ಉತ್ತರ ಕೊರಿಯಾ ಸರ್ವಾಧಿಕಾರಿ ವರ್ತನೆಗೆ ಬೆಚ್ಚಿಬಿದ್ದ ಜಪಾನ್ ಮತ್ತು ದಕ್ಷಿಣ ಕೊರಿಯಾ | Kim Jong Un

ಇರಾನ್ ಹಾಗೂ ಅಮೆರಿಕ ನಡುವೆ ಯುದ್ಧ ನಡೆಯುವಾಗಲೇ ಉತ್ತರ ಕೊರಿಯಾ ಕೂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೊದಲೇ ಹುಚ್ಚುದೊರೆ, ಜಗತ್ತಿಗೆ ಕಂಟಕ ಎಂಬ ಆರೋಪ ಹೊತ್ತಿದ್ದಾನೆ. ಹಾಗೇ ತನ್ನ ಶತ್ರು ದೇಶಗಳ ಮೇಲೆ ಪದೇ, ಪದೇ ದಾಳಿ ಮಾಡುವ ಬೆದರಿಕೆ ಕೂಡ ಹಾಕುತ್ತಾ ಇರುತ್ತಾನೆ ಕಿಮ್ ಜಾಂಗ್ ಉನ್. ಉತ್ತರ ಕೊರಿಯಾದಲ್ಲಿ ಆರ್ಥಿಕತೆ ಕುಸಿದು ಬಿದ್ದಿದ್ದರೂ, ಸೇನಾ ಸಲಕರಣೆ ಹಾಗೂ ಶಸ್ತ್ರಾಸ್ತ್ರ ಖರೀದಿ ವಿಚಾರದಲ್ಲಿ ಮಾತ್ರ ಕಿಮ್ ಯಾವುದೇ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಹೀಗಿದ್ದಾಗಲೇ ದಿಢೀರ್ ಅಂತಾ ಕ್ಷಿಪಣಿ ಪರೀಕ್ಷೆ ಮಾಡಿ ಭಯ ಮೂಡಿಸಿದ್ದಾನೆ ಕಿಮ್.

ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧಗಳ ಸರಮಾಲೆ ರೂಪುಗೊಂಡು ಎಲ್ಲಾ ಕಡೆಯೂ ಬಿರುಗಾಳಿ ಎದ್ದಿದೆ. ಇರಾನ್ ತಮ್ಮ ಮಾತು ಕೇಳುತ್ತಿಲ್ಲ ಪರಮಾಣು ಬಾಂಬ್ ವಿಚಾರದಲ್ಲಿ ಇರಾನ್ ತಪ್ಪು ಹೆಜ್ಜೆಯ ಇಡುತ್ತಿದೆ ಎಂದು ಅಮೆರಿಕ & ಇಸ್ರೇಲ್ ಒಟ್ಟಾಗಿ ಯುದ್ಧವನ್ನ ಆರಂಭ ಮಾಡಿವೆ. ಹೀಗೆ ಇರಾನ್ ಮೇಲೆ ಇಬ್ಬರೂ ಸೇರಿ ಯುದ್ಧ ಶುರು ಮಾಡಿ ಈಗಾಗಲೇ 14 ದಿನಗಳೇ ಕಳೆದು ಹೋಗಿದ್ದು, 2 ವಾರದಲ್ಲೇ ಈ ಯುದ್ಧವು ಜಗತ್ತಿನ ಆರ್ಥಿಕತೆ ಪಾತಾಳ ಸೇರುವಂತೆ ಮಾಡಿದೆ. ಈ ಸಮಯದಲ್ಲೇ ಮತ್ತೊಂದು ಆಘಾತಕಾರಿ ಚರ್ಚೆ ಶುರುವಾಗಿದ್ದು, ಏಷ್ಯಾ ಭಾಗದಲ್ಲೂ ದೊಡ್ಡ ಮಟ್ಟದಲ್ಲಿ ಯುದ್ಧ ಶುರುವಾಗಬಹುದು ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಇದಕ್ಕೆ ತಕ್ಕಂತೆ ಹುಚ್ಚುದೊರೆ ಕಿಮ್ ಜಾಂಗ್ ಉನ್ ದಿಢೀರ್ ಅಂತಾ ತನ್ನ ಬಳಿ ಇರುವ ಹೊಸ ಹೊಸ ಕ್ಷಿಪಣಿ ಹೊರ ತೆಗೆದು ಶತ್ರುಗಳಿಗೆ ಎಚ್ಚರಿಕೆ ಸಂದೇಶ ಈಗ ನೀಡಿದ್ದಾನೆ.

