MG Windsor EV: ಎಂಜಿ ವಿಂಡ್ಸರ್ ಇವಿ ಬಿಡುಗಡೆ ದಿನಾಂಕ ರಿವೀಲ್, ದರ, ವಿಶೇಷತೆ ತಿಳಿಯಿರಿ
MG Windsor EV: ಕಾರು ತಯಾರಕ ಕಂಪನಿಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಂಪನಿಗಳಲ್ಲೊಂದಾದ ಎಂಜಿ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಯ ದಿನಾಂಕವನ್ನು ರಿಲೀಲ್ ಮಾಡಿದೆ. ಹಾಗಾದರೆ ಈ ಕಾರು ಯಾವಾಗ ಬಿಡುಗಡೆ ಆಗಲಿದೆ ಹಾಗೂ ವಿಶೇತೆಗಳು, ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಹೊಸ ಎಂಜಿ ವಿಂಡ್ಸರ್ ಎಲೆಕ್ತ್ರಿಕ್ ಕಾರು ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ ಎಂದು ಎಂಜಿ ಮೋಟಾರ್ JSW ಇಂಡಿಯಾ ಅಧಿಕೃತವಾಗಿ ತಿಳಿಸಿದೆ. ಹೊಸ ಎಂಜಿ ವಿಂಡ್ಸರ್ ಎಲೆಕ್ತ್ರಿಕ್ ಕಾರು ಮಾದರಿಯು ವುಲಿಂಗ್ ಕ್ಲೌಡ್ ಇವಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನಿಂದ ಮೂರನೇ ಎಲೆಕ್ಟ್ರಿಕ್ ಕಾರಾಗಿದೆ. ಇನ್ನು ಇದೀಗ ಹೊಸ ಎಂಜಿ ವಿಂಡ್ಸರ್ ಇವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ.

ಇನ್ನು JSW ಮತ್ತು MG ಮೋಟಾರ್ ಇಂಡಿಯಾ ಟೈ-ಅಪ್ ನಂತರ, ವಿಂಡ್ಸರ್ EV ಕಂಪನಿಯ ಮೊದಲ ಕಾರು ಇದಾಗಿದೆ. ಅಲ್ಲದೆ, ಈ ಎಂಜಿ ವಿಂಡ್ಸರ್ ಎಲೆಕ್ತ್ರಿಕ್ ಕಾರನ್ನು ಹಿಮಾಲಯದಲ್ಲಿ ಪರೀಕ್ಷಿಸುತ್ತಿರುವ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ. ಹೊಸ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನೇಕ ಎಂಪಿವಿಗಳನ್ನು ಹೋಲುತ್ತದೆ ಎಂದು ಹೇಳಲಾಗುತ್ತಿದೆ.
ಚೀನಾ ಮಾರುಕಟ್ಟೆಯಲ್ಲಿ ಸದ್ಯ ಮಾರಾಟದಲ್ಲಿರುವ ವುಲ್ಲಿಂಗ್ ಮೋಟಾರ್ ನಿರ್ಮಾಣದ ಕ್ಲೌಡ್ ಇವಿ ಕಾರು ಮಾದರಿಯನ್ನೇ ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಹೊಸ ಬದಲಾವಣೆಗೊಂದಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಂಪನಿಯ ಮೂಲಗಳು ಹೇಳುತ್ತಿವೆ.
ಅಲ್ಲದೆ, ಈ ಎಂಜಿ ವಿಂಡ್ಸರ್ ಎಲೆಕ್ತ್ರಿಕ್ ಕಾರನ್ನು ಹಿಮಾಲಯದಲ್ಲಿ ಪರೀಕ್ಷಿಸುತ್ತಿರುವ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ. ಹೊಸ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನೇಕ ಎಂಪಿವಿಗಳನ್ನು ಹೋಲುತ್ತದೆ. ಎಂಜಿ ಇದನ್ನು ಕ್ರಾಸ್ಒವರ್ ಅಥವಾ ಸಿಯುವಿ ಎಂದು ಕರೆಯುತ್ತಿದೆ, ಆದ್ದರಿಂದ ನಾವು ವಿಂಡ್ಸರ್ ಅಂತಳು ಕರೆಯುತ್ತೇವೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಎಂಜಿ ಕಾಮೆಟ್ ತರಹದ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.
ಈ ಎಂಜಿ ಕ್ಲೌಡ್ ಇವಿ ಮೊದಲಿನಿಂದ ನಿರ್ಮಿಸಲಾದ ಹೊಚ್ಚಹೊಸ ಮಾದರಿಯಲ್ಲ. ಇದು ಇಂಡೋನೇಷ್ಯಾದಲ್ಲಿ ಮಾರಾಟವಾದ ವುಲಿಂಗ್ ಕ್ಲೌಡ್ ಇವಿಯನ್ನು ಆಧರಿಸಿದೆ. ಈ ಎಂಜಿ ಕ್ಲೌಡ್ ಎಲೆಕ್ಟ್ರಿಕ್ ಕಾರನ್ನು ಅಂತಾರಾಷ್ಟ್ರೀಯವಾಗಿ 50.6 kWh ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುತ್ತದೆ. ಎಲೆಕ್ಟ್ರಿಕ್ ಮೋಟಾರ್ 136 PS ಮತ್ತು 200 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಲೌಡ್ ಎಲೆಕ್ಟ್ರಿಕ್ ಕಾರು 460 ಕಿಲೋ ಮೀಟರ್ ಮೈಲೇಜ್ ನೀಡುವ ಸಾಧ್ಯತೆಯಿದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ.
ಚಿಕ್ಕದಾದ 37.9 kWh ಬ್ಯಾಟರಿ ಪ್ಯಾಕ್ ಆಯ್ಕೆಯೂ ಸಹ ಲಭ್ಯವಿದ್ದು, ಇದು 360 ಕಿಲೋ ಮೀಟರ್ ಮೈಲೇಜ್ ನೀಡುವ ನಿರೀಕ್ಷೆಯಿದೆ. ಈ ಹೊಸ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಸ್ಪರ್ಧಾತ್ಮಕವಾಗಿ ಬೆಲೆಯನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ ಮತ್ತು ಇದರ ಬೆಲೆ 20 ಲಕ್ಷಕ್ಕಿಂತ ಕಡಿಮೆಯಿರುವ ನಿರೀಕ್ಷೆಯಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಕಾರಿನಲ್ಲಿ ಎಲ್ಇಡಿ ಲೈಟ್ಸ್, ಫ್ಲಶ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಡಿಜಿಟಲ್ ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಕನೆಕ್ಡೆಡ್ ಕಾರ್ ಟೆಕ್ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗುತ್ತಿದ್ದು, ಇದು ಅಪಘಾತಗಳನ್ನು ತಡೆಯುವ ಮೂಲಕ ಪ್ರಾಣಹಾನಿ ಆಗುವುದನ್ನು ನಿಯಂತ್ರಿಸಲಿದೆ. ಇನ್ನು ಇದರ ಎಕ್ಸ್‌ಶೋ ರೂಂ ದರ 18 ಲಕ್ಷದಿಂದ 20 ಲಕ್ಷದವರೆಗೂ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications