Maha Kumbh Mela 2025: ದೇಶದಲ್ಲಿ ಕುಂಭ ಮೇಳಗಳು ನಡೆಯುವ ಪವಿತ್ರ ಕ್ಷೇತ್ರಗಳ ವಿವರ

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ಮಹಾ ಉತ್ಸವದಲ್ಲಿ ಹಿಂದೂಗಳು ಮಾತ್ರವಲ್ಲದೇ ಹಿಂದುಯೇತರರ, ಆಸ್ತಿಕರು, ನಾಸ್ತಿಕರೂ ಸೇರಿಂದಂತೆ ಕೋಟ್ಯಂತರ ಜನ ಭಾಗಿಯಾಗುತ್ತಾರೆ.

ಬರೋಬ್ಬರಿ 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ ಸಂಪೂರ್ಣ ಸಜ್ಜಾಗಿದೆ. ಈ ಸಮಯದಲ್ಲಿ ಕುಂಭಮೇಳ ಅಥವಾ ಮಹಾ ಕುಂಭಮೇಳ ಎಂದರೇನು? ಇದು ಭಾರತದ ಎಲ್ಲೆಲ್ಲಿ ಈ ಕುಂಭ ಮೇಳ ನಡೆಯುತ್ತದೆ ಎಂದು ತಿಳಿದುಕೊಳ್ಳುವ ಆಸಕ್ತಿ ಅನೇಕರಿಗಿರುತ್ತದೆ. ಈ ಬಗ್ಗೆ ಸಂಕ್ಷಿಪ್ತವಾದ ವಿವರ ಇಲ್ಲಿದೆ.

Maha Kumbh Mela 2025 Kumbh Mela Locations Across India

700 ವರ್ಷಗಳ ಇತಿಹಾಸ ಇರುವ ಈ ಕುಂಭ ಮೇಳವನ್ನು ವರ್ಷಗಳಿಗೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಸರಸ್ವತಿ, ಗಂಗಾ ಹಾಗೂ ಯಮುನಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕುಂಭಮೇಳವನ್ನು ನಡೆಸಲಾಗುತ್ತದೆ. ಇನ್ನು ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳ ನಡೆಸಲಾಗುತ್ತದೆ. ಹಾಗೂ ಸಂಪೂರ್ಣ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವನ್ನು ಮಹಾ ಕುಂಭ ಮೇಳ ಎಂದು ಕರೆಯಲಾಗುತ್ತದೆ.

ಎಲ್ಲೆಲ್ಲಿ ಕುಂಭ ಮೇಳ ನಡೆಯುತ್ತದೆ?

ಉತ್ತರಾಖಂಡದ ಗಂಗಾ ನದಿಯ ದಡದಲ್ಲಿರುವ ಹರಿದ್ವಾರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವನ್ನು ನಡೆಸಲಾಗುತ್ತದೆ. ಅಲ್ಲದೇ ಕೆಲವೊಂದು ಬಾರಿ ಇದೇ ಪ್ರದೇಶದಲ್ಲಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳವನ್ನು ಸಹ ಆಯೋಜಿಲಾಗುತ್ತದೆ. ಮಹಾರಾಷ್ಟ್ರದ ಗೋದಾವರಿ ನದಿಯ ದಡದಲ್ಲಿರುವ ನಾಸಿಕ್‌ನಲ್ಲಿ ಹಾಗೂ ಮಧ್ಯಪ್ರದೇಶದ ಶಿಪ್ರಾ ನದಿಯ ದಡದಲ್ಲಿರುವ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯುತ್ತವೆ.

Maha Kumbh Mela 2025 Kumbh Mela Locations Across India

ಕರ್ನಾಟಕದಲ್ಲಿ ಕುಂಭ ಮೇಳ ಎಲ್ಲೆಲ್ಲಿ ನಡೆಯುತ್ತದೆ?

ಉತ್ತರ ಭಾರತದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲಿಯೂ ಕುಂಭ ಮೇಳಗಳು ನಡೆಯುತ್ತವೆ. ಕೊಪ್ಪಳದ ಗವಿಸಿದ್ದೇಶ್ವರ ಬೃಹತ್ ರಥೋತ್ಸವನ್ನು ದಕ್ಷಿಣ ಕುಂಭ ಮೇಳ ಎಂದು ನಡೆಸಲಾಗುತ್ತದೆ. ಕೆಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿಯ ಸಮೀಪದ ತ್ರಿವೇಣಿ ಸಂಗಮದಲ್ಲಿ ಮಲೈ ಮಹದೇಶ್ವರ ಕುಂಭ ಮೇಳ ನಡೆಯುತ್ತದೆ.

ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯಲಿದ್ದು, ಈ ಬಾರಿ 2025ರ ಫೆಬ್ರವರಿ 10ರಿಂದ ಮೂರು ದಿನ ಆಯೋಜಿಸಲಾಗಿದೆ. ಫೆಬ್ರವರಿ 10,11 ಮತ್ತು 12 ರಂದು ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಮಹೋತ್ಸವ ನಡೆಯಲಿದೆ. ಹೀಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಸಹ ಕುಂಭ ಮೇಳ ನಡೆಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+