ಇದೇ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಯುವಪೀಳಿಗೆಯ ಅಚ್ಚುಮೆಚ್ಚಿನ ಕಾರುಗಳಿವು
ಆಟೋಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಎಲ್ಲಾ ಕಂಪನಿಗಳು ತಾವೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಅತ್ಯುತ್ತಮ ಸೌಲಭ್ಯವುಳ್ಳ ಹೊಸ ವಿನ್ಯಾಸದ ವಾಹನಗಳನ್ನು ಕಡಿಮೆ ದರಗಳಲ್ಲಿ ಬಿಡುಗಡೆ ಮಾಡುತ್ತಲೇ ಇವೆ. ಹಾಗೆಯೇ ಇದೇ ತಿಂಗಳಿನಲ್ಲಿ ಅಂದರೆ, ಆಗಸ್ಟ್‌ನಲ್ಲಿ ನೂತನ ವಿನ್ಯಾಸದ ಟಾಪ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಹಾಗಾದರೆ ದರ, ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.
ಬಿಡುಗಡೆಗೊಳ್ಳುತ್ತಿರುವ ನೂತನ ವಿನ್ಯಾಸದ ಕಾರುಗಳಲ್ಲಿ ಹೆಚ್ಚಿನ ಕಾರು ಮಾದರಿಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅಷ್ಟೇ ಅಲ್ಲದೆ, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ರೂಪದಲ್ಲೂ ಬಿಡುಗಡೆ ಆಗುತ್ತಿವೆ. ಹಾಗಾದರೆ ಮಾಹಿತಿ ಇಲ್ಲಿದೆ ಗಮನಿಸಿ.

Tata Curvv EV: 2024 ಅಗಸ್ಟ್‌ನಲ್ಲಿ ಅಂದರೆ ಇದೇ ತಿಂಗಳಿನಲ್ಲಿ ಬಿಡುಗಡೆ ಆಗಲಿರುವ ನೂತನ ಕಾರುಗಳಲ್ಲಿ ಟಾಟಾ ಕರ್ವ್ ಇವಿ ಗ್ರಾಹಕರಲ್ಲಿ ಭಾರೀ ನೀರಿಕ್ಷೆಯನ್ನುಟ್ಟಾಕಿದೆ. ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿರುವ ಹೊಸ ಕರ್ವ್ ಕಾರು ಕೂಪೆ ಎಸ್ ಯುವಿ ವೈಶಿಷ್ಟ್ಯತೆ ಹೊಂದಿದ್ದು, ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅಷ್ಟೇ ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲೂ ಲಗ್ಗೆ ಇಡುತ್ತಿವೆ.
ಈ ಪೈಕಿ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾತ್ರ ಇದೀಗ ಬಿಡುಗಡೆಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು 2025ರ ಮಧ್ಯಂತರದಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಹೊಸ ಇವಿ ಆವೃತ್ತಿಯು ಪ್ರತಿಚಾರ್ಜ್‌ಹೆ 450ರಿಂದ 500 ಕಿಲೋ ಮೀಟರ್ ಮೈಲೇಜ್ ನೀಡಲಿದ್ದು, ಇದು ಟಾಟಾ ಕಂಪನಿಯ ಎರಡನೇ ತಲೆಮಾರಿನ ಇವಿ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ತಯಾರಾಗುತ್ತಿದೆ.
Mahindra Thar Roxx : ಅದರಲ್ಲೂ ಯುವಪೀಳಿಗೆಯ ಅಚ್ಚುಮೆಚ್ಚಿನ ಕಾರು ಮಹೀಂದ್ರಾ ಕಂಪನಿ ಥಾರ್ ಆಗಿದೆ. ಇದಕ್ಕೆ ಮಲಸೋಲದವರೇ ಇಲ್ಲ. ಇನ್ನು ಇದೀಗ ಮಹೀಂದ್ರಾ ಕಂಪನಿ ಥಾರ್ ಕಾರಿನಲ್ಲಿ ನೂತನವಾಗಿ ರೊಕ್ಸ್ ಆವೃತ್ತಿಯನ್ನು ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಗೊಳಿಸುತ್ತಿದೆ. ಇದು ವಿಶೇಷವಾಗಿ 5 ಡೋರ್ ಸೌಲಭ್ಯ ಸೇರಿ ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಗ್ರಾಹಕರು ಖರೀದಿಗೆ ಮುಗಿಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಗಸ್ಟ್ 15ರಂದು ಇದು ಅಧಿಕೃತವಾಗಿ ಬಿಡುಗಡೆಯಾಗಲಿದೆ ಪ್ರಸ್ತುತ ಮಾರುಕಟ್ಟೆಯಲ್ಲಿ ಥಾರ್ ಕಾರು ಮಾದರಿಯು 3 ಡೋರ್ ಸೌಲಭ್ಯದೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಇದು ಆಫ್ ರೋಡ್ ಜೊತೆಗೆ ಲೈಫ್ ಸ್ಟೈಲ್ ಮಾದರಿಯಾಗಿ ಗುರುತಿಸಿಕೊಂಡಿದೆ. ಆದರೆ ಥಾರ್ ರೊಕ್ಸ್ ಆವೃತ್ತಿಯಲ್ಲಿ ಹಿಂಬದಿಯ ಸವಾರರಿಗೆ ಅನುಕೂಲಕರವಾಗುವಂತೆ 5 ಡೋರ್ ಸೌಲಭ್ಯವನ್ನು ನೀಡಲಾಗುತ್ತಿದೆ.
Hyundai Alcazar facelift : ಹ್ಯುಂಡೈ ಕಂಪನಿಯು ಕ್ರೆಟಾ ಫೇಸ್ ಲಿಫ್ಟ್‌ನಲ್ಲಿ ಪರಿಚಯಿಸಲಾದ ಹೊಸ ಬದಲಾವಣೆಗಳನ್ನು ಇದೀಗ ಅಲ್ಕಾಜರ್ ಫೇಸ್ ಲಿಫ್ಟ್ ಪರಿಚಯಿಸುವುದಕ್ಕೆ ಮುಂದಾಗಿದೆ. ಅಲ್ಕಾಜರ್ ಫೇಸ್ ಲಿಫ್ಟ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒಳಗೊಂಡಿರಲಿದ್ದು, ಇದು 7 ಸೀಟರ್ ಲವರ್ ಗ್ರಾಹಕರಿಗೆ ಉತ್ತಮ ಆಯ್ಕೆ ಆಗಿರಲಿದೆ.
MG Cloud EV : ಭಾರತದಲ್ಲಿ ಸದ್ಯ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಕಾರುಗಳ ಮೂಲಕ ಎಲೆಕ್ಟ್ರಿಕ್ ಕಾರುಗಳ ವಿಭಾಗಗಳ ಬೇಡಿಕೆ ಅರಿತಿರುವ ಎಂಜಿ ಮೋಟಾರ್ ಕಂಪನಿ ಇದೀಗ ಕ್ಲೌಡ್ ಇವಿ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದು ವಿನೂತನ ಸೌಲಭ್ಯಗಳೊಂದಿಗೆ ಮಾರಾಟ ಆಗುತ್ತಿದ್ದು, ಹೊಸ ಕಾರು ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಕಾರುಗಳ ನಡುವಿನ ಸ್ಥಾನ ಪಡೆದುಕೊಳ್ಳಲಿದೆ.
ಇದು ಅತ್ಯಾಧುನಿಕ ವಿನ್ಯಾಸದೊಂದಿಗೆ ಮಾರುಕಟ್ಟಗೆ ಬರಲಿದ್ದು, 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್‌ಗೆ 460 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಅಷ್ಟೇ ಅಲ್ಲದೆ, ಈ ನೂತನ ಕಾರಿನಲ್ಲಿ ಹಲವು ಸುರಕ್ಷಾ ಸೌಲಭ್ಯಗಳಿರಲಿದ್ದು, ಇದರ ಎಕ್ಸ್ ಶೋರೂಂ ದರ 16,00,000-20,00,000 ಇರಲಿದೆ.












Click it and Unblock the Notifications