World's First CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ನ, ದರ, ವಿಶೇಷತೆಗಳನ್ನು ತಿಳಿಯಿರಿ

World's First CNG Bike: ಆಟೋಮೊಬೈಲ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ಇದೀಗ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹೊಸ ವಿನ್ಯಾಸದ, ಕಡಿಮೆ ಬೆಲೆಯ ಉತ್ತಮ ಸೌಲಭ್ಯಗಳನ್ನೊಳಗೊಂಡ ಬೈಕ್‌ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಇದೀಗ ಬಜಾಜ್‌ ಕಂಪನಿಯು ವಿಶ್ವದ ಮೊಟ್ಟ ಮೊದಲ ಸಿಎನ್‌ಜಿ ಬೈಕ್‌ ಅನ್ನುವ ಬಿಡುಗಡೆ ಮಾಡಿದೆ. ಹಾಗಾದರೆ ಇದಕ್ಕೆ ರೆಸ್ಟಾನ್ಸ್‌ ಹೇಗಿದೆ? & ಇದರ ವಿಶೇಷತೆ, ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಅತೀ ಕಡಿಮೆ ಬೆಲೆಯ, ಹೆಚ್ಚು ಮೈಲೇಜ್‌ ನೀಡುವ ಬೈಕ್‌ಗಳ ಸಾಲಿನಲ್ಲಿ ಬಜಾಜ್‌ ಪ್ಲಾಟಿನ ಇದೆ. ಇನ್ನು ಇದೀಗ ಇದೇ ಕಂಪನಿಯ ವಿಶ್ವದ ಮೊಟ್ಟ ಮೊದಲ ಸಿಎನ್‌ಜಿ ಬೈಕ್ ಬಜಾಜ್ ಫ್ರೀಡಂ 125 ಅನ್ನು ಬಿಡುಗಡೆ ಮಾಡಿದೆ. ಎಕ್ಸ್ ಶೋ ರೂಂ ಬೆಲೆ 95,000ದಿಂದ 1. 10 ಲಕ್ಷ ರೂಪಾಯಿವರೆಗೆ ಇದೆ. ಇನ್ನೈ ಬಿಡುಗೆಯಾಗಿ ಒಂದು ದಿನ ಕಳೆದಿದೆ. ಇನ್ನು ಇದು ಹಿರೋ ಕಂಪನಿಯ ಎಕ್ಸ್‌ಪಲ್ಸ್‌ ಬೈಕ್‌ ಅನ್ನು ಹೋಲುತ್ತದೆ.

Know World s first CNG bike price Features

ಬಜಾಜ್ ಫ್ರೀಡಂ ಬೈಕ್ 125 ಸಿಸಿ ಎಂಜಿನ್ ಒಳಗೊಂಸಿದ್ದು, 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್‌ನ ಕೆಳಗೆ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಅಳವಡಿಕೆ ಮಾಡಲಾಗಿದೆ. ಇದು CNGಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂಗೆ 102 ಕಿಲೋ ಮೀಟರ್‌ ಮೈಲೇಜ್ ಮತ್ತು ಒಂದು ಲೀಟರ್‌ ಪೆಟ್ರೋಲ್‌ಗೆ 67 ಕಿಲೋ ಮೀಟರ್‌ ಮೈಲೇಜ್ ಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಬೈಕ್‌ನಲ್ಲಿ ಕೇವಲ ಒಂದು ಸ್ವಿಚ್ ಪ್ರೆಸ್ ಮಾಡುವ ಮೂಲಕ CNGಯಿಂದ ಪೆಟ್ರೋಲ್ ಮತ್ತು ಪೆಟ್ರೋಲ್‌ನಿಂದ CNGಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಫ್ರೀಡಂ ಬೈಕ್ 147 ಕೆ.ಜಿ. ತೂಕ ಹೊಂದಿದ್ದು, 758 ಮಿಲಿ ಮೀಟರ್ ಉದ್ದದ ಸಿಂಗಲ್ ಸೀಟ್ ಒಳಗೊಂಡಿದೆ. ಅಲ್ಲದೆ ಇದು ಸ್ಪೋರ್ಟಿ ಸ್ಟೈಲಿಂಗ್, ಪೂರ್ಣ ಡಿಜಿಟಲ್ ಸ್ಪೀಡೋ ಮೀಟರ್ ಜೊತೆ ಬ್ಲೂಟ್‌ಟೂತ್ ಕನೆಕ್ಟಿವಿಟಿ, ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್, ಎಲ್‌ಇಡಿ ಹೆಡ್ ಲ್ಯಾಂಪ್, ಡ್ಯುಯಲ್ ಕಲರ್ ಸ್ಕೀಮ್ ಅನ್ನು ಒಳಗೊಂಡಿದೆ.

ಯಾವೆಲ್ಲಾ ಮಾದರಿಗಳಲ್ಲಿ ಲಭ್ಯ?: ಈ ಬೈಕ್ ಡಿಸ್ಕ್ LED, ಡ್ರಮ್ LED ಮತ್ತು ಡ್ರಮ್ ಎಂಬ ಮೂರು ಮಾದರಿಗಳಲ್ಲಿ ಲಭ್ಯ ಇದೆ. ಈಗಾಗಲೇ ಬುಕ್ಕಿಂಗ್‌ ಆರಂಭವಾಗಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭ ಆಗುತ್ತದೆ. ಇನ್ನು ಈ ಬಜಾಜ್ ಫ್ರೀಡಂ 125 ಮೋಟಾರ್‌ಸೈಕಲ್ 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣ ಆಗಿದೆ. ಈ ಬೈಕನ್ನು ಈಜಿಪ್ಟ್, ತಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಕಂಪನಿ ಯೋಜಿಸಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+