ಜನಸೇವಕ ತಿಳಿದಿರಿ; ವೃದ್ಧರ ಪಿಂಚಣಿ ಸೇರಿದಂತೆ 80 ಸರಕಾರಿ ಸೇವೆಗಳು ನಿಮ್ಮ ಮನೆಬಾಗಿಲಿಗೆ
ನಾಗರಿಕರ ಉಪಯೋಗಕ್ಕಾಗಿ ಸರಕಾರ ಬಹಳಷ್ಟು ಯೋಜನೆ ಮತ್ತು ವ್ಯವಸ್ಥೆಗಳನ್ನು ಮಾಡಿದೆ. ಆದರೆ, ಈ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಇರುತ್ತದೆ.
ಯಾವುದಾದರೂ ಸರಕಾರಿ ಸೌಲಭ್ಯ ಪಡೆಯಬೇಕೆಂದರೆ ಕಚೇರಿಗಳಿಗೆ ಅಲೆಯಬೇಕು. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕು. ಒಂದು ದಿನ, ಎರಡು ದಿನದಲ್ಲಿ ಕೆಲಸ ಆಗುತ್ತೆ ಎನ್ನುವಂತಿಲ್ಲ. ವಯೋವೃದ್ಧರು, ವಿಶೇಷಚೇತನದವರಾದರಂತೂ ಕಷ್ಟ ಕಷ್ಟ...!
ಇದನ್ನು ತಪ್ಪಿಸಲು ರಾಜ್ಯ ಸರಕಾರ ಮೂರು ವರ್ಷಗಳ ಹಿಂದೆ, 2019ರಲ್ಲಿ 'ಜನಸೇವಕ' ಎಂಬ ಯೋಜನೆ ಜಾರಿಗೆ ತಂದಿದೆ. ಜನರ ಅನುಕೂಲಕ್ಕೆ ತಕ್ಕ ಸಮಯದಲ್ಲಿ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆ ತರಲಾಗಿದೆ.
ಜನರು ಹೇಳುವ ಸಮಯಕ್ಕೆ ಅವರ ಮನೆ ಬಾಗಿಲಿಗೆ 'ಜನಸೇವಕ' ತೆರಳಿ ಅವರ ಸೇವೆಗಳನ್ನು ಮಾಡಿಕೊಡುವ ವ್ಯವಸ್ಥೆ ಈ ಯೋಜನೆಯದ್ದಾಗಿದೆ. ಸಮಯದ ಅಭಾವ ಇರುವ ಮತ್ತು ವೃದ್ಧರು, ವಿಶೇಷಚೇತನದ ಜನರಿಗೆ 'ಜನಸೇವಕ' ಆಪದ್ಬಾಂಧವರಾಗುತ್ತಾರೆ.

ಏನಿದು ಜನಸೇವಕ ಯೋಜನೆ?
ನಿಗದಿತ ಸೇವೆ ಬಯಸುವ ಜನರ ಮನೆ ಬಾಗಿಲಿಗೆ ನಿಗದಿತ ಸಮಯಕ್ಕೆ ಜನಸೇವಕರು ಬರುತ್ತಾರೆ. ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ ಸೇವೆಯನ್ನು ಮಾಡಿಕೊಡಲಾಗುತ್ತದೆ. ರಾಜ್ಯ ಸರಕಾರದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವುದು ಇದರ ಉದ್ದೇಶ.
2019 ಮಾರ್ಚ್ 2ರಂದು ಮೊದಲಿಗೆ ಐದು ಸೇವೆಗಳೊಂದಿಗೆ ಪ್ರಾರಂಭವಾದ ಈ ಯೋಜನೆಯಲ್ಲಿ ಈಗ 80 ಸೇವೆಗಳು ಇವೆ. ಇಲ್ಲಿಯವರೆಗೂ 2 ಲಕ್ಷಕ್ಕೂ ಹೆಚ್ಚು ಜನರು ಜನಸೇವಕನ ಪ್ರಯೋಜನ ಪಡೆದಿದ್ದಾರೆನ್ನಲಾಗಿದೆ.
ಯಾವ ಸೇವೆ ಬೇಕು, ಯಾವ ಸಮಯದಲ್ಲಿ ಮನೆಗೆ ಬರಬೇಕು ಎಂದು ಜನರು ಮೊದಲೇ ಮುಂಗಡ ಬುಕ್ ಮಾಡಿರಬೇಕು. ಜನಸೇವಕ ಮನೆಬಾಗಿಲಿಗೆ ಬಂದರೆ ಶುಲ್ಕ ಕೊಡಬೇಕಾಗುತ್ತದೆ. ಜನಸೇವಕ ಶುಲ್ಕದ ಜೊತೆಗೆ ಸೇವಾ ಶುಲ್ಕವೂ ಪ್ರತ್ಯೇಕ ಇರುತ್ತದೆ. ಸುಮಾರು 150 ರೂ ಹಣವನ್ನು ಶುಲ್ಕ ರೂಪದಲ್ಲಿ ಪಾವತಿಸಬೇಕು. ಒಂದು ಸೇವೆಗೆಂದು ಒಂದು ಸಮಯ ನಿಗದಿ ಮಾಡಿದರೆ ಅದು ಆ ಸೇವೆಗೆ ಮಾತ್ರ ಸೀಮಿತವಾಗಿರುತ್ತದೆ. ಒಂದೇ ಸ್ಲಾಟ್‌ನಲ್ಲಿ ಎರಡು ಸೇವೆ ಪಡೆಯಲು ಬರುವುದಿಲ್ಲ.
ಜನಸೇವಕ ವ್ಯವಸ್ಥೆಯಲ್ಲಿ ನೀವು ಒಂದು ಸೇವೆಗೆ ಬುಕ್ ಮಾಡುವಾಗಲೇ, ಆ ಸೇವೆ ಸಂಬಂಧ ಯಾವ ದಾಖಲೆಗಳ ಅಗತ್ಯ ಇದೆ ಎಂಬ ಮಾಹಿತಿ ಕೊಡಾಗುತ್ತದೆ. ಜನಸೇವಕರು ನಿಮ್ಮ ಮನೆಗೆ ಬಂದಾಗ ಆ ದಾಖಲೆಗಳನ್ನು ಕೊಡಬೇಕು.

