ಎಬಿಪಿ-ನಿಲ್‌ಸನ್ ಸಮೀಕ್ಷೆ: ಗೆಲುವಿಗೆ ಹತ್ತಿರ ಬಂದು ಎಡವಲಿದೆ ಬಿಜೆಪಿ
ನವದೆಹಲಿ, ಮೇ 19: ಎಬಿಪಿ-ಎಸಿ ನಿಲ್‌ಸನ್ ಜಂಟಿಯಾಗಿ ನಡೆಸಿರುವ ಲೋಕಸಭೆ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆ ಪ್ರಕಾರ ಎನ್‌ಡಿಎಯು ಬಹುಮತದ ಹತ್ತಿರ ಬಂದು ಕುಸಿಯಲಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಎಬಿಪಿ ಮತ್ತು ಎಸಿ ನಿಲ್‌ಸನ್ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎಗೆ 267 ಸ್ಥಾನಗಳು ಧಕ್ಕಲಿವೆ. ಸರ್ಕಾರ ರಚಿಸಲು 272 ಸ್ಥಾನಗಳ ಅವಶ್ಯಕತೆ ಇದೆ, ಆದರೆ ಎನ್‌ಡಿಎಯು ಐದು ಸ್ಥಾನಗಳ ಮೂಲಕ ಬಹುಮತ ಮುಟ್ಟುವ ಅವಕಾಶ ಕಳೆದುಕೊಳ್ಳಲಿದೆ ಎನ್ನುತ್ತಿದೆ ಸಮೀಕ್ಷೆ.
ಎಬಿಪಿ ಮತ್ತು ಎಸಿ ನಿಲ್‌ಸನ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ನೇತೃತ್ವದ ಯುಪಿಎಯು 127 ಸ್ಥಾನಗಳಲ್ಲಿ ಗೆಲುವ ಸಾಧಿಸುವ ನಿರೀಕ್ಷೆ ಇದ್ದರೆ, ಇತರೆ ಪಕ್ಷಗಳು 148 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆಯಂತೆ.

ಸಮೀಕ್ಷೆಯಲ್ಲಿನ ಇತರೆ ಪಕ್ಷಗಳಲ್ಲಿ ಬಿಜೆಪಿ ಪರ ಇರುವ ಪಕ್ಷಗಳೂ ಇರುವ ಕಾರಣ ಎನ್‌ಡಿಎಯೇ ಸರ್ಕಾರ ರಚಿಸುವ ಹೆಚ್ಚಿನ ಅವಕಾಶಗಳಿವೆ. ಆದರೆ ಬಹುಮತ ಗಳಿಸುವ ಹಾದಿಯಲ್ಲಿ ಎಡವುವುದು ಪಕ್ಷವು ಶಕ್ತಿ ಕಳೆದುಕೊಂಡಿದೆ ಎಂಬ ಭಾವ ಮೂಡಿಸಲಿದೆ.
ಕೆಲವು ಸಮೀಕ್ಷೆಗಳಷ್ಟೆ ಎನ್‌ಡಿಎಗೆ ಬಹುಮತ ಸಿಗುವುದಿಲ್ಲವೆಂದು ಅಂಕಿ-ಅಂಶ ಪ್ರಕಟಿಸಿವೆ. ಎಬಿಪಿ, ನ್ಯೂಸ್-ಎಕ್ಸ್, ನೇತಾ ಸಮೀಕ್ಷೆಗಳಲ್ಲಿ ಮಾತ್ರವೇ ಎನ್‌ಡಿಎಗೆ ಬಹುಮತ ದೊರೆಯುವುದಿಲ್ಲ ಎನ್ನಲಾಗಿದೆ, ಆದರೆ ಇನ್ನುಳಿದ ಬಹುತೇಕ ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಬಹುಮತ ದೊರೆಯುತ್ತಿದೆ.












Click it and Unblock the Notifications