ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 80ರಷ್ಟು ರೈಲುಗಳ ವಿದ್ಯುದೀಕರಣ; ಕರ್ನಾಟಕದ ಸ್ಥಿತಿ ಏನು?

|
Google Oneindia Kannada News

ಭಾರತೀಯ ರೈಲ್ವೇ ಇಲಾಖೆಯು ವಿದ್ಯುತ್‌ ರೈಲುಗಳನ್ನು ಓಡಿಸುವ ಯೋಜನೆಗಳು ದೇಶದಲ್ಲಿ ಭರದಿಂದ ಸಾಗುತ್ತಿದ್ದು ರೈಲು ಸಚಿವಾಲಯವು ಹೇಳಿಕೊಂಡಿರುವಂತೆ ಶೇ.80ರಷ್ಟು ವಿದ್ಯುದೀಕರಣಗೊಳಿಸಿದೆ. ಇದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿರುವ ಭಾರತೀಯ ರೈಲು ಸೇವೆಯು ಮುಂದಿನ ದಿನಗಳಲ್ಲಿ ಡಿಸೇಲ್‌ಗೆ ಗುಡ್‌ ಬೈ ಹೇಳಿಲಿದ್ದು ಜೊತೆಗೆ ವಿದ್ಯುದ್ದೀಕರಿಸಿದ ಹೈಸ್ಪೀಡ್‌ ರೈಲುಗಳು ಸಂಚಾರಕ್ಕೆ ಹೊಸ ರೈಲುಗಳನ್ನು ಪರಿಚಯಸಲಿದೆ.

ಮುಂಬರುವ 2023-24ರ ವೇಳೆಗೆ ದೇಶದ ಬ್ರಾಡ್-ಗೇಜ್ ನೆಟ್‌ವರ್ಕ್‌ನ್ನು ವಿದ್ಯುದ್ದೀಕರಿಸುವ ಭಾರತೀಯ ರೈಲ್ವೆಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ರಾಷ್ಟ್ರೀಯ ರೈಲು ಸಂಚಾರವು 80%ರಷ್ಟು ವಿದ್ಯುದ್ದೀಕರಿಸಿದೆ, ಡೀಸೆಲ್ ಬಳಕೆಯು ಕೂಡ ಕಡಿಮೆ ಸಂಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು ಜೊತೆಗೆ ಪ್ರತಿ ವರ್ಷ ತೆರಿಗೆದಾರರ ಹಣದಲ್ಲಿ ನೂರಾರು ಕೋಟಿಗಳನ್ನು ಭಾರತೀಯ ರೈಲು ಇಲಾಖೆಯು ಉಳಿಸಿದೆ. ಇದರಿಂದ ರೈಲ್ವೇ ಇಲಾಖೆಗೆ ಮತ್ತಷ್ಟು ಲಾಭವಾಗಿದೆ.

ರೈಲ್ವೇ ಇಲಾಖೆಯು ತನ್ನ ಅಭಿವೃದ್ಧಿಯ ಮಿಷನ್ 100% ವಿದ್ಯುದೀಕರಣ ಗುರಿ ಹಾಕಿಕೊಂಡಿದ್ದು ನಿವ್ವಳ ಶೂನ್ಯ ಇಂಗಾಲದ ಹೊರ ಸೊರದ ಹಾಗೆ ಯೋಜನೆಗೆ ಚಲಿಸುವ ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. 2014ರಿಂದ ವಿದ್ಯುದ್ದೀಕರಣವು ಸುಮಾರು 10 ಪಟ್ಟು ಹೆಚ್ಚಾಗಿದೆ ಎಂದು ಜೂನ್‌ನಲ್ಲಿ ರೈಲ್ವೆ ಇಲಾಖೆಯು ಹೇಳಿದೆ.

ಕೊಂಕಣ ರೈಲ್ವೇ ವಿದ್ಯುದ್ದೀಕರಣ..

ಕೊಂಕಣ ರೈಲ್ವೇ ವಿದ್ಯುದ್ದೀಕರಣ..

