ಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ

Recommended Video

      Lok Sabha Elections 2019 : ಹಾಸನದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಒಟ್ಟಾರೆ ಆಸ್ತಿ ಎಷ್ಟು? | Oneindia Kannada

      ಹಾಸನ, ಮಾರ್ಚ್ 22: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಸ್ವಕ್ಷೇತ್ರ ಹಾಸನದಿಂದ ಈ ಬಾರಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುತ್ತಿದ್ದಾರೆ.

      ಸಚಿವ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಶುಕ್ರವಾರದಂದು ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್ ಅವರ ಉಮೇದುವಾರಿಕೆಗೆ ಸೂಚಕರಾಗಿ ಸಹಿ ಹಾಕಿದರು. ಮೊಮ್ಮಗನನ್ನು ಹರಸಲು ಎಚ್ ಡಿ ದೇವೇಗೌಡರು ಉಪಸ್ಥಿತರಿದ್ದರು.

      ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

      ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅರಕಲಗೂಡು ಮಂಜು ವಿರುದ್ಧ ಪ್ರಜ್ವಲ್ ರೇವಣ್ಣ ಅವರು ಸೆಣಸಾಡಲಿದ್ದಾರೆ. ನಾಮಪತ್ರ ಸಲ್ಲಿಸಿ ಜೊತೆಗೆ ಆಸ್ತಿ ವಿವರವುಳ್ಳ ಅಫಿಡವಿಟ್ ಸಲ್ಲಿಸಿದ ಅಂಕಿ ಅಂಶದತೆ 4,89,15,209 ರು ಸ್ಥಿರಾಸ್ತಿ ಹಾಗೂ 1,64,86,632 ರು ಚರಾಸ್ತಿ ಹೊಂದಿದ್ದಾರೆ.

      ತಂದೆ ಎಚ್ ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ, ಅತ್ತೆ ಅನಸೂಯ ಮಂಜುನಾಥ್, ಅಣ್ಣ ಸೂರಜ್, ಅಜ್ಜಿ ಚನ್ನಮ್ಮ ಅವರ ಬಳಿ ಸಾಲ ಮಾಡಿದ್ದಾರೆ. ಒಟ್ಟಾರೆ 3.72 ಕೋಟಿ ರು ಸಾಲ ಹೊಂದಿದ್ದಾರೆ. ಪ್ರಜ್ವಲ್ ಬಳಿ 15.58 ಲಕ್ಷ ರು ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ ಮೊತ್ತ 11 ಲಕ್ಷ ರು ಅಧಿಕವಾಗಿದೆ.

      ಪ್ರಜ್ವಲ್ ರೇವಣ್ಣ ಸ್ವವಿವರ

      ಪ್ರಜ್ವಲ್ ರೇವಣ್ಣ ಸ್ವವಿವರ

      ಹೆಸರು: ಪ್ರಜ್ವಲ್ ಆರ್
      ವಯಸ್ಸು: 28
      ವಿಳಾಸ: ಪಡುವಲಹಿಪ್ಪೆ ಗ್ರಾಮ, ಕಸಬಾ ಹೋಬಳಿ, ಹೊಳೆನರಸೀಪುರ ತಾಲೂಕು, ಹಾಸನ
      ತಂದೆ : ಎಚ್ ಡಿ ರೇವಣ್ಣ, ತಾಯಿ: ಭವಾನಿ ರೇವಣ್ಣ
      * ಹೊಳೆ ನರಸೀಪುರದ 197ನೇ ವಾರ್ಡ್ ಮತಗಟ್ಟೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
      * ಫೇಸ್ ಬುಕ್, ಟ್ವಿಟ್ಟರ್ ಅಧಿಕೃತ ಖಾತೆ ಹೊಂದಿಲ್ಲ, ಇನ್ಸ್ಟಾಗ್ರಾಮ್ ಖಾತೆ ಹೊಂದಿರುವುದಾಗಿ ಘೋಷಣೆ.
      * 2014ರಿಂದ 2018ರ ಆರ್ಥಿಕ ವರ್ಷದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ
      * ಯಾವುದೇ ಕ್ರಿಮಿನಲ್ ಕೇಸ್ ಹೊಂದಿಲ್ಲ.

      ಸ್ಥಿರಾಸ್ತಿ ವಿವರ

      ಸ್ಥಿರಾಸ್ತಿ ವಿವರ

      * ಒಟ್ಟಾರೆ 15, 58, 578ರು ನಗದು ಹೊಂದಿದ್ದಾರೆ.
      * ಕರ್ನಾಟಕ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಕೆಎಸ್ ಸಿಎ ಬ್ಯಾಂಕ್, ವಿಜಯ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದಾರೆ.
      * ಚನ್ನಾಂಬಿಕಾ ಕನ್ವೆಂಷನ್ ಹಾಲ್, ಸಿಎನ್ ಡಿ ಎಂಟರ್ ಪ್ರೈಸರ್ಸ್ ಪ್ರೈ ಲಿ, ಸರ್ದಾರ್ ಸರೋವರ್ ಬಾಂಡ್ ನಲ್ಲಿ 91.10 ಲಕ್ಷ ರು ಹೂಡಿಕೆ ಮಾಡಿದ್ದಾರೆ.
      * ಎನ್ಎಸ್ಎಸ್, ವಿಮೆ ಹೊಂದಿಲ್ಲ.
      * ನೆಲಮಂಗಲ ತಾಲೂಕಿನ ಕಸಬಾ ಹೋಬಳಿ ಬಾವಿಕೆರೆ, ಹೊಳೆ ನರಸೀಪುರ ಮಾರಗೊಂಡನಹಳ್ಳಿಯಲ್ಲಿ, ದುದ್ದ ಹೋಬಳಿ ಗೌರಿಪುರದಲ್ಲಿ, ಪುಡುವಲಹಿಪ್ಪೆ ಗ್ರಾಮದ ಕೃಷಿ ಭೂಮಿಯಲ್ಲಿ 91.10 ಲಕ್ಷ ರು ಹೂಡಿಕೆ.
      ಸ್ಥಿರಾಸ್ತಿ : 4,89,15,029 ರು

      18 ಹಸುಗಳನ್ನು ಸಾಕುತ್ತಿದ್ದಾರೆ.

      18 ಹಸುಗಳನ್ನು ಸಾಕುತ್ತಿದ್ದಾರೆ.

      * 5 ಲಕ್ಷ ರು ಮೌಲ್ಯದ ಫರ್ಗುಸನ್ ಸಂಸ್ಥೆಯ ಒಂದು ಟ್ರ್ಯಾಕ್ಟರ್
      * 1100 ಗ್ರಾಂಚಿನ್ನ 30 ಲಕ್ಷ ರು ಅಂದಾಜು ಮೌಲ್ಯ
      * 18 ಕೆಜಿ ಬೆಳ್ಳಿ ಆಭರಣ, 5 ಕೆಜಿ ಬೆಳ್ಳಿ ಕ್ರಮವಾಗಿ 5.3 ಲಕ್ಷ ರು ಹಾಗೂ 2 ಲಕ್ಷ ರು ಒಟ್ಟಾರೆ, ಚಿನ್ನಾಭರಣಗಳ ಮೌಲ್ಯ : 37,31,350 ರು
      * 18 ಹಸುಗಳ ಮೌಲ್ಯ 4,15,000ರು, 2 ಎತ್ತುಗಳ ಮೌಲ್ಯ 30,000
      ಒಟ್ಟಾರೆ, 1,64,86,632.84 ರು ಗಳು

      ವೈಯಕ್ತಿಕ ಸಾಲ ವಿವರ

      ವೈಯಕ್ತಿಕ ಸಾಲ ವಿವರ

      * ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಹೊಂದಿರುವ ಪ್ರಜ್ವಲ್ ಅವರು ಒಟ್ಟು 3.72 ಕೋಟಿ ರು ಸಾಲ ಹೊಂದಿದ್ದಾರೆ.
      ಎಚ್ ಡಿ ರೇವಣ್ಣ ಅವರಿಂದ 1.26 ಕೋಟಿ ರು ಸಾಲ, ತಾಯಿ ಭವಾನಿ ರೇವಣ್ಣರಿಂದ 43.75 ಲಕ್ಷ ರು, ಅತ್ತೆ ಅನಸೂಯ ಮಂಜುನಾಥ್ ರಿಂದ 22 ಲಕ್ಷರು, ಅಣ್ಣ ಸೂರಜ್ ರಿಂದ 37.20 ಲಕ್ಷ, ಅಜ್ಜಿ ಚನ್ನಮ್ಮರಿಂದ 23 ಲಕ್ಷ ರು ಸಾಲ ಹೊಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+