Mercedes Benz: ಮರ್ಸಿಡಿಸ್ ಬೆಂಜ್ ಕಂಪನಿ ಬಿಡುಗಡೆ ಮಾಡಿದ ಈ ಎರಡು ಹೊಸ ಕಾರುಗಳ, ದರ ವಿಶೇಷತೆ ತಿಳಿಯಿರಿ
ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಕ್ರಾಂತಿಯೇ ಆಗುತ್ತಿದೆ. ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳು ಅಂದರೆ ಕಾರುಗಳ ಮಾರಾಟದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇನ್ನೂ ಇದೀಗ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಜ್ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದಕ್ಕೆ ರೆಸ್ಪಾನ್ಸ್ ಹೇಗಿದೆ, ದರ, ವಿಶೇಷತೆಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮರ್ಸಿಡಿಸ್ ಬೆಂಜ್ ತನ್ನ ಬಹುನೀರಿಕ್ಷಿತ ಇಕ್ಯೂಎ ಮತ್ತು ಇಕ್ಯೂಬಿ ಫೇಸ್ ಲಿಫ್ಟ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ ಇಕ್ಯೂಎ ಎಕ್ಸ್ ಶೋರೂಂ ದರ 66 ಲಕ್ಷ ಹಾಗೂ ಇಕ್ಯೂಬಿ 70.90 ಲಕ್ಷ ರೂಪಾಯಿಯಿಂದ ಆರಂಭ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುಧಾರಿತ ಬ್ಯಾಟರಿ ಆಯ್ಕೆಯನ್ನು ಒಳಗೊಂಡಿದ್ದು, ಐಷಾರಾಮಿ ಕಾರು ವಿಭಾಗದಲ್ಲಿ ಇವು ಹೊಸ ಸಂಚಲನ ಸಷ್ಟಿಸಿವೆ.

Mercedes Benz EQA: ಈ ಹೊಸ ಕಾರು ಮಾದರಿಯು ಮರ್ಸಿಡಿಸ್ ಬೆಂಜ್ ನಿರ್ಮಾಣದ ಅತಿ ಕಡಿಮೆ ದರದ ಎಲೆಕ್ಟ್ರಿಕ್ ಆವೃತ್ತಿ ಆಗಿದ್ದು, ಇದು 70.5kWh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಮೂಲಕ ಇದು 190 ಹಾರ್ಸ್ ಪವರ್ ಮತ್ತು 385 ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಒಂದು ಬಾರಿ ಚಾರ್ಜ್ ಮಾಡಿದರೆ, ಗರಿಷ್ಠ 560 ಕಿಲೋ ಮೀಟರ್ ಮೈಲೇಜ್ ಕೊಡಲಿದೆ ಎಂದು ಕಂಪನಿ ಮೂಲಗಳಿಂದ ತಿಂದುಬಂದಿದೆ.
ಈ ಕಾರು ಮಾದರಿಯು 100kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಒಳಗೊಂಡಿದೆ. ಇದು 11kW ಎಸಿ ಚಾರ್ಜರ್ ಮೂಲಕ 7 ಗಂಟೆ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಹಾಗೆಯೇ ಇದು 8.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ವೇಗಪಡೆದುಕೊಳ್ಳಲಿದ್ದು, ಇದು ಗಂಟೆಗೆ ಗರಿಷ್ಠ 160 ಕಿಲೋ ಮೀಟರ್ ಟಾಪ್ ಸ್ಪೀಡ್‌ನಲ್ಲಿ ಚಲಿಸಲಿದೆ.
ಅಲ್ಲದೆ, ಈ ಕಾರಿನಲ್ಲಿ ಮರ್ಸಿಡಿಸ್ ಬೆಂಜ್ ಕಂಪನಿಯು ಹಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಿದೆ. ಈ ಕಾರಿನಲ್ಲಿ ಸ್ಪೋರ್ಟಿಯಾಗಿರುವ 19 ಇಂಚಿನ ಎಎಂಜಿ ಪ್ರೇರಿತ ಅಲಾಯ್ ವ್ಹೀಲ್‌ಗಳು, ಮರ್ಸಿಡಿಸ್ ಹೊಸ ಆಪರೇಟಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗಿದೆ.
