ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

News Makers 2020: ಡೊನಾಲ್ಡ್‌ಗೆ ಟ್ರಂಪ್ ಕಾರ್ಡ್‌ ಆಗದ 2020

|
Google Oneindia Kannada News

ಅಮೆರಿಕದ ಹಾಲಿ ಹಾಗೂ ಇನ್ನು ಕೆಲವೇ ದಿನಗಳಲ್ಲಿ ನಿರ್ಗಮಿಸುವ ವಿವಾದಿತ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌. ಅಮೆರಿಕ ಹಾಗೂ ಜಾಗತಿಕ ಆಧುನಿಕ ರಾಜಕೀಯ ಇತಿಹಾಸದಲ್ಲಿ ಟ್ರಂಪ್‌ ರೀತಿಯ ಆಡಳಿತಗಾರರನ್ನು ಕಂಡಿರಲಿಲ್ಲ ಎನಿಸುತ್ತದೆ.

News Makers 2020: ಹೊಸ ಸಂಚಲನ ಮೂಡಿಸಿದ ತೇಜಸ್ವಿ ಯಾದವ್News Makers 2020: ಹೊಸ ಸಂಚಲನ ಮೂಡಿಸಿದ ತೇಜಸ್ವಿ ಯಾದವ್

ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಅಧ್ಯಕ್ಷ ಗಾದಿಯಿಂದ ವರ್ಷದ ಕೊನೆಯ ದಿನದಂದು ಟ್ರಂಪ್‌ ಕೆಳಗಿಳಿಯಲಿದ್ದಾರೆ. ಈ ವರ್ಷವು ಟ್ರಂಪ್‌ ಹಾಗೂ ಅಮೆರಿಕದ ಪಾಲಿಗೆ ಸಾಕಷ್ಟು ವರ್ಷಗಳು ನೆನಪಿನಲ್ಲಿರಲಿದೆ. ಅಂದ್ಹಾಗೆ ಕೊರೊನಾ ಕಾರಣದಿಂದ ಅಧಿಕಾರ ಕಳೆದುಕೊಂಡ ಮೊದಲ ಆಡಳಿತಗಾರ ಟ್ರಂಪ್‌. ಹೀಗಾಗಿ ಕೊರೊನಾಗೆ ಬಲಿಯಾದ ವರ್ಷದ ವ್ಯಕ್ತಿ ಎಂದರೂ ಅತಿಶಯೋಕ್ತಿಯಾಗಲಾರದು.

2020ರ ಭವಿಷ್ಯ: ನಿಗೂಢ ಮಹಿಳೆ ಬಾಬಾ ವಂಗಾ ನುಡಿದ ಭವಿಷ್ಯವೇನು, ಆಗಿದ್ದೇನು! 2020ರ ಭವಿಷ್ಯ: ನಿಗೂಢ ಮಹಿಳೆ ಬಾಬಾ ವಂಗಾ ನುಡಿದ ಭವಿಷ್ಯವೇನು, ಆಗಿದ್ದೇನು!

ಆದರೆ ಡೆಮಾಕ್ರಟಿಕ್‌ ಅಭ್ಯರ್ಥಿ ಜೋ ಬೈಡನ್‌ಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುವ ಮೂಲಕ ಟ್ರಂಪ್‌ ಅವರ ವಿವಾದಿತ ಆಡಳಿತಾವಧಿ ಕೊನೆಗೊಳ್ಳುತ್ತಿದೆ. ಅಕ್ರಮ ಚುನಾವಣೆಯಿಂದ ಬೈಡನ್‌ ಸೋತಿದ್ದಾರೆ ಎಂದು ಟ್ರಂಪ್‌ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಧಿಕಾರ ಬಿಟ್ಟುಕೊಡಲು ಹೈಡ್ರಾಮಾ ಮಾಡಬಹುದು ಎನ್ನುವ ಮುನ್ಸೂಚನೆಯೂ ಇದೆ. ಅದೇನಿದ್ದರೂ ವರ್ಷಂಪೂರ್ತಿ ಸುದ್ದಿ ಮಾಡಿದ ವ್ಯಕ್ತಿ ಟ್ರಂಪ್‌.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಚೀನಾಕ್ಕೆ ನಡುಕ ಹುಟ್ಟಿಸಿದ ಟ್ರಂಪ್‌

ಚೀನಾಕ್ಕೆ ನಡುಕ ಹುಟ್ಟಿಸಿದ ಟ್ರಂಪ್‌

ಚೀನಾದ ವಿರುದ್ಧ ಬಹಿರಂಗ ವಾಣಿಜ್ಯ ಸಮರ ಸಾರಿದ್ದ ಡೋನಾಲ್ಡ್‌ ಟ್ರಂಪ್‌ 2020ರಲ್ಲೂ ಅದನ್ನು ಮುಂದುವರೆಸಿದರು. ಚೀನಾದ ಅಧ್ಯಕ್ಷರ ಜತೆ ಮಾತುಕತೆಯ ಪ್ರಯತ್ನ ನಡೆಸಿದರೂ ಚೀನಾದ ಕಂಪನಿ ಹಾಗೂ ಉತ್ಪನ್ನಗಳ ಮೇಲೆ ಕೆಂಗಣ್ಣು ಮುಂದುವರಿಸಿದರು. ಇದರಿಂದ ವಿಶ್ವ ಆರ್ಥಿಕತೆ ಮೇಲೆ ದುಷ್ಪರಿಣಾಮ ಬಿದ್ದರೂ ಅಮೆರಿಕಕ್ಕಾಗಿ ಇದು ಮುಖ್ಯ ಎನ್ನುವ ನಿರ್ಧಾರಕ್ಕೆ ಬಂದರು. ಪರಿಣಾಮವಾಗಿ ಟಿಕ್‌ಟಾಕ್‌, ವಿಚಾಟ್‌, ಹುವೈ ಸೇರಿ ಸಾಕಷ್ಟು ಚೀನಾ ಕಂಪನಿಗಳನ್ನು ಅಮೆರಿಕದಲ್ಲಿ ಟ್ರಂಪ್‌ ನಿಷೇಧಿಸಿದರು. ಟ್ರಂಪ್‌ ಆಡಳಿತದ ಈ ನಿರ್ಧಾರದಿಂದ ಚೀನಾ ಆರ್ಥಿಕತೆ ಕೂಡ ನಡುಗಲು ಆರಂಭಿಸಿತು.

ಕೊರೊನಾಗೆ ಚೀನಾ ಕಾರಣ

ಕೊರೊನಾಗೆ ಚೀನಾ ಕಾರಣ

ಕೊರೊನಾ ಹುಟ್ಟಿಕೊಂಡಿದ್ದು ಚೀನಾದ ವುಹಾನ್‌ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವಿಶ್ವವ್ಯಾಪಿಯಾಗಿ ಹರಡಲು ಚೀನಾವೇ ಕಾರಣ ಎಂದು ನೇರವಾಗಿ ಟ್ರಂಪ್‌ ಆರೋಪಿಸಿದರು. ವಿಶ್ವ ಮಟ್ಟದಲ್ಲಿ ಕೊರೊನಾಗೆ ಸಂಬಂಧಿಸಿ ನೇರವಾಗಿ ಚೀನಾದ ವಿರುದ್ಧ ಗುಡುಗಿದವರಲ್ಲಿ ಟ್ರಂಪ್‌ ಮೊದಲಿಗರು. ಇನ್ನೊಂದೆಡೆ ಭಾರತದ ನೆರವಿಗೆ ಧನ್ಯವಾದ ಕೂಡ ಹೇಳಲು ಟ್ರಂಪ್‌ ಮರೆಯಲಿಲ್ಲ.

unforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆunforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆ

ಕೊವಿಡ್‌-19 ಹೋರಾಟದಲ್ಲಿ ವೈಫಲ್ಯ

ಕೊವಿಡ್‌-19 ಹೋರಾಟದಲ್ಲಿ ವೈಫಲ್ಯ

ಇಡೀ ವಿಶ್ವವೇ ಕೋವಿಡ್‌-19ನಲ್ಲಿ ಕಂಗೆಟ್ಟಿತ್ತು. ಕೊರೊನಾ
ಸೋಂಕು ಹರಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಲಾಕ್‌ಡೌನ್‌ ಮಾಡಲಾಗಿತ್ತು. ಆದರೆ ಅಮೆರಿಕದಲ್ಲಿ ಲಾಕ್‌ಡೌನ್‌ ಮಾಡಲು ಟ್ರಂಪ್‌ ನಿರಾಕರಿಸಿದರು. ಇದರಿಂದ ಅಮೆರಿಕದ ಆರೋಗ್ಯ ವ್ಯವಸ್ಥೆಯ ಸತ್ಯದರ್ಶನವಾಯಿತು. ವಿಶ್ವದಲ್ಲೇ ಅತಿಹೆಚ್ಚು ಜನ ಕೊರೊನಾಕ್ಕೆ ಬಲಿಯಾಗಿದ್ದಲ್ಲದೇ, ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ರಾಷ್ಟ್ರ ಅಮೆರಿಕವಾಯಿತು. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಪ್ರಮುಖ ವಿಚಾರವಾಯಿತು. ಟ್ರಂಪ್‌ ಅವರ ಬೇಜವಾಬ್ದಾರಿ ನಿರ್ಣಯ ಹಾಗೂ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಮಾಡದಿರುವುದೇ ಕೊರೊನಾ ಹರಡಲು ಕಾರಣ ಎಂದು ಅಮೆರಿಕದಲ್ಲಿ ಪ್ರಚಾರವಾಯಿತು. ಅದು ಸತ್ಯವೂ ಆಗಿತ್ತು.

