New rules: ಗೂಗಲ್ ಪೇ, ಪೋನ್ ಪೇಯಲ್ಲಿ ಹೊಸ & ಮಹತ್ವದ ಬದಲಾವಣೆ
ಇಂದು ಗೂಗಲ್ ಪೇ, ಪೋನ್ ಪೇ ಬಳಸದೆ ಇರುವವರೇ ಇಲ್ಲ. ಇದೀಗ ಪೋನ್ ಪೇ ಹಾಗೂ ಗೂಗಲ್ ಪೇ ಫೀಚರ್‌ನಲ್ಲಿ ಮಹತ್ವದ ಬದಲಾವಣೆ ಆಗಿದೆ. ಈಗ ಸಣ್ಣ ಸಣ್ಣ ಹಣ ವಹಿವಾಟಿಗೂ ಪೋನ್ ಪೇ ಹಾಗೂ ಗೂಗಲ್ ಪೇ ಬಳಕೆಯಾಗುತ್ತದೆ. ಯುಪಿಐ (UPI: Unified Payments Interface - Instant Mobile Payments) ಹೊಸ ಮಾದರಿಯನ್ನು ಪರಿಚಯಿಸಿದ್ದು, ಇದರಿಂದ ಗೂಗಲ್ ಪಿನ್ ಇಲ್ಲದೆ ಸಹ ನೀವು 1000 ಸಾವಿರ ರೂಪಾಯಿಯ ವರೆಗೆ ಹಣ ಕಳುಹಿಸಬಹುದಾಗಿದೆ.
ನವೆಂಬರ್ 1ರಿಂದ ಈ ಬದಲಾವಣೆ ಮಾಡಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ National Payments Corporation of India (NPCI) ಹೊಸ ಫೀಚರ್ ಪರಿಚಯಿಸಿದೆ. ಇದರಿಂದ ಟಾಪ್ ಅಪ್ ಹಾಗೂ ಯುಪಿಐ ಲೈಟ್‌ನಲ್ಲಿ ಹಣ ವಹಿವಾಟಿನ ಬದಲಾವಣೆ ಆಗಿದೆ. ಯುಪಿಐ ಲೈಟ್‌ನಲ್ಲಿ ನೀವು 1,000 ರೂಪಾಯಿಯ ವರೆಗಿನ ಹಣ ಕಳುಹಿಸುವುದಕ್ಕೆ ಇನ್ಮುಂದೆ ಪಿನ್ ಅಗತ್ಯವಿಲ್ಲ ಆದರೆ ವಾಲೆಟ್ ಬ್ಯಾಲೆನ್ಸ್ ಮಿತಿಗಳು 5,000 ರೂಪಾಯಿಗೆ ಹೆಚ್ಚಳವಾಗಿದೆ. ಟಾಪ್-ಅಪ್ ಫೀಚರ್ ಯುಪಿಐ ಲೈಟ್ ಬಳಕೆದಾರರಿಗೆ ಅನುಕೂಲವಾಗಲಿದೆ. ಸಣ್ಣ ಮೊತ್ತದ ಪೇಮೆಂಟ್ ವಹಿವಾಟು ನಡೆಸುವವರಿಗೆ ಇದು ಅನುಕೂಲವಾಗಲಿದೆ.

ಈ ಹೊಸ ಫೀಚರ್ ಈಗಾಗಲೇ ಜಾರಿಯಾಗಿದೆ. ಗೂಗಲ್ ಪೇ ಹಾಗೂ ಪೋನ್ ಪೇಗಳನ್ನು ನಾವು ಈಗಾಗಲೇ ಬಳಸುತ್ತಿದ್ದರೂ, ಸ್ಮಾರ್ಟ್ ಪೋನ್ ಹೊರತುಪಡಿಸಿ ಹಾಗೂ ಅಷ್ಟಾಗಿ ಟೆಕ್ನಾಲಜಿ ತಿಳಿಯದೆ ಇರುವವರಿಗಾಗಿ ಯುಪಿಐ ಲೈಟ್ ಪರಿಯಿಸಲಾಗಿದೆ. ಯುಪಿಐ ಲೈಟ್‌ನಲ್ಲಿ ಇದೀಗ ಹಲವು ಸೌಲಭ್ಯಗಳು ನಿಮಗೆ ಲಭ್ಯವಾಗಲಿದೆ.
