಿಜ್ಞಾನ ಲೋಕವು ಹೊಸ ಶುಭ ಸುದ್ದಿಯೊಂದನ್ನು ನೀಡಿದೆ. ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್ (ಐಸಿಎಂಆರ್‌), ರೀಜಿನಲ್‌ ಮೆಡಿಕಲ್‌ ರಿಸರ್ಚ್ ಸೆಂಟರ್‌ (ಆರ್‌ಎಂಆರ್‌ಸಿ) ಅಸ್ಸಾಂನ ದಿಬ್ರೂಘರ್‌ನಲ್ಲಿ ಹೊಸ ಪರೀಕ್ಷಾ ಕಿಟ್‌ ಒಂದನ್ನು ಅಭಿವೃದ್ಧಿ ಮಾಡಿದ್ದು, ಈ ಕಿಟ್‌ ಎರಡು ಗಂಟೆಯಲ್ಲೇ ಓಮಿಕ್ರಾನ್‌ ಪರೀಕ್ಷಾ ವರದಿಯನ್ನು ನೀಡುತ್ತದೆ.

ಕೊರೊನಾವೈರಸ್‌ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ ಈಗಾಗಲೇ ಹಲವಾರು ದೇಶಗಳಲ್ಲಿ ಹರಡಿದೆ. ಭಾರತದಲ್ಲಿ ಓಮಿಕ್ರಾನ್ ಸಂಖ್ಯೆಯು 35 ಕ್ಕೆ ಏರಿಕೆ ಆಗಿದೆ. ಓಮಿಕ್ರಾನ್‌ ಹಿನ್ನೆಲೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ನಿರ್ಬಂಧವನ್ನು ಕಠಿಣ ಮಾಡಲಾಗಿದೆ. ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ. ಹಾಗೆಯೇ ವರದಿ ಪಾಸಿಟಿವ್‌ ಬಂದರೆ ಅದನ್ನು ಓಮಿಕ್ರಾನ್‌ ಸಿಕ್ವೆಂನ್ಸಿಂಗ್‌ಗೆ ಕಳುಹಿಸಲಾಗುತ್ತದೆ. ಆ ಬಳಿಕ ವರದಿಗಾಗಿ ಕಾಯಬೇಕಾಗುತ್ತದೆ. ಆದರೆ ಈಗ ಈ ಓಮಿಕ್ರಾನ್‌ ಪರೀಕ್ಷಾ ವರದಿಯು ಸುಲಭವಾಗಿದೆ. ಎರಡು ಗಂಟೆಯಲ್ಲೇ ಓಮಿಕ್ರಾನ್‌ ಪರೀಕ್ಷೆ ಮಾಡಲು ಸಾಧ್ಯವಾಗುವಂತಹ ಕಿಟ್‌ ಅಭಿವೃದ್ದಿ ಪಡಿಸಲಾಗಿದೆ.

ಈ ಕಿಟ್‌ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಐಸಿಎಂಆರ್‌ ದಿಬ್ರೂಘರ್‌ ತಂಡವು ನವೆಂಬರ್‌ 26 ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಕಿಟ್‌ನ ಪ್ರಯೋಗವನ್ನು ಕೂಡಾ ತಂಡವು ಮಾಡಿದೆ. ಈ ಕಿಟ್‌ ಮೂಲಕ ಸುಮಾರು ಒಂದು ಸಾವಿರ ಕೋವಿಡ್‌ ಸೋಂಕಿತರ ಮಾದರಿಯನ್ನು ಈ ತಂಡವು ಪರೀಕ್ಷೆ ಮಾಡಿದೆ. ಅಸ್ಸಾಂ ಹಾಗೂ ಬೇರೆ ರಾಜ್ಯದ ಕೋವಿಡ್‌ ಸೋಂಕಿತರ, ಓಮಿಕ್ರಾನ್‌ ದೃಢಪಟ್ಟವರ ಮಾದರಿಯನ್ನು ಈ ಕಿಟ್‌ ಮೂಲಕ ತಂಡವು ಪರೀಕ್ಷೆ ಮಾಡಿದೆ.

ಮುಂದಿನ ವಾರದಿಂದಲೇ ಲ್ಯಾಬ್‌ನಲ್ಲಿ ಲಭ್ಯ ಸಾಧ್ಯತೆ

ಮುಂದಿನ ವಾರದಿಂದಲೇ ಲ್ಯಾಬ್‌ನಲ್ಲಿ ಲಭ್ಯ ಸಾಧ್ಯತೆ

ಪ್ರಸ್ತುತ ಈ ಕಿಟ್‌ಗೆ ಪರವಾನಗಿ ನೀಡುವ ಪ್ರಕ್ರಿಯೆಯು ನಡೆಯುತ್ತಿದೆ. ಈ ಕಿಟ್‌ ಬರುವ ವಾರದಿಂದ ಲ್ಯಾಬ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಈ ತಂಡವನ್ನು ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್ (ಐಸಿಎಂಆರ್‌), ರೀಜಿನಲ್‌ ಮೆಡಿಕಲ್‌ ರಿಸರ್ಚ್ ಸೆಂಟರ್‌ (ಆರ್‌ಎಂಆರ್‌ಸಿ) ದಿಬ್ರೂಘರ್‌ನ ಹಿರಿಯ ವಿಜ್ಞಾನಿ ಡಾ. ಬಿಸ್ವಾಜ್ಯೋತಿ ಬೋರ್ಕಾಕೋಟಿ ಮುನ್ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ವಿಜ್ಞಾನಿ ಡಾ. ಬಿಸ್ವಾಜ್ಯೋತಿ ಬೋರ್ಕಾಕೋಟಿ, "ದಿಬ್ರೂಘರ್‌ನ ಐಸಿಎಂಆರ್‌-ಆರ್‌ಎಂಆರ್‌ಸಿ ಓಮಿಕ್ರಾನ್‌ ಪತ್ತೆಹಚ್ಚಲು ಸಹಾಯ ಮಾಡುವ ಆರ್‌ಟಿ-ಪಿಸಿಆರ್‌ ಕಿಟ್‌ ಅನ್ನು ಅಭಿವೃದ್ದಿ ಪಡಿಸಿದೆ. ಈ ಕಿಟ್‌ನ ಮೂಲಕ ಕೇವಲ ಎರಡು ಗಂಟೆಯಲ್ಲಿ ಓಮಿಕ್ರಾನ್‌ ವರದಿಯನ್ನು ಪಡೆಯಬಹುದಾಗಿದೆ," ಎಂದು ಹೇಳಿದ್ದಾರೆ.

ಈ ಟೆಸ್ಟ್‌ ಕಿಟ್‌ ಎಲ್ಲಿ ಉಪಯೋಗಿಸಲು ಸಾಧ್ಯ

ಈ ಟೆಸ್ಟ್‌ ಕಿಟ್‌ ಎಲ್ಲಿ ಉಪಯೋಗಿಸಲು ಸಾಧ್ಯ

"ಕೊರೊನಾ ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ ಹಲವಾರು ತಳಿಗಳನ್ನು ಹೊಂದಿದೆ. ಉಳಿದ ರೂಪಾಂತರಕ್ಕಿಂತ ಅಧಿಕ ತಳಿಗಳನ್ನು ಹೊಂದಿದೆ. ಈ ರೂಪಾಂತರವು ಭಿನ್ನವಾಗಿದೆ. ಆದ್ದರಿಂದಾಗಿ ಈ ರೂಪಾಂತರವನ್ನು ಪತ್ತೆ ಮಾಡಲು ಸಾಧ್ಯವಾಗುವ ಕಿಟ್‌ ಅನ್ನು ನಾವು ಅಭಿವೃದ್ದಿ ಮಾಡಿದ್ದೇವೆ," ಎಂದು ತಿಳಿಸಿದ್ದಾರೆ. ಇನ್ನು ಈ ಟೆಸ್ಟ್‌ ಕಿಟ್‌ ಅನ್ನು ಲ್ಯಾಬ್‌ನಲ್ಲಿ ಉಪಯೋಗಿಸಬೇಕಾಗಿದೆ. ಇದು ಆಂಟಿಜೆನ್‌ ಟೆಸ್ಟ್‌ ಕಿಟ್‌ ತರಹದ ಕಿಟ್‌ ಅಲ್ಲ.

ಶೇಕಡ ನೂರರಷ್ಟು ಮೇಡ್‌ ಇನ್‌ ಇಂಡಿಯಾ ಕಿಟ್‌

ಶೇಕಡ ನೂರರಷ್ಟು ಮೇಡ್‌ ಇನ್‌ ಇಂಡಿಯಾ ಕಿಟ್‌

ಓಮಿಕ್ರಾನ್‌ ಪತ್ತೆ ಹಚ್ಚುವ ನಿಟ್ಟಿನಲ್ಲಿ ದಿಬ್ರೂಘರ್‌ನ ಐಸಿಎಂಆರ್‌-ಆರ್‌ಎಂಆರ್‌ಸಿ ಅಭಿವೃದ್ಧಿ ಮಾಡಿರುವ ಈ ಓಮಿಕ್ರಾನ್‌ ಆರ್‌ಟಿ-ಪಿಸಿಆರ್‌ ಕಿಟ್‌ ಶೇಕಡ ನೂರರಷ್ಟು ಮೇಡ್‌ ಇನ್‌ ಇಂಡಿಯಾ ಕಿಟ್‌ ಆಗಿದೆ. ಇದನ್ನು ಭಾರತದಲ್ಲೇ ಅಭಿವೃದ್ಧಿ ಪಡಿಸಲಾಗಿದೆ. ಕೋಲ್ಕತ್ತಾ ಮೂಲದ ಸಂಸ್ಥೆ ಜಿಸಿಸಿ ಬಯೋಟಿಕ್‌, ಖಾಸಗಿ-ಸಾರ್ವಜನಿಕ ಪಾಲುದಾರಿಕೆಯನ್ನು ಈ ಕಿಟ್‌ನ ಅಭಿವೃದ್ದಿಯನ್ನು ಮಾಡಲಿದೆ.

Recommended Video

HD Kumaraswamy : ಯಡಿಯೂರಪ್ಪನಿಗಿರೋ ಸೌಜನ್ಯ ಕಾಂಗ್ರೆಸ್ ನವರಿಗಿಲ್ಲ | Oneindia Kannada
ಭಾರತದಲ್ಲಿ ಓಮಿಕ್ರಾನ್‌ ಹೇಗಿದೆ?

ಭಾರತದಲ್ಲಿ ಓಮಿಕ್ರಾನ್‌ ಹೇಗಿದೆ?

ದೇಶದಲ್ಲಿ ಈವರೆಗೆ ದೇಶದಲ್ಲಿ ದೆಹಲಿ, ರಾಜಸ್ಥಾನ, ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರದಲ್ಲಿ ಓಮಿಕ್ರಾನ್‌ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರದಲ್ಲಿ ಅಧಿಕ ಓಮಿಕ್ರಾನ್‌ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ ಒಂಬತ್ತು, ಗುಜರಾತ್‌ನಲ್ಲಿ ಮೂರು, ಕರ್ನಾಟಕದಲ್ಲಿ ಎರಡು ಮತ್ತು ದೆಹಲಿಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಗ ಆಂಧ್ರ ಪ್ರದೇಶದಲ್ಲಿ ಒಂದು ಹಾಗೂ ಚಂಡೀಗಢದಲ್ಲಿ ಒಂದು ಓಮಿಕ್ರಾನ್‌ ಪ್ರಕರಣ ದಾಖಲು ಆಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್‌ ಪ್ರಕರಣ ಸಂಖ್ಯೆಯು ಸದ್ಯ 35 ಕ್ಕೆ ಏರಿಕೆ ಆಗಿದೆ. (ಒನ್‌ಇಂಡಿಯಾ ಸುದ್ದಿ)

English summary
Omicron Test Kit Developed In Assam, Which Gives Results In 2 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X