Mahindra XUV: ಅತೀ ಕಡಿಮೆ ಬೆಲೆಯಲ್ಲಿ ಮಹೀಂದ್ರಾ ಕಾರು ಕೊಳ್ಳಬೇಕೆ.?-ಒಂದು ತಿಂಗಳು ಬಿಟ್ಟರೆ ಈ ಬಿಗ್ ಆಫರ್ ಸಿಗೋದಿಲ್ಲ
Mahindra SUV discounts in June: ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆ ಒಂದಕ್ಕಿಂಒಂದು ಕಂಪನಿಗಳು ಗೈಗೆಟಕುವ ದರದಲ್ಲಿ ವಾಹನಗಳನ್ನು ಬಿಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿವೆ. ಅದರಲ್ಲೂ ಭಾರತದ ಬೃಹತ್ ಕಾರ್ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಇದೀಗ ಈ ಕಾರುಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಹಾಗಾದರೆ ಆ ಕಾರುಗಳ ವಿಶೇಷತೆ ಹಾಗೂ ದರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಧ್ಯಮ ಕ್ರಮಾಂಕದ ಎಕ್ಸ್‌ಯುವಿ ಕಾರುಗಳ ವಿಭಾಗದಲ್ಲಿ ಇದೀಗ ಮಹೀಂದ್ರಾ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿದೆ. ಕಂಪನಿಯು ಎಕ್ಸ್‌ಯುವಿ700 ಸೇರಿ ಹಲವು ಮಾದರಿಯ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಿದೆ. ಈ ಹೊಸ ಆಫರ್‌ಗಳು ಮೇ ಕೊನೆಯವರೆಗೂ ಇರಲಿದೆ. ಹಾಗಾದರೆ ಎಕ್ಸ್‌ಯುವಿ700 ಜೊತೆ ಯಾವೆಲ್ಲಾ ಕಾರುಗಳ ಮೇಲೆ ಆಫರ್‌ಗಳನ್ನು ಘೋಷಣೆ ಮಾಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

XUV700: ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಕಾರು ಖರೀದಿಯ ಮೇಲೆ 1.50 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ಅನ್ನು ನೀಡಿದೆ. ಅಲ್ಲದೆ, 1.30 ಲಕ್ಷ ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಆಫರ್ ಇರಲಿದೆ. ಈ ಆಫರ್‌ಗಳನ್ನು ಸ್ಟಾಕ್ ಲಭ್ಯವಿರುವ 2023ರ ಎಕ್ಸ್‌ಯುವಿ700 ಮಾದರಿಯ ಮೇಲೆ ಮಾತ್ರ ನೀಡುತ್ತಿದೆ. ಆದರೆ 2024ರ ಹೊಸ ಮಾದರಿಯ ಮೇಲೆ ಯಾವುದೇ ಆಫರ್ ಇಲ್ಲ. ಗ್ರಾಹಕರು ಆಫರ್ ಬಯಸುವುದಾದರೇ 2023ರ ಸ್ಟಾಕ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ಎಲ್ಲಾ ವೆರಿಯೆಂಟ್‌ಗಳ ಮೇಲೂ ಇದು ಅನ್ವಯ ಆಗಲಿದೆ.
ಇದೀಗ ಎಕ್ಸ್‌ಯುವಿ700 ಮಾದರಿಯ ಕಾರು ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 5 & 7 ಸೀಟರ್ ಸೀಟ್‌ಗಳನ್ನು ಹೊಂದಿದ್ದು, ಖರೀದಿಗೆ ಅವಕಾಶವಿದೆ. ಇದು 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಅಷ್ಟೇ ಅಲ್ಲದೆ ಇನ್ನು ಸೇಪ್ಟಿ ಸೌಲಭ್ಯಗಳನ್ನು ಕೂಡ ಹೊಂದಿದೆ. ಇನ್ನು ಹೊಸ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಇದ್ದು, ಇದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ. ಇದರ ಎಕ್ಸ್ ಶೋರೂಂ ಬೆಲೆ 13.99 ಲಕ್ಷದಿಂದ 26.99 ಲಕ್ಷ ರೂಪಾಯಿವರೆಗೂ ಇದೆ.
