ಜ್ಯೂಸ್‌ ಮಾರುವವನ ಪ್ರೈಸಿಂಗ್‌ ತಂತ್ರಕ್ಕೆ ಎಂ.ಬಿ.ಎ ಪದವೀಧರರೇ ದಂಗು! ಎಕಾನಾಮಿಕ್ಸ್‌ ಅರೆದು ಕುಡಿದ ಬೀದಿ ಬದಿ ವ್ಯಾಪಾರಿ

ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ದೊಡ್ಡ ದೊಡ್ಡ ಡಿಗ್ರಿಗಳೇ ಬೇಕೆಂದಿಲ್ಲ. ಕೆಲಸ ಮಾಡುವ ಮನಸ್ಸು ಛಲ ಇದ್ದರೆ ಸಾಕು ಸಕ್ಸಸ್‌ ತಾನಾಗಿಯೇ ಸಿಗುತ್ತದೆ. ಹಾಗೆ ನೋಡುವುದಾದರೆ ಶಾಲೆಯ ಮೆಟ್ಟಿಲನ್ನೇ ಏರದ ಅದೆಷ್ಟೋ ಮಂದಿ ಬಿಸಿನೆಸ್‌ ಜಗತ್ತಿನಲ್ಲಿ ದೊಡ್ಡ ಸಾಮ್ಯಾಜ್ಯವನ್ನು ಕಟ್ಟಿದ್ದಾರೆ. ಅಲ್ಲಿ ಅವರಿಗೆ ಶಾಲೆಯಲ್ಲಿ ಕಲಿತ ಪಾಠಕ್ಕಿಂತ ಬದುಕು ಕಲಿಸಿದ ಅನುಭವಗಳೇ ಜೊತೆಯಾದದ್ದು. ಇದೀಗ ಈ ಬದುಕಿನ ಅನುಭವದ ಪಾಠವನ್ನು ಮುಂದಿಟ್ಟುಕೊಂಡೇ ಈ ವ್ಯಾಪಾರಿಯೊಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಯಾದರೂ ಅವರಿಗಿರುವ ಬಿಸ್‌ನೆಸ್‌ ಜ್ಞಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ಬೀದಿ ಬದಿ ವ್ಯಾಪಾರಿಗಳೆಂದರೆ ಅಸಡ್ಡೆ ತೋರುವುದೇ ಹೆಚ್ಚು. ಆದರೆ ಅವರಿಗೂ ಬಿಸ್‌ನೆಸ್‌ ಜ್ಞಾನ ಬಹಳಷ್ಟಿರುತ್ತದೆ. ತಮ್ಮ ವ್ಯಾಪಾರವನ್ನು ಹೇಗೆ ಮುಂದುವರಿಸಬೇಕು, ಅದರಿಂದ ಹೇಗೆ ಲಾಭ ಗಳಿಸಬೇಕು ಎನ್ನುವ ಲೆಕ್ಕಾಚಾರ ಬಹಳ ಚೆನ್ನಾಗಿರುತ್ತದೆ. ಔಪಚಾರಿಕ ಶಿಕ್ಷಣ ಅಥವಾ ದೊಡ್ಡ ಬೋರ್ಡ್‌ರೂಮ್‌ಗಳ ಪಾಠಗಳಿಲ್ಲದಿದ್ದರೂ, ಬೀದಿ ಬದಿ ವ್ಯಾಪಾರಿಗಳು ತಮ್ಮ ಅನುಭವದಿಂದಲೇ ಗ್ರಾಹಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದ್ಭುತ ವ್ಯವಹಾರಿಕ ತಂತ್ರಗಳನ್ನು ರೂಪಿಸುತ್ತಾರೆ. ಈ ಮಾತು ಕೆಲವು ಬೀದಿ ಬದಿ ವ್ಯಾಪಾರಿಗಳನ್ನು ನೋಡುವಾಗ ಸಾಬೀತಾಗುತ್ತಲೇ ಇರುತ್ತದೆ. ಸದ್ಯ ಕಬ್ಬಿನ ಹಾಲಿನ ವ್ಯಾಪಾರಿಯೊಬ್ಬರು ಜ್ಯೂಸ್‌ಗೆ ಬೆಲೆ ನಿಗದಿ ಮಾಡಿರುವ ತಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Sugarcane Juice

ವ್ಯಾಪಾರಿಯ 'ಸ್ಮಾರ್ಟ್' ಮೆನು ಕಾರ್ಡ್:

ಯಾವುದೇ ಉತ್ಪನ್ನವಿರಲಿ ಅದನ್ನು ಮಾರುವುದು ಮುಖ್ಯವಲ್ಲ, ಹೇಗೆ ಮಾರುತ್ತೇವೆ ಎನ್ನುವುದು ಮುಖ್ಯ. ಇಲ್ಲಿ ಬೆಲೆ ನಿಗದಿ ಯಾವ ರೀತಿ ಆಗುತ್ತದೆ ಎನ್ನುವುದನ್ನು ಗ್ರಾಹಕರು ಆಳವಾಗಿ ನೋಡುತ್ತಾರೆ.ನಿಗದಿ ಮಾಡಿರುವ ಬೆಲೆ ನ್ಯಾಯಯುತ ಎಂದು ಅನ್ನಿಸಿದಾಗಲೇ ಗ್ರಾಹಕ ಅದಕ್ಕೆ ದುಡ್ಡು ಕೊಡಲು ಸಿದ್ದನಾಗುತ್ತಾನೆ. ಹಾಗಾಗಿ ಗ್ರಾಹಕನ ಮನಸ್ಥಿತಿಯನ್ನು ಅರಿತು ವ್ಯಾಪಾರಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್

ಲಿಂಕ್ಡ್‌ಇನ್‌ನಲ್ಲಿ ಅನನ್ಯಾ ನಾರಂಗ್ ಎಂಬುವವರು ಪೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ಕಬ್ಬಿನ ಹಾಲಿನ ಗಾಡಿಯ ಮೇಲೆ ಬರೆದಿರುವ ದರಪಟ್ಟಿ ಎಲ್ಲರ ಗಮನ ಸೆಳೆದಿದೆ. ಆ ದರಪಟ್ಟಿ ಹೀಗಿದೆ:

ಐಸ್ ಇಲ್ಲದ ಕಬ್ಬಿನ ಹಾಲು: ₹30
ಐಸ್ ಹಾಕಿದ ಕಬ್ಬಿನ ಹಾಲು: ₹25
ಅರ್ಧ ಗ್ಲಾಸ್ ಕಬ್ಬಿನ ಹಾಲು: ₹20

ನೆಟ್ಟಿಗರ ಅಚ್ಚರಿ ಮತ್ತು ಮೆಚ್ಚುಗೆ:

ಈ ಫೋಟೋ ನೋಡಿದ ನೆಟ್ಟಿಗರು, "ಈ ವ್ಯಕ್ತಿ ಹೆಚ್ಚಿನ ಫೌಂಡರ್‌ಗಳಿಗಿಂತಲೂ ಉತ್ತಮವಾಗಿ 'ಯೂನಿಟ್ ಎಕನಾಮಿಕ್ಸ್' ಅರ್ಥಮಾಡಿಕೊಂಡಿದ್ದಾರೆ" ಎಂದು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ಪ್ರಮುಖ ಪ್ರತಿಕ್ರಿಯೆಗಳು ಇಲ್ಲಿವೆ:

"ಎಂಬಿಎ ಪಾಠಗಳಿಗಿಂತ ಈ ಬೀದಿ ಬದಿ ವ್ಯಾಪಾರಿಗಳೇ ಬೆಲೆ ನಿಗದಿಯ ಮನೋವಿಜ್ಞಾನವನ್ನು ಚೆನ್ನಾಗಿ ಕಲಿಸುತ್ತಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ. "ಎಂ.ಬಿ.ಎ ಪದವಿ ಇಲ್ಲದಿದ್ದರೂ, ವ್ಯವಹಾರದ ಸೂಕ್ಷ್ಮಗಳನ್ನು ಇವರು ಹೇಗೆ ಅರ್ಥೈಸಿಕೊಂಡಿದ್ದಾರೆ ಎಂಬುದು ಅಚ್ಚರಿಯ ವಿಷಯ ಎಂದು ಮತ್ತೊಬ್ಬ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಉತ್ಪನ್ನಕ್ಕೆ ಸರಿಯಾದ ಬೆಲೆ ನಿಗದಿ ಮಾಡುವುದು ಸುಲಭದ ಮಾತಲ್ಲ, ಆದರೆ ಈ ವ್ಯಾಪಾರಿ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎನ್ನುವ ಶ್ಲಾಘನೆಯೂ ಕಾಮೆಂಟ್‌ ಮೂಲಕ ವ್ಯಕ್ತವಾಗುತ್ತಿದೆ.

ಮಾತ್ರೆಗಳಲ್ಲ, ಈ ತರಕಾರಿಯ ಜ್ಯೂಸ್‌ ಸೇವಿಸಿದರೆ ಕೇವಲ 14 ದಿನಗಳಲ್ಲಿ ಬಿಪಿ ನಾರ್ಮಲ್‌!ಅಧ್ಯಯನದಲ್ಲಿ ಬಹಿರಂಗ
ಮಾತ್ರೆಗಳಲ್ಲ, ಈ ತರಕಾರಿಯ ಜ್ಯೂಸ್‌ ಸೇವಿಸಿದರೆ ಕೇವಲ 14 ದಿನಗಳಲ್ಲಿ ಬಿಪಿ ನಾರ್ಮಲ್‌!ಅಧ್ಯಯನದಲ್ಲಿ ಬಹಿರಂಗ

ಇನ್ನು ಕೆಲವು ತಾಂತ್ರಿಕ ಮನಸ್ಸುಗಳು, "ಈ ವ್ಯಾಪಾರಿ ಕಬ್ಬಿನ ಸಿಪ್ಪೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸುವ ಬಗ್ಗೆ ಯೋಚಿಸಿದರೆ, ಇದೊಂದು ಅತ್ಯುತ್ತಮವಾದ ಸರ್ಕ್ಯುಲರ್ ಎಕಾನಮಿ ಮಾದರಿಯಾಗುತ್ತದೆ" ಎಂದು ವಿಶ್ಲೇಷಿಸಿದ್ದಾರೆ.

ಒಟ್ಟಾರೆಯಾಗಿ, ಪುಸ್ತಕದ ಬದನೆಕಾಯಿ ರೀತಿ ಅಲ್ಲಿ ಏನು ಹೇಳಲಾಗಿದೆ ಅದನ್ನು ಗಿಳಿ ಪಾಠ ಮಾಡಿಕೊಂಡು ಪರೀಕ್ಷೆ ಬರೆದು ಅಂಕ ಗಳಿಸುವುದಕ್ಕಿಂತ ಬದುಕಿನ ಅನುಭವವೇ ಶ್ರೇಷ್ಠ ಪಾಠಶಾಲೆ ಎಂಬುದಕ್ಕೆ ಈ ಕಬ್ಬಿನ ಹಾಲಿನ ವ್ಯಾಪಾರಿಯೇ ಸಾಕ್ಷಿಯಾಗಿದ್ದಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+