Mercedes-Benz: ಭಾರತದಲ್ಲಿ ಹೊಸ ಕಾರು ಬಿಡುಗಡೆ ಮಾಡಿದ ಮರ್ಸಿಡಿಸ್‌-ದರ, ವಿಶೇಷತೆ ತಿಳಿಯಿರಿ

Mercedes-Benz: ಮೂಲತಃ ಜರ್ಮನಿ ಮೂಲದ ಮರ್ಸಿಡಿಸ್‌ ಬೆಂಜ್ ಕಾರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಐಷಾರಾಮಿ ಕಾರುಗಳಲ್ಲಿ ಇದು ಒಂದಾಗಿದ್ದು, ಇದೀಗ ಭಾರತದಲ್ಲಿ ಮರ್ಸಿಡಿಸ್‌ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದರ ವಿಶೇಷತೆ ಮತ್ತು ದರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ‌

ಭಾರತದಲ್ಲಿ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಮಾಡೆಲ್ ಕಾರಿಗೆ ಮತ್ತಷ್ಟು ಮಾರ್ಪಾಡನ್ ತಂದಿದೆ. ಇದೀಗ C300 AMG ಲೈನ್ ಕಾರನ್ನು ಮಾರುಕಟ್ಟಗೆ ಪರಿಚಯಿಸಿದ್ದು, ಇದರ ದರ 69,00,000 ರೂಪಾಯಿ ಆಗಿದೆ. ಸಿ-ಕ್ಲಾಸ್ ಶ್ರೇಣಿಯ ಕಾರುಗಳು C200, C200ಡಿ ಹಾಗೂ ಈಗ ಲಾಂಚ್ ಆದ C300 AMG ಲೈನ್ ಮೂರು ಮಾದರಿಗಳಲ್ಲಿ ಲಭ್ಯವಿದೆ. ಇದನ್ನು ಈ ಹಿಂದೆ ಇದ್ದ ಡೀಸೆಲ್ ಚಾಲಿತ C300d AMG ಲೈನ್ ಬದಲಿಗೆ ಬಿಡುಗಡೆ ಮಾಡಲಾಗಿದೆ.

Mercedes launched new car in India Know details

C200 ಹಾಗೂ C200ಡಿಯ ಎಕ್ಸ್ ಶೋ ರೂಂ ಬೆಲೆ 61.85 ಲಕ್ಷದಿಂದ 62.85 ಲಕ್ಷ ರೂಪಾಯಿ ಆಗಿದ್ದು, ಇನ್ನು ಹೆಚ್ಚು ಕಾರ್ಯಕ್ಷಮತೆಯ C43 AMGಯ ಎಕ್ಸ್ ಶೋರೂಂ ಬೆಲೆ 98.25 ಲಕ್ಷ ರೂಪಾಯಿ ಆಗಿದೆ.

ಮರ್ಸಿಡಿಸ್-ಬೆಂಜ್ C300 AMG ಕಾರಿನ ಬಂಪರ್‌ಗಳನ್ನು ಹೊಸ ವಿನ್ಯಾಸದಲ್ಲಿ ಅತ್ಯಾಕರ್ಷಕವಾಗಿ ತಯಾರು ಮಾಡಲಾಗಿದ್ದು, ಈ ಮೂಲಕ ಇದು ಗ್ರಾಹಕರನ್ನು ಸೆಳೆಯುತ್ತಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳಲ್ಲಿ 3ಡಿ ಎಫೆಕ್ಟ್‌ಗಳನ್ನು ಅಳವಡಿ ಮಾಡಲಾಗಿದ್ದು, AMG ಲೈನ್ ಫ್ರಂಟ್ ಗ್ರಿಲ್ ಸೇರಿದಂತೆ ಆಕರ್ಷಕ ವಿನ್ಯಾಸಗಳನ್ನು ಹೊಂದಿದೆ. ಬಣ್ಣದ ವಿಚಾರಕ್ಕೆ ಬಂದರೆ, ಈ ಕಾರು ಪ್ಯಾಟಗೋನಿಯಾ ರೆಡ್ ಬ್ರೈಟ್ ಮತ್ತು ಸೋಡಲೈಟ್ ಬ್ಲೂ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ.

