ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾಗೆ ಸಿಬಿಐನಿಂದ ಕ್ಲೀನ್ ಚಿಟ್

|
Google Oneindia Kannada News

ಟೆಲಿಕಾಂ, ಏವಿಯೇಷನ್, ಪವರ್ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ, ಪ್ರಮುಖ ಕಾರ್ಪೊರೇಟ್ ಲಾಬಿಗಾರ್ತಿ ಎನಿಸಿಕೊಂಡಿದ್ದ ನೀರಾಗೆ ಇಂದು ಸಿಬಿಐನಿಂದ ಕ್ಲೀನ್ ಚಿಟ್ ಸಿಕ್ಕಿದೆ. 2ಜಿ ಸೇರಿದಂತೆ ಹಲವು ಪ್ರಕರಣಕ್ಕೆ ಕಾರಣ ಎನ್ನಲಾದ ಆಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ಜೊತೆಗಿನ ಸಂಭಾಷಣೆಗಳನ್ನು ಧ್ವನಿಮುದ್ರಿಸಿ ಹಾಗೂ ಸೋರಿಕೆ ಮಾಡಿದ ಆರೋಪದಿಂದ ನೀರಾ ಇದೀಗ ಮುಕ್ತರಾಗಿದ್ದಾರೆ. ಮೇಲೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

ಒಂದು ದಶಕದ ಹಿಂದೆ ಆದಾಯ ತೆರಿಗೆ ಇಲಾಖೆಯು ಟೇಪ್ ಮಾಡಿದ 8,000ಕ್ಕೂ ಅಧಿಕ ಫೋನ್ ಸಂಭಾಷಣೆಗಳ ವಿಷಯಗಳನ್ನು ತನಿಖೆ ಮಾಡಲು ಸಿಬಿಐ 14 ಪ್ರಾಥಮಿಕ ವಿಚಾರಣೆಗಳನ್ನು (ಪಿಇ) ಪ್ರಾರಂಭಿಸಿತ್ತು. ಈಗ, ಯಾವುದೇ ಸಾಕ್ಷ್ಯ ಸಿಗದ ಕಾರಣ ಎಲ್ಲಾ 14 ಪಿಇಗಳನ್ನು ಮುಚ್ಚಲಾಗಿದೆ ಎಂದು ಸಿಬಿಐ ಹೇಳಿದೆ.

ಬಹುಕೋಟಿ ಯೆಸ್ ಬ್ಯಾಂಕ್ ಹಗರಣದಲ್ಲಿ ''2G'' ನೀರಾ ಹೆಸರು, ಸಮನ್ಸ್ಬಹುಕೋಟಿ ಯೆಸ್ ಬ್ಯಾಂಕ್ ಹಗರಣದಲ್ಲಿ ''2G'' ನೀರಾ ಹೆಸರು, ಸಮನ್ಸ್

2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಮತ್ತು ತನ್ನ ಗ್ರಾಹಕರ ನಡುವಿನ ಸಂಭಾಷಣೆಯ ಟೇಪ್ ಸೋರಿಕೆಯಾದ ನಂತರ ವಿವಾದಕ್ಕೆ ಸಿಲುಕಿದ್ದರು. ರಾಡಿಯಾ ಟೇಪ್ಸ್ ನಿಂದ ಆಂತರಿಕ ವಿಷಯಗಳು ಹೊರ ಬರಬಹುದು ಅದು ಸಾರ್ವಜನಿಕವಾಗಿ ಬಿತ್ತರಿಸುವುದು ತರವಲ್ಲ ಎಂದು ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಪ್ರಕರಣದ ವಿಚಾರಣೆ ಇನ್ನೂ ಜಸ್ಟೀಸ್ ಡಿವೈ ಚಂದ್ರಚೂಡ್ ಅವರಿರುವ ನ್ಯಾಯಪೀಠದ ಮುಂದಿದೆ. ನೀರಾ ಹಿನ್ನೆಲೆ, ಪ್ರಕರಣದ ಬಗ್ಗೆ ಇನ್ನಷ್ಟು ವಿವರ ಮುಂದಿದೆ.

ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ

ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ

ಪತ್ರಕರ್ತರು, ಪ್ರಮುಖ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಮುಖ್ಯಸ್ಥರ ಜೊತೆ ನೀರಾ ನಡೆಸಿದ ಸಂಭಾಷಣೆ ಭಾರಿ ಸಂಚಲನ ಮೂಡಿಸಿತ್ತು. ರಾಡಿಯಾ ಟೇಪ್ಸ್ ನಿಂದ ಆಂತರಿಕ ವಿಷಯಗಳು ಹೊರ ಬರಬಹುದು ಅದು ಸಾರ್ವಜನಿಕವಾಗಿ ಬಿತ್ತರಿಸುವುದು ತರವಲ್ಲ ಎಂದು ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣ ವಿಚಾರಣೆ ವೇಳೆ ವಕೀಲರಾದ ಸಿದ್ಧಾರ್ಥ್ ಲೂತ್ರಾ, ಎಎಸ್‌ಜಿ ಐಶ್ವರ್ಯ ಭಾಟಿ ಮತ್ತು ಪ್ರಶಾಂತ್ ಭೂಷಣ್ ಇದ್ದರು. ಎಎಸ್‌ಜಿ ಭಾಟಿ ಅವರು ಖಾಸಗಿತನದ ಹಕ್ಕು ಬಂದ ನಂತರ ಏನೂ ಉಳಿದಿಲ್ಲ,ಆದರೆ ಈ ಹಿಂದೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಲು ಆದೇಶವಿದೆ ಎಂದು ಹೇಳಿದರು. ಈ ನಡುವೆ ಅರ್ಜಿದಾರ ಪರ ವಕೀಲರಾದ ಪ್ರಶಾಂತ್ ಭೂಷಣ್, ಅವರು ಇತರ ಪ್ರಕರಣಗಳಲ್ಲಿ ನಿರತರಾಗಿದ್ದಾರೆ ಮತ್ತು ಇದನ್ನು ವಾದಿಸಲು ಬಯಸುತ್ತಾರೆ ಎಂದು ಪೀಠಕ್ಕೆ ತಿಳಿಸಿದರು, ಈ ಪ್ರಕರಣವನ್ನು ಪೀಠವು ಅಂಗೀಕರಿಸಲು ಕಾರಣವಾಯಿತು. ಜಸ್ಟೀಸ್ ಡಿವೈ ಚಂದ್ರಚೂಡ್ ಅವರಿರುವ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಸಿಬಿಐ ಪ್ರಾಥಮಿಕ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಟಾಟಾ ಪ್ರಕರಣದಲ್ಲೂ ನೀರಾಗೆ ಖುಲಾಸೆಯಾಗುವ ಸಾಧ್ಯತೆಯಿದೆ.

ನೀರಾ ಹಿನ್ನೆಲೆ

ನೀರಾ ಹಿನ್ನೆಲೆ

ನೀರಾ ಹಿನ್ನೆಲೆ: ಸಿಂಗಪುರ ಏರ್ ಲೈನ್ ಅನ್ನು ಭಾರತಕ್ಕೆ ತರಲು ಸಹಾರಾ ಏರ್ ಲೈನ್ಸ್ ಯತ್ನಿಸುತ್ತಿದ್ದ ಕಾಲದಲ್ಲಿ ಬರೀ ಕನ್ಸಲ್ಟೆಂಟ್ ಆಗಿದ್ದ ಈಕೆ ಲಾಬಿಕೋರಳಾಗಿ ಬೆಳೆದು ನಂತರ ನೇರ ಅಂದಿನ ನಾಗರಿಕ ವಿಮಾನಯಾನ ಸಚಿವರ ಜೊತೆ ಸಂಪರ್ಕ ಬೆಳೆಸಿದರು. ದಿವಂಗತ ಅನಂತ್ ಕುಮಾರ್ ಹಾಗೂ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಪರಿಚಯವಾದ ಬಳಿಕ ನೀರಾ ಹಿಂತಿರುಗಿ ನೋಡಲಿಲ್ಲ.

2000 ಇಸವಿಯಲ್ಲಿ ಇಡೀ ವಿಮಾನಯಾನ ಉದ್ಯಮವೇ ಆಕೆಯತ್ತ ಬೆರಗು ನೋಟದಿಂದ ನೋಡುವಂತಾಯಿತು. ಕೇವಲ 1 ಲಕ್ಷ ಬಂಡವಾಳದೊಂದಿಗೆ ಖಾಸಗಿ ಏರ್ ಲೈನ್ ಆರಂಭಿಸುವುದಾಗಿ ಘೋಷಿಸಿದ ನೀರಾ, NOC ಪಡೆದು ಕ್ರೌನ್ ಎಕ್ಸ್ ಪ್ರೆಸ್ ಎಂಬ ಹೆಸರಿನಲ್ಲಿ ದೇಶಿ ಖಾಸಗಿ ವಿಮಾನಯಾನ ಆರಂಭಿಸುವ ಕನಸು ಕಂಡಿದ್ದರು. ವಿಮಾನ ಮೇಲಕ್ಕೇರದಿದ್ದರೂ 100 ಕೋಟಿ ರು ಗೂ ಅಧಿಕ ಎಫ್ ಡಿ ಐ ಹಣ ಮುಂದಿನ ಯೋಜನೆಗಳಿಗೆ ಬಂಡವಾಳವಾಯಿತು. ಮುಂದಿನ ವರ್ಷವೇ ಟಾಟಾ ಸಂಸ್ಥೆಗೆ ಪ್ರಚಾರ ನೀಡಲು ವೈಷ್ಣವಿ ಕಾರ್ಪೊರೇಟ್ ಕಮ್ಯೂನಿಕೇಷನ್ ಹುಟ್ಟು ಹಾಕಿ, ಅಂಬಾನಿ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳ ಪಿಆರ್ ಆಗಿ ಬೆಳೆದರು.