ಹೊಸ ಟ್ರಾನ್ಸಕ್ಷನ್ ಮಿತಿ ಹಾಗೂ ಹಲವು ಸೌಲಭ್ಯ
ಯುಪಿಐ ಹೊಸ ಬದಲಾವಣೆಯಲ್ಲಿ ಡಿಜಿಟಲ್ ವಹಿವಾಟು ನಡೆಸುವವರು ಯಾವುದೇ ರಹಸ್ಯ (ಕೋಡ್) ಬಳಸದೆ ಹೊಸ ಹಣ ಕಳುಹಿಸಬಹುದಾಗಿದೆ. ಯುಪಿಐ ಲೈಟ್ ಬಳಸುವವರು ಇದೀಗ 1000 ಸಾವಿರ ರೂಪಾಯಿಯ ವರೆಗೆ ವಹಿವಾಟು ನಡೆಸಲು ಸಾಧ್ಯವಿದೆ. ಈ ಹಿಂದೆ ಈ 500 ರೂಪಾಯಿ ಇತ್ತು. ಅದನ್ನು ಇದೀಗ ಹೆಚ್ಚಿಸಲಾಗಿದೆ. ಇನ್ನು ಗರಿಷ್ಠ ವ್ಯಾಲೆಟ್ ಬ್ಯಾಲೆನ್ಸ್ ಮಿತಿಯನ್ನು 2,000 ರೂಪಾಯಿಯಿಂದ 5,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ದೈನಂದಿನ ವಹಿವಾಟಿನ ಮಿತಿ 4,000 ರೂಪಾಯಿ ಇರಲಿದೆ.
ಇನ್ನು ಯುಪಿಐ ಲೈಟ್ಸ್‌ನಲ್ಲಿ ಟಾಪ್‌ಅಪ್ ಸೇವೆಯನ್ನು ಸಹ ಸೇರಿಸಲಾಗಿದೆ. ಬ್ಯಾಲೆನ್ಸ್ ಕಡಿಮೆಯಾದಾಗ UPI ಲೈಟ್ ಖಾತೆಯಲ್ಲಿ ಟಾಪ್ ಅಪ್ ಪ್ರಕ್ರಿಯೆ (ಸ್ವಯಂ ರೀಚಾರ್ಜ್) ಆಗುತ್ತದೆ. ಬ್ಯಾಲೆನ್ಸ್ ಮಿತಿ ಕಡಿಮೆಯಾದರೆ, ಈಗ ಇರುವ ಹೊಸ ಟಾಪ್-ಅಪ್ ಫೀಚರ್ UPI ಲೈಟ್ ಖಾತೆ ತನ್ನಿಂದ ತನೇ ರೀಚಾರ್ಜ್ ಆಗಲಿದೆ. ಉದಾ: ನಿಮ್ಮ ಯಾವುದರೂ ಇಎಂಐ (emi) ಇದ್ದರೆ, ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ಸಹ ಹಣ ಕಡಿತವಾಗುವಂತೆ.
2024ರ ಆಗಸ್ಟ್ 27ರಂದು ಸ್ವಯಂ ಟಾಪ್-ಅಪ್ ಅನ್ನು ಪರಿಚಯಿಸಲಾಗಿತ್ತು. ಅಲ್ಲದೇ 500 ರೂಪಾಯಿಗಿಂತ ಕಡಿಮೆ ವಹಿವಾಟುಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಿನ್ ಇಲ್ಲದೆಯೂ ವಹಿವಾಟು ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಆ ಮೊತ್ತವನ್ನು 1,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.












Click it and Unblock the Notifications