ಇನ್ನು ಕೊಂಕಣ ರೈಲ್ವೇ ಕಾರ್ಪೊರೇಷನ್ ರೋಹಾ (ಮಹಾರಾಷ್ಟ್ರ) ಮತ್ತು ಥೋಕೂರ್ (ಕರ್ನಾಟಕ) ನಡುವಿನ ಸಂಪೂರ್ಣ 741-ಕಿಮೀ ಮಾರ್ಗದಲ್ಲಿ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದೆ. ಕೊಂಕಣ ರೈಲ್ವೇ ಮುಂಬಯಿಯನ್ನು ಮಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಈ ಮಾರ್ಗವು ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಮೂಲಕ ಹಾದುಹೋಗುತ್ತದೆ. ದಕ್ಷಿಣ ಮಧ್ಯ ರೈಲ್ವೆಯು ಆಂಧ್ರಪ್ರದೇಶದ ವಿವಿಧ ವಿಭಾಗಗಳಲ್ಲಿ 163 ಕಿ.ಮೀ ರೈಲು ಮಾರ್ಗಗಳ ವಿದ್ಯುದ್ದೀಕರಣವನ್ನು ಮಾಡಲಾಗುವುದು ಎಂದು ರೈಲು ಇಲಾಖೆ ಭರವಸೆ ನೀಡಿತ್ತು.

ವಿಶ್ವದ ಅತಿ ಎತ್ತರದ ರೈಲ್ವೆ ಪಿಯರ್ ಸೇತುವೆ 75% ಪೂರ್ಣಗೊಂಡಿದೆ

ವಿಶ್ವದ ಅತಿ ಎತ್ತರದ ರೈಲ್ವೆ ಪಿಯರ್ ಸೇತುವೆ 75% ಪೂರ್ಣಗೊಂಡಿದೆ

ಭಾರತೀಯ ರೈಲ್ವೇಯು 6,015 ರೂಟ್ ಕಿಮೀ ವಿದ್ಯುದೀಕರಣಗೊಳಿಸಿದ್ದು, ಇದುವರೆಗೆ ಅತ್ಯಧಿಕವಾಗಿದೆ. ಭಾರತದ ಒಟ್ಟು ಬ್ರಾಡ್-ಗೇಜ್ ನೆಟ್‌ವರ್ಕ್ 64,689 ರೂಟ್ ಕಿಮೀ ಆಗಿದ್ದರೆ, ಏಪ್ರಿಲ್ 3 ರಂತೆ 52,247 ರೂಟ್ ಕಿಮೀಗಳಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ, ರೈಲ್ವೆಯು ನೆಟ್‌ವರ್ಕ್‌ನ 34% ರಷ್ಟು ವಿದ್ಯುದ್ದೀಕರಿಸಿದೆ.

ಬರಲಿವೆ ವಿದ್ಯುತ್ ಚಾಲಿತ ರೈಲು

ಬರಲಿವೆ ವಿದ್ಯುತ್ ಚಾಲಿತ ರೈಲು

ವಿದ್ಯುತ್ ಮಾರ್ಗದ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಹೊಸ ರೈಲುಗಳ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ನಿರೀಕ್ಷಿಸಲಾಗಿದೆ. ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿ ಅವರು 2023ರ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ 75 ವಂದೇ ಭಾರತ್ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಓಡಿಸಲಾಗುವುದು ಎಂದು ಘೋಷಿಸಿದ್ದರು.

ಕರ್ನಾಟಕದಲ್ಲೂ ಬರಲಿವೆ ಹೈಸ್ಪೀಡ್‌ ರೈಲುಗಳು

ಕರ್ನಾಟಕದಲ್ಲೂ ಬರಲಿವೆ ಹೈಸ್ಪೀಡ್‌ ರೈಲುಗಳು

ಕರ್ನಾಟಕದಲ್ಲಿ ಈಗಾಗಲೇ ಬೆಳಗಾವಿ ರೈಲು ವಿಭಾದದಲ್ಲಿ ಪ್ರತಿ ಗಂಟೆಗೆ 130 ಕಿ.ಮೀ ವೇಗದಲ್ಲಿ ರೈಲು ಓಡಿಸಲು ಪ್ರಾಯೋಗಿಕ ಪ್ರಯೋಗದಲ್ಲಿ ಯಶಸ್ವಿ ಕಂಡಿರುವ ರೈಲು ಇಲಾಖೆಯು ಕರ್ನಾಟಕದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಓಡಿಸಲು ಹಾಗೂ ಹೈಸ್ಪೀಡ್‌ ರೈಲುಗಳು ಮತ್ತು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಸಂಚರಿಸಲಿವೆ.

English summary
Indian Railways plans to run electric trains in the country and as claimed by the Ministry of Railways, 80% electrification has been achieved,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X