Panipuri: ಪಾನಿಪುರಿ ಪ್ರಿಯರಿಗೆ ಲೈಫ್‌ಟೈಮ್ ಅನ್‌ಲಿಮಿಟೆಡ್ ಆಫರ್, ಎಲ್ಲಿ?
ಸಾಮಾನ್ಯವಾಗಿ ವ್ಯಾಪಾರ ಚೆನ್ನಾಗಿ ನಡೆಯಲಿ, ಗ್ರಾಹಕರು ಹೆಚ್ಚಾಗಿ ಬರಲಿ ಎಂಬ ಕಾರಣಕ್ಕೆ ಅಂಗಡಿಯವರು ಹಲವು ಆಫರ್‌ಗಳನ್ನು ನೀಡುತ್ತಾರೆ. ಗ್ರಾಹಕರನ್ನು ಸೆಳೆಯುವುದು ಇದರ ಮುಖ್ಯ ಉದ್ದೇಶ. ಆದರೆ ಪಾನಿಪುರಿ ಪ್ರಿಯರಿಗೆ ಖುಷಿ ನೀಡುವ ಆಫರ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಒಂದು ಪ್ಲೇಟ್ ತಗೊಂಡ್ರೆ ಇನ್ನೊಂದು ಪ್ಲೇಟ್ ಪಾನಿಪುರಿ ಫ್ರೀ ಅನ್ನೋದೆಲ್ಲ ಕಾಮನ್. ಪಾನಿಪುರಿ ಅಂಗಡಿಯೊಂದು ಲೈಫ್‌ಟೈಮ್ ಹಾಗೂ ಅನ್‌ಲಿಮಿಟೆಡ್ ಪಾನಿಪುರಿ ಆಫರ್ ಅನ್ನು ಗ್ರಾಹಕರಿಗೆ ಘೋಷಿಸಿದೆ.
ಈ ಆಫರ್ ಕೇಳಿ ಪಾನಿಪುರಿ ಪ್ರಿಯರ ಬಾಯಲ್ಲಿ ನೀರೂರುತ್ತಿದೆ. ಇಷ್ಟಕ್ಕೂ ಈ ಆಫರ್ ಕೊಟ್ಟಿರೋದು ಮಹಾರಾಷ್ಟ್ರದ ನಾಗ್ಪುರದ ಪಾನಿಪುರಿ ಮಾರಾಟಗಾರ. ಗ್ರಾಹಕರನ್ನು ಸೆಳೆಯಲು ಲೈಫ್‌ಟೈಮ್ ಹಾಗೂ ಅನ್‌ಲಿಮಿಟೆಡ್ ಪಾನಿಪುರಿ ಆಫರ್ ಘೋಷಿಸಿದೆ. ಇದಕ್ಕಾಗಿ ನೀವು 99,000 ರೂಪಾಯಿ ಪಾವತಿಸಿದರೆ ಸಾಕು. ನೀವು ನಿಮ್ಮ ಜೀವನಪೂರ್ತಿ ಈ ಅಂಗಡಿಗೆ ತೆರಳಿ ನಿಮಗೆ ಸಾಕು ಎನ್ನುವಷ್ಟು ಪಾನಿಪುರಿ ಸವಿಯಬಹುದು. ಈ ಆಫರ್ ಕೇಳಿ ಎಲ್ಲರೂ ಶಾಕ್ ಕೂಡ ಆಗಿದ್ದಾರೆ.

ಪಾನಿಪುರಿ ಮಾರಾಟಗಾರರು ಗ್ರಾಹಕರನ್ನು ಆಕರ್ಷಿಸಲು ಜೀವಿತಾವಧಿಗೆ 99 ಸಾವಿರಕ್ಕೆ ಪಾನಿಪುರಿಯಂತಹ ರಿಯಾಯಿತಿಗಳನ್ನು ಘೋಷಿಸಿದೆ. ಇದಲ್ಲದೆ ಮತ್ತೊಂದು ಆಫರ್ ಕೂಡ ಘೋಷಣೆ ಮಾಡಲಾಗಿದೆ. ಮೊದಲನೇ ಆಫರ್‌ಗೆ ನೀವು ಹಣ ಪಾವತಿಸಬೇಕು. ಆದರೆ ಎರಡನೇ ಆಫರ್‌ಗೆ ಅಂಗಡಿಯವರೇ ನಿಮಗೆ ಕೈತುಂಬಾ ಕಾಸು ಕೊಡಲಿದ್ದಾರೆ. ಈ ಆಫರ್ ಏನಪ್ಪಾ ಅಂದ್ರ, ನೀವು 151 ಪಾನಿಪುರಿಗಳನ್ನು ಒಂದೇ ಸಲಕ್ಕೆ ತಿಂದರೆ 21,000 ರೂಪಾಯಿಗಳ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಈ ಆಫರ್ ಕೇಳಿ ಪಾನಿಪುರಿ ಪ್ರಿಯರು ಅಂಗಡಿ ಮುಂದೆ ಕ್ಯೂ ನಿಂತಿದ್ದಾರೆ.