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಕ್ಕೆ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಕ್ಕೆ

ವಿಶ್ವಕ್ಕೆ ಕೊರೋನಾ ವ್ಯಾಪಿಸಲು ಚೀನಾ ಕಾರಣವಾಗಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಚೀನಾದ ಪರ ವಿಶ್ವ ಆರೋಗ್ಯ ಸಂಸ್ಥೆ ಲಾಬಿ ಮಾಡುತ್ತಿದೆ. ಚೀನಾ ಪರವಾಗಿರುವ ಸಂಸ್ಥೆಯಲ್ಲಿ ಅಮೆರಿಕ ಇರುವುದಿಲ್ಲ ಎಂದು ಡಬ್ಲ್ಯೂಎಚ್‌ಒನಿಂದ ಹೊರಬಂತು. ಹಾಗೆಯೇ ಸಂಸ್ಥೆಗೆ ನೀಡುತ್ತಿದ್ದ ಎಲ್ಲ ಆರ್ಥಿಕ ನೆರವನ್ನು ಟ್ರಂಪ್‌ ಆಡಳಿತ ನಿರ್ಬಂಧಿಸಿತು. ಆದರೆ ಈಗ ಆಯ್ಕೆಯಾಗಿರುವ ಅಧ್ಯಕ್ಷ ಜೋ ಬೈಡನ್‌ ಮತ್ತೆ ಡಬ್ಲ್ಯೂಎಚ್‌ಒ ಸೇರುವುದಾಗಿ ತಿಳಿಸಿದ್ದಾರೆ.

ಜನಾಂಗೀಯ ಗಲಭೆಗೆ ಟ್ರಂಪ್‌ ನಿರ್ಲಕ್ಷ್ಯ

ಜನಾಂಗೀಯ ಗಲಭೆಗೆ ಟ್ರಂಪ್‌ ನಿರ್ಲಕ್ಷ್ಯ

ಕಪ್ಪು ವರ್ಣೀಯ ವ್ಯಕ್ತಿಯೊಬ್ಬನ ಮೇಲೆ ಪೊಲೀಸರ ದೌರ್ಜನ್ಯ ಹಾಗೂ ಕೊಲೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಜನಾಂಗೀಯ ಗಲಭೆ ಆರಂಭವಾಯಿತು. ಚುನಾವಣೆ ಹಿನ್ನೆಲೆಯಲ್ಲಿ ಇದಕ್ಕೆ ರಾಜಕೀಯ ಸ್ವರೂಪ ದೊರೆಯಿತು. ಟ್ರಂಪ್‌ ಕಪ್ಪು ವರ್ಣೀಯರ ವಿರುದ್ಧ ಇರುವ ವ್ಯಕ್ತಿ ಎನ್ನುವುದನ್ನು ಬೈಡನ್‌ ಪರ ಪ್ರಚಾರ ತಂಡ ಬಿಂಬಿಸಿತು. ಇದು ಚುನಾವಣೆಯಲ್ಲಿ ಟ್ರಂಪ್‌ಗೆ ದೊಡ್ಡ ಆಘಾತವನ್ನು ನೀಡಿತು. ಡೆಮಾಕ್ರಟಿಕ್‌ ಪಕ್ಷದ ಈ ಪ್ರಚಾರಕ್ಕೆ ತಿರುಗೇಟು ನೀಡಲು ಟ್ರಂಪ್‌ ಕೂಡ ವಿಫಲರಾದರು.

ಬೈಡನ್‌-ಹ್ಯಾರಿಸ್‌ ಜೋಡಿ ಮುಂದೆ ಮಂಕಾದ ಟ್ರಂಪ್‌

ಬೈಡನ್‌-ಹ್ಯಾರಿಸ್‌ ಜೋಡಿ ಮುಂದೆ ಮಂಕಾದ ಟ್ರಂಪ್‌

ಅಂತಿಮವಾಗಿ ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಬೈಡನ್‌-ಹ್ಯಾರಿಸ್‌ ಜೋಡಿ ಗೆಲುವು ಸಾಧಿಸಿದೆ. ಟ್ರಂಪ್‌ ಒಲ್ಲದ ಮನಸ್ಸಿನಿಂದ ಸೋಲು ಸ್ವೀಕರಿಸಿದ್ದಾರೆ. ಟ್ರಂಪ್‌ ಅವರ ಆತುರದ ಮಾತು ಹಾಗೂ ಸೂಕ್ಷ್ಮ ಸಂವೇದನಾ ರಹಿತ ನಿಲುವುಗಳು ಮುಳುವಾದವು ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಾರೆ. ಜಾಗತಿಕ ಮಟ್ಟದಲ್ಲಿ ಟ್ರಂಪ್‌ ಬಗ್ಗೆ ನಕಾರಾತ್ಮಕ ಅಂಶಗಳಿದ್ದರೂ ಹೀನಾಯ ಸೋಲಾಗಿರಲಿಲ್ಲ. ಇದಕ್ಕೆ ಟ್ರಂಪ್‌ ಮಾಡಿದ್ದ ಕೆಲ ಆರ್ಥಿಕ ಕ್ರಮಗಳು ಕಾರಣ ಎನ್ನಲಾಗುತ್ತದೆ. ಟ್ರಂಪ್‌ ವರ್ತನೆ ಬಗ್ಗೆ ಬೇಸರವಿದ್ದರೂ ಅಮೆರಿಕದ ಆರ್ಥಿಕ ಅಭಿವೃದ್ಧಿಗೆ ತೆಗೆದುಕೊಂಡಿದ್ದ ಕೆಲ ಕ್ರಮಗಳು ಶ್ಲಾಘನೀಯ ಎನ್ನುವರಿದ್ದಾರೆ.

Recommended Video

ಮಂಡ್ಯ: ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಜನಸಂಪರ್ಕ ಸಭೆ | Oneindia Kannada
ಟ್ರಂಪ್‌ ಸೋಲು ಭಾರತಕ್ಕೆ ನಷ್ಟ?

ಟ್ರಂಪ್‌ ಸೋಲು ಭಾರತಕ್ಕೆ ನಷ್ಟ?

ಚೀನಾ ಕಟ್ಟಿಹಾಕಲು ಅಮೆರಿಕ ಮುಂದಾಗಿದ್ದು ಭಾರತಕ್ಕೆ ನಿಜವಾಗಿಯೂ ಟ್ರಂಪ್‌ ಕಾರ್ಡ್‌ ಆಗಿತ್ತು. ಭಾರತವನ್ನು ಬಳಸಿಕೊಂಡು ಚೀನಾದ ಮೇಲೆ ಅಮೆರಿಕ ಸವಾರಿ ಮಾಡಲು ಹೊರಟಿತ್ತು.
ಟ್ರಂಪ್‌ ಇನ್ನೊಂದು ಅವಧಿಗೆ ಬಂದಿದ್ದರೆ ಚೀನಾ ಇನ್ನಷ್ಟು ದುರ್ಬಲವಾಗುತ್ತಿತ್ತು ಎನ್ನುವ ಮಾತಿದೆ. ಇನ್ನೊಂದೆಡೆ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ರಂಪ್‌ ಪರವಾಗಿ ನೇರವಾಗಿಯೇ ಪ್ರಚಾರ ಮಾಡಿ ಟೀಕೆಗೂ ಒಳಗಾಗಿದ್ದರು. ಇನ್ನೊಂದೆಡೆ ಕಾಶ್ಮೀರ ಸೇರಿ ಕೆಲ ವಿಚಾರದ ಬಗ್ಗೆ ಜೋ ಬೈಡನ್‌ ಹಾಗೂ ಅವರ ಪಕ್ಷದ ಭಾರತದ ನರೇಂದ್ರ ಮೋದಿ ಸರ್ಕಾರದ ವಿರುದ್ಧವಾಗಿದೆ. ಈಗ ಬೈಡನ್‌ ಸರ್ಕಾರ ಅದೇ ಚೀನಾ ವಿರೋಧಿ ನಿಲುವು ಮುಂದುವರಿಸಲಿದೆಯೇ ಹಾಗೂ ಭಾರತದ ಜತೆ ಹೇಗೆ ಸಂಬಂಧ ಮುಂದುವರಿಸಲಿದೆ ಎನುವುದು ಕುತೂಹಲಕಾರಿಯಾಗಿದೆ. ಒಟ್ಟಿನಲ್ಲಿ 2021ರಲ್ಲಿ ಭಾರತ-ಅಮೆರಿಕದ ನಡುವಿನ ಹೊಸ ಸಂಬಂಧಕ್ಕೆ ವೇದಿಕೆ ಸೃಷ್ಟಿಯಾಗಲಿದೆ.

English summary
News Makers Of 2020: After Lot Of Controversial Dicisions 2020 gave Bitter Result for America President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X