ಸ್ಕಾರ್ಪಿಯೋ-ಎನ್: ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ-ಎನ್ ಕಾರಿನ ಮೇಲೆ 1 ಲಕ್ಷ ರೂಪಾಯಿವರೆಗೂ ಡಿಸ್ಕೌಂಟ್ ನೀಡುತ್ತಿದೆ. ಹೊಸ ಆಫರ್‌ನಲ್ಲಿ ಸ್ಕಾರ್ಪಿಯೋ-ಎನ್ ಕಾರಿನ ಆಲ್ ವ್ಹೀಲ್ ಡ್ರೈವ್ ಮಾದರಿಗಳ ಮೇಲೆ 1 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಮತ್ತು ಫ್ರಂಟ್ ವ್ಹೀಲ್ ಡ್ರೈವ್ ಕಾರುಗಳ ಮೇಲೆ 60 ಸಾವಿರ ರೂಪಾಯಿವರೆಗೂ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ.
ಈ ಸ್ಕಾರ್ಪಿಯೋ-ಎನ್ ಹೊಸ ವಿನ್ಯಾಸದೊಂದಿಗೆ, ಹಲವು ಕಂಪನಿಗಳ ಕಾರುಗಳಿಗೆ ಪ್ರತಿಸ್ಪರ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪವರ್ ಫುಲ್ ಎಂಜಿನ್ ಆಯ್ಕೆ ಹೊಂದಿರುವುದು ಗ್ರಾಹಕರ ಪ್ರಮುಖ ಆಕರ್ಷಣೆ ಆಗಿದೆ. ಸ್ಕಾರ್ಪಿಯೋ ಎನ್‌ನಲ್ಲಿ 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, ಇದು ಎಕ್ಸ್ ಶೋರೂಂ ಬೆಲೆ 13.60 ಲಕ್ಷದಿಂದ 24.54 ರೂಪಾಯಿವರೆಗೂ ಇದೆ.
XUV400 EV: ಇದೀಹ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಗಮನ ಸೆಳೆಯುತ್ತಿರುವ ಎಕ್ಸ್‌ಯುವಿ400 ಇವಿ ಕಾರಿನ ಮೇಲೆ ಮಹೀಂದ್ರಾ ಕಂಪನಿಯು 4.40 ಲಕ್ಷ ರೂಪಾಯಿ ಡಿಸ್ಕೌಂಟ್ ಕೊಡುತ್ತಿದೆ. ಇದರ ಎಕ್ಸ್ ಶೋರೂಂ ಬೆಲೆ 15.49 ಲಕ್ಷದಿಂದ 17.49 ಲಕ್ಷ ರೂಪಾಯಿ ಇದೆ. ಈ ಕಾರು ಇಸಿ ಮತ್ತು ಇಎಲ್ ಎನ್ನುವ ಎರಡು ವೆರಿಯೆಂಟ್‌ಳಲ್ಲಿ ಖರೀದಿಗೆ ಲಭ್ಯ ಇವೆ. ಒಟ್ಟಿನಲ್ಲಿ ಭಾರತದ ದೈತ್ಯ ಕಂಪನಿ ಮಂಹೀದ್ರಾ ಹೊಸ ಹೊಸ ವಿನ್ಯಾಸದ, ಉತ್ತಮ ಸೌಲಭ್ಯಗಳನ್ನು ಒಳಗೊಂಡ, ಕಡಿಮೆ ಬೆಲೆಯ ಕಾರುಗಳನ್ನು ಮೊದಲಿನಿಂದಲೂ ಬಿಡುಗಡೆ ಮಾಡುತ್ತಾ ಬರುತ್ತಿದೆ ಮತ್ತು ಕಾರುಗಳ ಮೇಲೆ ಆಫ್‌ಗಳನ್ನು ಘೋಷಣೆ ಮಾಡುವ ಮೂಲಕ ಗ್ರಾಹಕರನ್ನು ಬೇರೆಡೆಗೆ ಹೋಗದಂತೆ ಸೆಳೆಯುತ್ತಿದೆ.












Click it and Unblock the Notifications