ಪಾನಿಪುರಿ ಮಾರಾಟಗಾರ ವಿಜಯ್ ಮೇವಾಲಾಲ್ ಗುಪ್ತಾ ಎಂಬುವವರು ಈ ಆಫರ್ ಘೋಷಿಸಿದ್ದಾರೆ. "ನಾವು 1ರೂಪಾಯಿಯಿಂದ 99,000 ರೂಪಾಯಿವರೆಗೆ ಒಂದು ದಿನದಿಂದ ಲೈಫ್‌ಟೈಮ್‌ವರೆಗೆ ಈ ಆಫರ್‌ಗಳನ್ನು ಕೊಡುತ್ತಿದ್ದೇವೆ. ನೀವೇನಾದರೂ ಒಂದೇ ಸಿಟ್ಟಿಂಗ್‌ನಲ್ಲಿ 40 ಪಾನಿಪುರಿಗಳನ್ನು ತಿಂದರೆ ಕೇವಲ ಒಂದು ರೂಪಾಯಿ ಪಾವತಿಸಬಹುದು. ಇದು ಮಹಾಕುಂಭದ ಆಫರ್ ಎಂದಿದ್ದಾರೆ. ಅಲ್ಲದೆ, 90 ರೂಪಾಯಿಗೆ ನೀವು ಅಲ್‌ಲಿಮಿಟೆಡ್ ಪಾನಿಪುರಿ ಸವಿಯಬಹುದು. ಭವಿಷ್ಯದಲ್ಲಿ ನನ್ನ ಗ್ರಾಹಕರನ್ನು ನಾನು ಹಣದುಬ್ಬರದಿಂದ ಮುಕ್ತಗೊಳಿಸಲು ನಾನು ಬಯಸುತ್ತೇನೆ. ಈ ಆಫರ್‌ಗಳಿಂದಾಗಿ ನಾನು ಫೇಮಸ್ ಕೂಡ ಆಗಿದ್ದು, ನನ್ನ ವ್ಯಾಪಾರ ಕೂಡ ಹೆಚ್ಚಿಸಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

"ನಾನು 195 ರೂಪಾಯಿಗೆ ಒಂದು ತಿಂಗಳ ಅನ್‌ಲಿಮಿಟೆಡ್ ಪಾನಿಪುರಿ ಆಫರ್ ಪಡೆದಿದ್ದೇನೆ. ಹಾಗಾಗಿ ನಾವು ಪ್ರತಿ ದಿನ ಇಲ್ಲಿಗೆ ಬರುತ್ತೇವೆ. ಈ ಅಂಗಡಿಯಲ್ಲಿ ನೀಡುವ ಪಾನಿಪುರಿ ತುಂಬಾ ರುಚಿಯಾಗಿರುತ್ತೆ. ಇದರಿಂದ ಈ ಅಂಗಡಿ ಕೂಡ ಫೇಮಸ್ ಆಗಿದೆ. ಅಂಗಡಿಯವರು ಕೂಡ ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ಸ್ವಭಾವವನ್ನು ಹೊಂದಿದ್ದಾರೆ" ಎಂದು ಗ್ರಾಹಕರು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗ ಇವರ ಬಗ್ಗೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿನ ಆಫರ್‌ಗಳು ಪಾನಿಪುರಿ ಪ್ರಿಯರಿಗೆ ನಿಜಕ್ಕೂ ಹಬ್ಬವಿದ್ದಂತೆ. ನಾವು ಇಲ್ಲಿರುವ ಆಫರ್‌ಗಳನ್ನು ಪಡೆಯಲು ತುದಿಗಾಗಲ್ಲಿ ನಿಂತಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications