ಈ 7 ಸೀಟರ್ ಕಾರಿನ ಮೇಲೆ ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ- ವಿಶೇಷತೆ & ದರಗಳ ಮಾಹಿತಿ ತಿಳಿಯಿರಿ
ಆಟೋಮೊಬೈಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಅಭಿವೃದ್ಧಿಗಳು ಆಗುತ್ತಲೇ ಇವೆ. ವಾಹನಗಳ ಮಾರಾಟದಲ್ಲಿ ಪೈಪೋಟಿ ಏರ್ಪಟ್ಟಿದ್ದು, ತಾವೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಎಲ್ಲಾ ಕಂಪನಿಗಳು ವಾಹನಗಳನ್ನು ಕೈಗೆಟಕುವ ದರದಲ್ಲಿ ಬಿಡುಗಡೆ ಮಾಡುತ್ತಲೇ ಇವೆ. ಇದೀಗ ಮಹೀದ್ರಾ ಕಂಪನಿಯು ಕೂಡ ಉತ್ತಮ ಸೌಲಭ್ಯವುಳ್ಳ ಕಾರೊಂದನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಈ ಕಾರಿನ ದರ ಹಾಗೂ ವಿಶೇಷತೆಗಳ ಬಗ್ಗೆ ಇಲ್ಲಿ ತಿಳಿಯಿರಿ.
ಟೊಯೋಟಾ ಸಂಸ್ಥೆಯ ಇನೋವಾ ಕಾರಿಗೆ ರಿಪ್ಲೇಸ್ಮೆಂಟ್ ಎನ್ನುವ ರೂಪದಲ್ಲಿ ಮಹೀಂದ್ರ ಕಂಪನಿಯು Mahindra Marazzo ಎಂಪಿವಿ ಕಾರನ್ನು ಭರ್ಜರಿ ಆಫರ್‌ನಲ್ಲಿ ಬಿಟ್ಟಿದೆ ಎಂದು ತಿಳದಿಬಂದಿದೆ. ಈ ಕಾರು ಮಾರಾಟದಲ್ಲಿ ಅಷ್ಟೇನು ಏರಿಕೆ ಕಾಣ್ಣುತ್ತಿಲ್ಲ ಎಂಬ ಕಾರಣಕ್ಕಾಗಿ ಮಹೀಂದ್ರ ಸಂಸ್ಥೆ ಇದೀಗ ಇದನ್ನು ಭರ್ಜರಿ ಆಫ್‌ರ್ ಮೂಲಕ ಮಾರಾಟ ಮಾಡುವುದಕ್ಕೆ ಮುಂದಾಗಿದೆ.

2018ರಲ್ಲಿ ಈ ಕಾರು ಮಾರುಕಟ್ಟೆಗೆ ಬಂದಿದ್ದು, 2024ರಲ್ಲಿ ಕಳೆದ 5 ತಿಂಗಳಿನಿಂದಲೂ ಮಾರಾಟದಲ್ಲಿ ಇಳಿಕೆಯಾಗುತ್ತಲೇ ಬಂದಿದೆ. 34 ಯೂನಿಟ್‌ಗಳ ಮಾರಾಟ ಮಾತ್ರ ಕಂಡುಬರುತ್ತಿದ್ದು, ಮಾರಾಟದಲ್ಲಿ ತುಂಬಾ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ Mahindra Marazzo ಕಾರನ್ನು ಸಂಸ್ಥೆ ತಯಾರು ಮಾಡಲು ನಿಲ್ಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
Mahindra Marazzo ಕಾರಿನ ಶೋ ರೂಂ ದರವು 14-17,00,000 ರೂಪಾಯಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆದರೆ ಇದೀಗ ಈ ಕಾರಿಗೆ 93,000 ರೂಪಾಯಿಗಳವರೆಗೂ ಡಿಸ್ಕೌಂಟ್ ಕೂಡ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಡೀಸೆಲ್ ಇಂಜಿನ್ ಅನ್ನು ಹೊಂದಿದ್ದು, 6 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಅನ್ನು ಇದರಲ್ಲಿ ಕಾಣಬಹುದಾಗಿದೆ.
ಈ ಕಾರನ್ನು ಮುಂದಿನ ದಿನಗಳಲ್ಲಿ ಮಹೀಂದ್ರ ಸಂಸ್ಥೆ ನಿಲ್ಲಿಸುವಂತಹ ನಿರ್ಧಾರವನ್ನು ಮಾಡಿದ್ದು, ಅದಕ್ಕಿಂತಲೂ ಮುಂಚೆ ನೀವು ಈಗಾಗಲೇ ನೀಡಲಾಗಿರುವಂತಹ ಆಫರ್ ಬೆಲೆಯಲ್ಲಿ ಇದನ್ನು ಖರೀದಿಸುವ ಮೂಲಕ ಏಳು ಸೀಟರ್ ಕಾರ್ (7 Seater Car) ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವಂತಹ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಮಹೀಂದ್ರ ಸಂಸ್ಥೆ 5 ಡೋರ್ ಥಾರ್ ಕಾರ್ ಅನ್ನು ಬಿಡುಗಡೆ ಮಾಡುವತ್ತ ತನ್ನ ಸಂಪೂರ್ಣ ಗಮನಹರಿಸಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications