National Girl Child Day 2025: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಶುಭಾಶಯ, ಈ ದಿನದ ವಿಶೇಷವೇನು
National Girl Child Day 2025: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.. ಹೆಣ್ಣು ಸಮಾಜದ ಕಣ್ಣು. ಹೆಣ್ಣು ಮಕ್ಕಳ ಸಾಧನೆ - ಸವಾಲುಗಳನ್ನು ಚರ್ಚೆ ಮಾಡುವ ಪ್ರಮುಖ ದಿನಗಳಲ್ಲಿ ಜನವರಿ 24 ಸಹ ಒಂದು. ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಭಾರತದಲ್ಲಿ ಹೆಣ್ಣು ಮಕ್ಕಳು ಎದುರಿಸುವ ಸವಾಲುಗಳು ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಈ ದಿನವನ್ನು ಮೀಸಲಿರಿಸಲಾಗಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆಗೆ ಕಾರಣವೇನು, ಈ ದಿನದ ವಿಶೇಷವೇನು ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಶುಭಕೋರುವ ಸಂದೇಶಗಳು ಇಲ್ಲಿವೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2025 ಆಚರಣೆಯ ಹಿನ್ನೆಲೆ - ಇತಿಹಾಸ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ 24ಕ್ಕೆ ಆಚರಿಸಲಾಗುತ್ತದೆ. 2008ರಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಈ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ರಕ್ಷಣೆಯ ಮಹತ್ವವನ್ನು ತಿಳಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.

ದೇಶದಲ್ಲಿ ಲಿಂಗಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವುದು, ಶಾಲೆಯಿಂದ ಹೆಣ್ಣು ಮಕ್ಕಳು ಹೊರಗೆ ಉಳಿಯುವುದನ್ನು ತಡೆಯುವುದು, ಬಾಲ್ಯ ವಿವಾಹ ತಡೆ ಹಾಗೂ ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಹಾಗೂ ಕಾನೂನು ಪರಿಚಯಿಸುವ ಉದ್ದೇಶದಿಂದ ದೇಶದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯ - ಶಿಕ್ಷಣ ಹಾಗೂ ಸುರಕ್ಷತೆಯ ಬಗ್ಗೆ ತಿಳಿಸುವುದು ಸಹ ಇದರಲ್ಲಿ ಸೇರಿದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2025ರ ಶುಭಾಶಯಗಳು
* ಪ್ರತಿ ಹೆಣ್ಣು ಮಗವು ಗೌರವ, ಪ್ರೀತಿ ಹಾಗೂ ಸಮಾನತೆಯಿಂದ ಬೆಳೆಯಲು ಅರ್ಹರಾಗಿದ್ದಾರೆ. ಇದನ್ನು ನನಸಾಗಿಸುವ ಜವಾಬ್ದಾರಿ ನಮ್ಮದು ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.

* ಪ್ರತಿ ಹೆಣ್ಣು ಮಗುವಿಗೂ ಉತ್ತಮ ಶಿಕ್ಷಣ ನೀಡಿ ಅವರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪವಾಗಿ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು
* ಹೆಣ್ಣು ಮಕ್ಕಳು ನಾಳಿನ ನಿಜವಾದ ಬದಲಾವಣೆಗಳನ್ನು ತರಬಲ್ಲರು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು
* ಹೆಣ್ಣು ಮಗು ಹೊರೆಯಲ್ಲ, ಆಶೀರ್ವಾದ. ಅವರ ಕನಸುಗಳನ್ನು ಈಡೇರಿಸೋಣ ಹೆಣ್ಣು ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳೋಣ. ಎಲ್ಲರಿಗೂ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.
* ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿದೆ. ಹೆಣ್ಣು ಮಗು ಉತ್ತಮ ಶಿಕ್ಷಣ ಪಡೆದರೆ ಒಂದು ತಲೆಮಾರು ಮುನ್ನಡೆದಂತೆ. ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು

* ಹೆಣ್ಣು ಮಕ್ಕಳು ಕನಸು ಕಾಣಲು ಹಾಗೂ ಆ ಕನಸುಗಳನ್ನು ಈಡೇರಿಸುವ ಸಮಾಜವನ್ನು ನಿರ್ಮಿಸೋಣ. ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.
* ಹೆಣ್ಣು ಮಗು ಎನ್ನುವುದು ಪ್ರೀತಿ ಹಾಗೂ ಭರವಸೆಯ ಉಡುಗೊರೆ. ಅವರ ಕನಸುಗಳಿಗೆ ಆಸರೆಯಾಗಿ - ಅವರ ನಗುವಿಗೆ ಕಾರಣರಾಗಿ. ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.
* ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಆ ದೇಶ ಬಲಶಾಲಿ ಹಾಗೂ ಶ್ರೀಮಂತವಾಗುತ್ತವೆ - ಮಿಚೆಲ್ ಒಬಾಮ
* ಒಬ್ಬ ಪುರುಷ ಎಲ್ಲವನ್ನೂ ನಾಶಪಡಿಸುತ್ತಾನೆ ಎಂದಾದರೆ, ಹೆಣ್ಣು ಅದನ್ನು ಬದಲಾಯಿಸಬಾರದೇ - ಮಲಾಲಾ ಯೂಸುಫ್ ಜಾಯ್












Click it and Unblock the Notifications