ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಲು ಸಜ್ಜಾದ ಮಾರುತಿ ಕಂಪನಿಯ ಈ ಹೊಸ ಕಾರು

ಮಾರುತಿ ಕಂಪನಿ ಕಾರುಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯಿದ್ದು, ಈ ವರ್ಷದ ಅಂದರೆ ಏಪ್ರಿಲ್‌- ಜೂನ್‌ನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಕಂಪನಿಗಳಲ್ಲಿ ಇದು ಮೊದ ಸ್ಥಾನವನ್ನು ಅಲಂಕರಿಸಿದೆ. ಇನ್ನು 2017ರಲ್ಲಿ ಬಿಡುಗಡೆಯಾಗಿದ್ದ ಈ ಕಾರಿಗೆ ಇದೀಗ ಮರುಜೀವ ಸಿಕ್ಕಂತಾಗಿದೆ. ಹಾಗಾದರೆ ಇದರ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೆಚ್ಚು ಮೈಲೇಜ್‌ ನೀಡುವ, ಉತ್ತಮ ಸೌಲಭ್ಯಗಳುಳ್ಳ ಕಾರುಗಳು ಮಾರುತಿ ಕಂಪನಿ ಆಗಾಗ ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗೆಯೇ ಈ ಕಂಪನಿ 2017ರಲ್ಲಿ ಇಗ್ನಿಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ನಂತರ ಈ ಕಾರು 2020 ಮತ್ತು 2023ನೇ ವರ್ಷಗಳಲ್ಲಿ ಹಲವು ಅಪ್ಡೇಟ್‌ಗಳಿಂದಿಗೆ ಲಭ್ಯವಾಯಿತು. ಆದರೆ, ಕೆಲವು ವರ್ಷಗಳಿಂದ ಇದರ ಮಾರಾಟದಲ್ಲಿ ಕುಸಿತ ಕಂಡುಬಂದಿದ್ದು, ಇದು ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಮಾರಾಟವನ್ನು ಸುಧಾರಿಸಲು, ಮಾರುತಿ ಇಗ್ನಿಸ್‌ನ ರೇಡಿಯನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Know Maruti Suzuki Ignis Radiance car Price and Features

ಈ ಹೊಸ ಆವೃತ್ತಿಯಲ್ಲಿ ಹಲವು ಉತ್ತಮ ಸೌಲಭ್ಯಗಳನ್ನು ನೀಡಲಾಗಿದ್ದು, ಇದು ನೋಡಲು ಹೊಸ ವಿನ್ಯಾಸದಲ್ಲಿ ಗ್ರಾಹಕರ ಕಣ್ಣು ಕುಕ್ಕುವಂತೆ ಸ್ಟೈಲಿಶ್ ಆಗಿ ಕಾಣುತ್ತದೆ. ಅಲ್ಲದೆ, ಕಂಪನಿ 3,650 ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಕೂಡ ನೀಡುತ್ತಿದೆ. ಈ ಪ್ಯಾಕೇಜ್ 15-ಇಂಚಿನ ಚಕ್ರಗಳು, ಡೋರ್ ವಿಸರ್‌ಗಳು ಮತ್ತು ಕ್ರೋಮ್ ಹೆಡ್‌ಲೈಟ್‌​ಗಳನ್ನು ಒಳಗೊಂಡಿದೆ.

ರೇಡಿಯನ್ಸ್ ಆವೃತ್ತಿಯಲ್ಲಿ ಝೀಟಾ ಮತ್ತು ಆಲ್ಫಾ ಆಧಾರಿತ ರೂಪಾಂತರಗಳು ಕೂಡ ಇದರಲ್ಲಿ ಲಭ್ಯವಿವೆ. ಜೊತೆಗೆ 9,500 ರೂಪಾಯಿ ಮೌಲ್ಯದ ಆಕ್ಸೆಸರಿ ಪ್ಯಾಕೇಜ್ ಲಭ್ಯವಿದ್ದು, ಇದರಲ್ಲಿ ಡೋರ್ ವೈಸರ್, ಡೋರ್ ಕ್ಲಾಡಿಂಗ್, ಹೊಸ ಸೀಟ್ ಕವರ್‌ಗಳು ಮತ್ತು ಕಪ್ಪು ಕುಶನ್‌ಗಳು ಒಳಗೊಂಡಿವೆ.

ಇದರ ನಿಯಮಿತ ಆಲ್ಫಾ ರೂಪಾಂತರದಲ್ಲಿ ಹಲವು ವಿಶೇಷ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿಮೋಟ್ ಅಪ್ಲಿಕೇಶನ್, ಆಟೋ ಕ್ಲೈಮೇಟ್ ಕಂಟ್ರೋಲ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟರ್, ಪಡ್ಲ್ ಲ್ಯಾಂಪ್‌ಗಳು, ಡೇ ರನ್ನಿಂಗ್ ಲೈಟ್‌ಗಳೊಂದಿಗೆ ಎಲ್‌ಇಡಿ ಪ್ರೊಜೆಕ್ಟರ್, ರಿವರ್ಸ್ ಕ್ಯಾಮೆರಾ ಸೇರಿದಂತೆ ಹಲವು ಸೌಲಭ್ಯಗಳಿವೆ.

ಝೀಟಾ ರೂಪಾಂತರವು ಹಿಂಭಾಗದ ಡಿಫಾಗರ್ ಮತ್ತು ವೈಪರ್, ಹಿಂಭಾಗದ ಪಾರ್ಕಿಂಗ್ ಸಂವೇದಕ, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ವಿಂಗ್ ಮಿರರ್, 15 ಇಂಚಿನ ಮಿಶ್ರಲೋಹದ ಚಕ್ರಗಳು, ಫಾಗ್ ಲ್ಯಾಂಪ್‌ಗಳು, 4 ಸ್ಪೀಕರ್‌ಗಳನ್ನು ಒಳಗೊಂಡಿದೆ.

ಅಲ್ಲದೆ, 12V ಪವರ್ ಔಟ್‌ಲೆಟ್ ನೀಡಲಾಗಿದ್ದು, ಏರ್ ಕಂಡಿಷನರ್, ಹೀಟರ್, ಟಿಲ್ಟ್ ಅಡ್ಜೆಸ್ಟ್ ಸ್ಟೀರಿಂಗ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ಗಳು, ಇಬಿಡಿ ಜೊತೆಗೆ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಐಸೊಫಿಕ್ಸ್ ಚೈಲ್ಡ್ ಸೀಟ್ ಆ್ಯಂಕರ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

ಮಾರುತಿ ಇಗ್ನಿಸ್ ರೇಡಿಯನ್ಸ್ ಆವೃತ್ತಿಯು 1.2 ಲೀಟರ್, 4 ಸಿಲಿಂಡರ್ K12 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 83bhp ಪವರ್ ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಗ್ನಿಸ್ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಸುಮಾರು 20.89 ಕಿಲೋ ಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿಯ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಮಾರುತಿ ಇಗ್ನಿಸ್ ರೇಡಿಯನ್ಸ್ ಆವೃತ್ತಿಯನ್ನು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ನೀಡಲಾಗುತ್ತದೆ. ಇದರ ರೇಡಿಯನ್ಸ್ ಆವೃತ್ತಿಯನ್ನು ಕೇವಲ 5.49 ಲಕ್ಷ ರೂಪಾಯಿಗಳ ಎಕ್ಸ್ ಶೋರೂಂ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇತರೆ ರೂಪಾಂತರದ ಎಕ್ಸ್ ಶೋರೂಂ ದರವು 5.84 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಮತ್ತು ಟಾಪ್ ರೂಪಾಂತರದ ಎಕ್ಸ್ ಶೋ ರೂಂ ದರ 8.06 ಲಕ್ಷ ರೂಪಾಯಿ ಆಗಿರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+