ಟಾಟಾ ಬೆಂಬಲ ಸಿಗದೆ, ಕಾನೂನು ಸಮರ

ಟಾಟಾ ಬೆಂಬಲ ಸಿಗದೆ, ಕಾನೂನು ಸಮರ

ಆದರೆ, ರಾಡಿಯಾ ಟೇಪ್ಸ್ ಹೊರ ಬಂದ ಬಳಿಕ ಟಾಟಾ ಬೆಂಬಲ ಸಿಗದೆ, ಕಾನೂನು ಸಮರ ಎದುರಿಸುವಂತಾಯಿತು. ಇನ್ನೊಂದೆಡೆ, 1.76 ಲಕ್ಷ ಕೋಟಿ ರು ಮೌಲ್ಯದ 2ಇ ಹಗರಣದ ಪ್ರಮುಖ ಆರೋಪಿ ಡಿಎಂಕೆ ನಾಯಕ ರಾಜಾ ರಾಜೀನಾಮೆ ಪಡೆಯುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾದವು. "ರಾಡಿಯಾ ಟೇಪ್‌ಗಳು" ಎಂದು ಹೆಸರಾದ ವಿವಾದ - ಹೇಗೆ ಸೋರಿಕೆಯಾಯಿತು ಎಂಬುದನ್ನು ವಿವರಿಸುವ ಸರ್ಕಾರ ಸಲ್ಲಿಸಿದ ವರದಿಯ ಪ್ರತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಆಗಸ್ಟ್ 2012 ರಲ್ಲಿ ರತನ್ ಟಾಟಾ ಕೋರಿದ್ದರು. ಇದಕ್ಕೂ ಮುನ್ನ ಖಾಸಗಿತನಕ್ಕೆ ಧಕ್ಕೆ ಎಂದು 2011ರಲ್ಲೇ ಅರ್ಜಿ ಹಾಕಿದ್ದರು. 2014ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ಈಗ ದಶಕಗಳ ಬಳಿಕ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಯೆಸ್ ಬ್ಯಾಂಕ್ ಪ್ರಕರಣದಲ್ಲಿ ನೀರಾ

ಯೆಸ್ ಬ್ಯಾಂಕ್ ಪ್ರಕರಣದಲ್ಲಿ ನೀರಾ

2ಜಿ ಹಗರಣದಲ್ಲಿ ಭಾಗಿ, ಡೀಲ್ ಕುದುರಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಉದ್ಯಮಿ ನೀರಾ ರಾಡಿಯಾ ಹೆಸರು ಒಂದು ದಶಕದ ಬಳಿಕ ಮತ್ತೊಮ್ಮೆ ಕೇಳಿ ಬಂದಿದೆ. ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗದಿಂದ ತನಿಖೆ ಜಾರಿಯಲ್ಲಿದ್ದು, ನೀರಾ ರಾಡಿಯಾಗೆ ಇಂದು ಸಮನ್ಸ್ ಕಳಿಸಲಾಗಿದೆ. ನೀರಾ ಹಾಗೂ ಅವರ ತಂಗಿ, ನಯತಿ ಹೆಲ್ತ್ ಕೇರ್ ಹಾಗೂ ರಿಸರ್ಚ್ ಎನ್ ಸಿ ಆರ್ ಪ್ರೈ ಲಿಮಿಟೆಡ್ ಸಂಸ್ಥೆ ಅಧಿಕಾರಿಗಳಿಗೆ ಸಮನ್ಸ್ ತಲುಪಿಸಲಾಗಿದೆ.


ಯೆಸ್ ಬ್ಯಾಂಕ್ ನಿಂದ ಒಂದು ಯೋಜನೆಗೆಂದು ಸಾಲ ಪಡೆದು ಮತ್ತೊಂದು ಯೋಜನೆಯಲ್ಲಿ ಹಣ ತೊಡಗಿಸಿ, ಅವ್ಯವಹಾರ ಮಾಡಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಾ ಹಾಗೂ ಇತರರು ತನಿಖೆ, ವಿಚಾರಣೆ ಎದುರಿಸಬೇಕಾಗಿದೆ.

ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ

English summary
The Central Bureau of Investigation (CBI) has given a clean chit to corporate lobbyist Niira radia in a case pertaining to 8,000 odd taped conversations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X