Mercedes Benz EQB facelift: ಇಕ್ಯೂಬಿ ಫೇಸ್ ಲಿಫ್ಟ್ ಸಹ ಹಲವು ಆಧುನಿಕ ಸಯಧಾರಿತ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಹೊಸ ಇಕ್ಯೂಬಿ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಈ ಹಿಂದಿನ ಮಾದರಿಗಿಂತಲೂ 112 ಕಿಲೋ ಮೀಟರ್ ಹೆಚ್ಚುವರಿ ಮೈಲೇಜ್ ನೀಡಲಿದೆ.
ಈ ಇಕ್ಯೂಬಿ ಕಾರಿನ ಆರಂಭಿಕ ಮಾದರಿಯಾದ 250 ಪ್ಲಸ್ ವೆರಿಯೆಂಟ್ 7 ಸೀಟರ್ ಸೌಲಭ್ಯದೊಂದಿಗೆ 70.90 ಲಕ್ಕ ರೂಪಾಯಿಗೆ ಖರೀದಿಗೆ ಲಭ್ಯವಿದ್ದರೆ, 350 4 ಮ್ಯಾಟಿಕ್ 5 ಸೀಟರ್ ಹೊಂದಿರುವ ಟಾಪ್ ಎಂಡ್ ವೆರಿಯೆಂಟ್ ದರ 77.50 ಲಕ್ಷ ರೂಪಾಯಿ ಆಗಿದೆ.
ಇದರಲ್ಲಿರುವ 250 ಪ್ಲಸ್ ವೆರಿಯೆಂಟ್ 7 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಹಲವು ಸ್ಟ್ಯಾಂಡರ್ಡ್ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ 350 4 ಮ್ಯಾಟಿಕ್ 5 ಸೀಟರ್ ಹೊಂದಿರುವ ಟಾಪ್ ಎಂಡ್ ಮಾದರಿಯು 250 ಪ್ಲಸ್ ವೆರಿಯೆಂಟ್ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರು 4 ಮ್ಯಾಟಿಕ್ ಡ್ರೈವ್ ಸಿಸ್ಟಂ ಸೇರಿ ಮರ್ಸಿಡಿಸ್ ಹೊಸ ಎಂಬಿಯುಎಕ್ಸ್ ಇನ್ಪೋಟೈನ್ ಮೆಂಟ್ ಇಂಟರ್ ಫೇಸ್, ಬರ್ಮಸ್ಟೆರ್ ಸೌಂಡ್ ಸಿಸ್ಟಂ, ಡಾಬ್ಲಿ ಅಟಾಮಸ್, ಡ್ಯುಯಲ್ ಜೋನ್ ಆಟೋಮೆಟಿಕ್ ಕಂಟ್ರೋಲ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಅನ್ನು ಒಳಗೊಂಡಿದೆ.
ಇಕ್ಯೂಬಿ ಕಾರಿನ 250 ಪ್ಲಸ್ ವೆರಿಯೆಂಟ್ 70.5kWh ಬ್ಯಾಟರಿ ಜೊತೆ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯವನ್ನು ಒಳಗೊಂಡಿದ್ದು, ಇದು 190 ಹಾರ್ಸ್ ಪವರ್, 385 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 447 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.
ಅಲ್ಲದೆ, ಬೃಹತ್ ಗಾತ್ರ ಬ್ಯಾಟರಿ ಆಯ್ಕೆಯನ್ನು ಒಳಗೊಂಡಿರುವ 350 4 ಮ್ಯಾಟಿಕ್ ವೆರಿಯೆಂಟ್ 292 ಹಾರ್ಸ್ ಪವರ್, 520 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಒಂದು ಬಾರಿ ಸಂಪೂರ್ಣ ಚಾರ್ಜ್‌ಗೆ ಗರಿಷ್ಠ 535 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಜೊತಗೆ 100kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಒಳಗೊಂಡಿದ್ದು, ಇವು ವೊಲ್ವೊ ಎಕ್ಸ್‌ಸಿ 40 ರೀಚಾರ್ಜ್, ಬಿಎಂಡಬ್ಲ್ಯು ಎಕ್ಸ್1 ಸೇರಿ ವಿವಿಧ ಐಷಾರಾಮಿ ಇವಿ ಕಾರುಗಳಿಗೆ ಉತ್ತಮ ಪೈಪೋಟಿಯಾಗಲಿದೆ.












Click it and Unblock the Notifications