Maha Kumbh Mela 2025: ಮಹಾ ಕುಂಭಮೇಳಕ್ಕೆ ತೆರಳುವ ಭಕ್ತರು ಈ ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಡಿ
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳ ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಜನವರಿ 13, 2025 ರಂದು ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರಂದು ಮುಕ್ತಾಯಗೊಳ್ಳುತ್ತದೆ.
ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಯಿಂದ ಬರುವ ಕೋಟ್ಯಂತರ ಭಕ್ತರು ಭಾಗಿಯಾಗಲಿದ್ದಾರೆ. ಆದರೆ ಮಹಾ ಕುಂಭಮೇಳಕ್ಕೆ ತೆರಳುವ ಭಕ್ತರು ಕೆಳಗಿನ ಪ್ರಮುಖ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಮಹಾ ಕುಂಭಮೇಳದಲ್ಲಿ ಕೆಲವು ವಿಶೇಷ ದಿನಗಳಲ್ಲಿ ಕುಂಭ ಶಾಹಿ ಸ್ನಾನ ನಡೆಯಲಿದ್ದು, ಈ ಬಗ್ಗೆ ವಿವರ ಈ ಕೆಳಗಿನಂತಿದೆ.

ಮಹಾ ಕುಂಭ ಮೇಳ 2025: ಪ್ರಮುಖ ದಿನಾಂಕಗಳ ವಿವರ
ಜನವರಿ 13 2025ರಂದು ಮಹಾ ಕುಂಭಮೇಳ ಪ್ರಾರಂಭವಾಗುತ್ತದೆ.
ಫೆಬ್ರವರಿ 26, 2025ರಂದು ಮಹಾ ಕುಂಭಮೇಳ ಕೊನೆಗೊಳ್ಳುತ್ತದೆ.
ಜನವರಿ 13, 2025ರಂದು ಪೌಶ್ ಪೂರ್ಣಿಮಾ ಅಂದರೆ ಹೊಸ ವರ್ಷದ ಮೊದಲ ಹುಣ್ಣಿಮೆಯ ದಿನವಾಗಿರುತ್ತದೆ.
ಪ್ರಮುಖ ಕುಂಭ ಸ್ನಾನದ ದಿನಾಂಕಗಳು
ಜನವರಿ 14, 2025ರಂದು ಮಕರ ಸಂಕ್ರಾಂತಿಯ ದಿನ ಮೊದಲ ಶಾಹಿ ಸ್ನಾನ ನಡೆಯುತ್ತದೆ.
ಜನವರಿ 29, 2025ರಂದು ಮೌನಿ ಅಮವಾಸ್ಯೆಯ ದಿನ ಎರಡನೇ ಶಾಹಿ ಸ್ನಾನ ನಡೆಯುತ್ತದೆ.
ಫೆಬ್ರವರಿ 3, 2025ರಂದು ವಸಂತ ಪಂಚಮಿಯ ದಿನ ಮೂರನೇ ಶಾಹಿ ಸ್ನಾನ ನಡೆಯುತ್ತದೆ.
ಫೆಬ್ರವರಿ 12, 2025ರಂದು ಮಾಘಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನ.
ಫೆಬ್ರವರಿ 26, 2025ರಂದು ಮಹಾ ಶಿವರಾತ್ರಿ ಹಾಗೂ ಮಹಾ ಕುಂಭಮೇಳಕ್ಕೆ ತೆರೆ

ಶಾಹಿ ಸ್ನಾನ ಎಂದರೇನು?
ಕುಂಭ ಮೇಳ ಅಥವಾ ಮಹಾ ಕುಂಭ ಮೇಳದಲ್ಲಿ ಮಾಡುವ ಶಾಹಿ ಸ್ನಾನವನ್ನು ರಾಜಯೋಗಿ ಸ್ನಾನ ಎಂದು ಸಹ ಕರೆಯಲಾಗುತ್ತದೆ. ಕುಂಭಮೇಳದ ಆರಂಭದಲ್ಲಿ ನಿಗದಿತ ದಿನಗಳಲ್ಲಿ ಸಂತರು ಮತ್ತು ಅವರ ಶಿಷ್ಯರು ಅಥವಾ ಅಖಾಡಗಳ ತಪಸ್ವಿಗಳು ಮಾಡುವ ಸ್ನಾನವನ್ನು ರಾಜಯೋಗಿ ಸ್ನಾನ ಅಥವಾ ಶಾಹಿ ಸ್ನಾನ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಈ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.












Click it and Unblock the Notifications