C300 AMG ಕಾರಿನ ಒಳಾಂಗಣ ವಿನ್ಯಾಸ ಕೂಡ ಅತ್ಯಾಕರ್ಷಕವಾಗಿದ್ದು, ಸ್ಟ್ಯಾಂಡರ್ಡ್ ಗುಣಮಟ್ಟದಲ್ಲಿದೆ. ಇನ್ನು ಬರ್ಮೆಸ್ಟರ್ 3D ಸರೌಂಡ್ ಸೌಂಡ್ ಸಿಸ್ಟಮ್, ಡಿಜಿಟಲ್ ಲೈಟ್‌ಗಳು, ಅಗ್ಯುಮೆಂಟೆಡ್ ರಿಯಾಲಿಟಿ ನ್ಯಾವಿಗೇಷನ್, ಬ್ಲೈಂಡ್ ಸ್ಪಾಟ್ ಅಸಿಸ್ಟ್ ಮತ್ತು ಕೀಲೆಸ್-ಗೋ ಕಂಫರ್ಟ್ ಪ್ಯಾಕೇಜ್‌ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ.

C300 AMG ಲೈನ್ ಮಾದರಿಯ ಕಾರು 2.0-ಲೀಟರ್, ನಾಲ್ಕು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 48V ಮೈಲ್ಡ್ ಹೈಬ್ರೀಡ್ ಸಿಸ್ಟಮ್‌ಗಳನ್ನು ಹೊಂದಿದೆ. ಇದರಿಂದ 255 bhp ಮತ್ತು 400 Nm ಶಕ್ತಿಯನ್ನು ಕಾರು ಪಡೆದುಕೊಂಡಿದೆ. ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) 22 bhp ಮತ್ತು 205 Nmನ ಹೆಚ್ಚುವರಿ ಔಟ್‌ಪುಟ್ ಅನ್ನು ನೀಡುತ್ತದೆ.

ಸುಮಾರು 30 ಸೆಕೆಂಡುಗಳ ಕಾಲ ಹೆಚ್ಚುವರಿ 27 bhp ಅನ್ನು ಒದಗಿಸುವ ಓವರ್‌ಬೂಸ್ಟ್ ಸೌಲಭ್ಯವೂ ಈ ಕಾರಿನಲ್ಲಿ ಇದೆ. ಇಂಜಿನ್ ಅನ್ನು 9-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಇದು 0-100 kmph ಸ್ಪ್ರಿಂಟ್ ಸಮಯವನ್ನು 6 ಸೆಕೆಂಡುಗಳು ಮತ್ತು 250 kmph ಗರಿಷ್ಠ ವೇಗವನ್ನು ನೀಡಲಿದೆ.

ಇನ್ನು C200 ಮತ್ತು C200ಡಿ ಕೂಡ ಕೆಲವೊಂದು ವಿಶೇಷತೆಗಳನ್ನು ಒಳಗೊಂಡಿದ್ದು, ಹೀಟೆಡ್ ಹಾಗೂ ವೆಂಟಿಲೇಟೆಡ್ ಮುಂಭಾಗ ಸೀಟುಗಳು, 360-ಡಿಗ್ರಿ ಕ್ಯಾಮೆರಾ, 6 ಪಟ್ಟು ವೇಗದ ಚಾರ್ಜಿಂಗ್ ಯುಎಸ್‌ಬಿ-ಸಿ ಪೋರ್ಟ್ಸ್, ಹೈ ಬೀಮ್ ಅಸಿಸ್ಟ್ ಅನ್ನು ಒಳಗೊಂಡಿವೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+