Kim Jong Un

10ಕ್ಕೂ ಹೆಚ್ಚು ಕ್ಷಿಪಣಿ ಪ್ರಯೋಗ

ಹೌದು ಉತ್ತರ ಕೊರಿಯಾ ಮತ್ತೊಮ್ಮೆ ಕ್ಷಿಪಣಿ ಪರೀಕ್ಷೆ ನಡೆಸಿ ತನ್ನ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಈಗ. ದಿಢೀರ್ ಒಂದೇ ಬಾರಿಗೆ 10ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ, ಎಂದರೆ ಒಂದು ಖಂಡ ಬಿಟ್ಟು ಇನ್ನೊಂದು ಖಂಡಕ್ಕೆ ಹೋಗಬಲ್ಲ ಕ್ಷಿಪಣಿಯನ್ನ ಉಡಾಯಿಸಿ ಪರೀಕ್ಷೆ ನಡೆಸಲಾಗಿದೆ. ಇದು ದಕ್ಷಿಣ ಕೊರಿಯಾ ಮತ್ತು ಅಮೆರಿಕ ನಡೆಸುತ್ತಿರುವ ಜಂಟಿ ಸೇನಾ ಕವಾಯತು ಕೂಡ ನಲುಗುವಂತೆ ಮಾಡಿದೆ, ಹಾಗೇ ಇರಾನ್ ಮೇಲೆ ಯುದ್ಧ ನಡೆಯುತ್ತಿರುವ ಸಮಯದಲ್ಲೇ ಈ ಘಟನೆ ನಡೆದಿರುವುದು ಜಗತ್ತು ಬೆಚ್ಚಿ ಬೀಳುವಂತೆ ಮಾಡಿದೆ. ಉತ್ತರ ಕೊರಿಯಾ ರಾಜಧಾನಿ ಪ್ಯೋಂಗ್ಯಾಂಗ್ ಸಮೀಪ ಈ ಕ್ಷಿಪಣಿಗಳನ್ನು ಉಡಾಯಿಸಿ ಪರೀಕ್ಷೆ ನಡೆಸಲಾಗಿದೆ. ಆ ಕ್ಷಿಪಣಿಗಳು ನೇರವಾಗಿ ಹೋಗಿ ಸುಮಾರು 340 ಕಿಲೋ ಮೀಟರ್ ದೂರದ ಪೂರ್ವ ಕರಾವಳಿ ಸಮುದ್ರ ಭಾಗದಲ್ಲಿ ಬಿದ್ದಿವೆ.

2 ವರ್ಷಗಳ ನಂತರ ಕಿಮ್ ಸಾಹಸ

ಉತ್ತರ ಕೊರಿಯಾದ ಈ ವರ್ತನೆ ಇಡೀ ಜಗತ್ತಿನ ಗಮನ ಸೆಳೆಯಲು ಮತ್ತೊಂದು ಕಾರಣ ಏನೆಂದರೆ, ಸಾಮಾನ್ಯವಾಗಿ ಇಂತಹ ಶಕ್ತಿ ಪ್ರದರ್ಶನ ನಡೆಸುವಾಗ ಉತ್ತರ ಕೊರಿಯಾ ಒಂದು ಅಥವ ಎರಡು ಇಲ್ಲವೇ ಹೆಚ್ಚು ಎಂದರೆ 3 ಕ್ಷಿಪಣಿ ಉಡಾಯಿಸಿ ಶತ್ರುಗಳಿಗೆ ಎಚ್ಚರಿಕೆ ನೀಡುತ್ತಾ ಬಂದಿತ್ತು. ಆದರೆ ಈ ಬಾರಿ ದಿಢೀರ್ 10ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆದಿರುವುದು ಸಹಜವಾಗೇ ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳ ಎದೆ ನಡುಗುವಂತೆ ಮಾಡಿದೆ. 2024ರ ಮೇ ತಿಂಗಳಲ್ಲಿ ಕೂಡ, ಇದೇ ರೀತಿ ಉ.ಕೊರಿಯಾ ದಿಢೀರ್ 10ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಒಂದೇ ಬಾರಿಗೆ ನಡೆಸಿತ್ತು. ಈಗ ಸುಮಾರು 2 ವರ್ಷಗಳ ನಂತರ ಇಂತಹದ್ದೇ ಸಾಹಸ ಮಾಡಿರುವುದು ಭಾರಿ ಆತಂಕ ಮೂಡಿಸಿಬಿಟ್ಟಿದೆ ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳಿಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+