ಸೇವೆ ಬುಕ್ ಮಾಡುವುದು ಹೇಗೆ?
ಜನಸೇವಕ ವನ್ನು ಬುಕ್ ಮಾಡಲು ಈ ಕೆಳಗಿನ ಮೂರು ಆಯ್ಕೆಗಳಿವೆ. ಮೊಬೈಲ್ ನಂಬರ್ ಹಾಗು ವೆಬ್ ಮತ್ತು ಆ್ಯಪ್.
ಕಾಲ್ ಸೆಂಟರ್ ನಂಬರ್: 080-44554455
ವೆಬ್‌ಸೈಟ್: https://www.janasevaka.karnataka.gov.in/
ಮೊಬೈಲ್ ಒನ್: https://mobileone.karnataka.gov.in/Home/Login?ReturnUrl=%2f
ದಿನದ ಯಾವ ಅವಧಿಯಲ್ಲಿ ಬೇಕಾದರೂ ಈ ಮೂರು ವಿಳಾಸಗಳನ್ನು ಬಳಸಬಹುದು. ಆದರೆ, ಜನಸೇವಕ ನಿಮ್ಮ ಮನೆ ಬಾಗಿಲಿಗೆ ಬರಲು ನಿಗದಿ ಮಾಡುವ ಸಮಯ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಮಾತ್ರ ಇರಬೇಕು. ಅಂದರೆ ಜನಸೇವಕರು ಈ 12 ಗಂಟೆ ಅವಧಿ ಮಾತ್ರ ಸೇವೆಯಲ್ಲಿರುತ್ತಾರೆ. ಆ ಅವಧಿಯಲ್ಲಿ ನಿಮಗೆ ಅನುಕೂಲಕರಾದ ಸ್ಲಾಟ್ ಅನ್ನು ಬುಕ್ ಮಾಡಬೇಕು.
ಒಂದು ವೇಳೆ, ನೀವು ಬುಕ್ ಮಾಡಿದ ಸಮಯವನ್ನು ಬದಲಾಯಿಸುವ ಅವಕಾಶವೂ ಇರುತ್ತದೆ. ಬುಕಿಂಗ್ ಸಮಯದ ಕನಿಷ್ಠ ಒಂದು ಗಂಟೆ ಮುಂಚೆ ನೀವು ಬುಕಿಂಗ್ ಅವಧಿಯನ್ನು ಬದಲಾಯಿಸಬಹುದು ಅಥವಾ ಬುಕಿಂಗ್ ಅನ್ನೇ ರದ್ದು ಮಾಡಬಹುದು.
ನೀವು ಬುಕಿಂಗ್ ಮಾಡಿದಾಗ ನಿಮ್ಮ ನೊಂದಾಯಿತ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಜನಸೇವಕ ಸಿಬ್ಬಂದಿ ನಿಮ್ಮ ಮನೆಗೆ ಬಂದ ಸಂದರ್ಭದಲ್ಲಿ ಒಟಿಪಿ ಸಂಖ್ಯೆಯನ್ನು ತೋರಿಸಬೇಕು. ಜನಸೇವಕ ಸಿಬ್ಬಂದಿಗೆ ಸೇವಾ ಶುಲ್ಕವಾದ ೧೧೫ ರೂ ಅನ್ನು ನಗದು ಮೂಲಕವಾದರೂ ಕೊಡಬಹುದು, ಅಥವಾ ಯುಪಿಐ ಪೇಮೆಂಟ್ ಕೂಡ ಮಾಡಬಹುದು.

ಯಾವೆಲ್ಲಾ ಸೇವೆಗಳಿವೆ?
ಆರೋಗ್ಯ ಚೀಟಿ
ವಿಧವೆ ಪಿಂಚಣಿ
ಅಂಗವಿಕಲ ಪಿಂಚಣಿ
ಸಂಧ್ಯಾ ಸುರಕ್ಷ ಯೋಜನೆ
ಇನ್ಕಮ್ ಸರ್ಟಿಫಿಕೇಟ್
ಜಾತಿ ಪ್ರಮಾಣಪತ್ರ
ಭೂ ಹಿಡುವಳಿ ಪ್ರಮಾಣಪತ್ರ
ಕುಟುಂಬ ವಂಶವೃಕ್ಷ ದೃಢೀಕರಣ
ವಾಸಸ್ಥಳ ಪ್ರಮಾಣಪತ್ರ
ನಿವಾಸಿ ಪ್ರಮಾಣಪತ್ರ
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ
ಮದುವೆ ಸಹಾಯಧನಕ್ಕೆ ಅರ್ಜಿ
ಪಿಪಿಎಲ್ ರೇಷನ್ ಕಾರ್ಡ್ ಅರ್ಜಿ
ಜನನ ಪ್ರಮಾಣಪತ್ರ, ನೊಂದಣಿ, ಮರಣ ಪ್ರಮಾಣಪತ್ರ, ನೊಂದಣಿಗೆ ಅರ್ಜಿ
ಹಿರಿಯ ನಾಗರಿಕರ ಚೀಟಿ
ವಸ್ತುಗಳು ಕಳುವಾದ ಸಂಬಂಧ ಪೊಲೀಸ್ ದೂರು
ಪೊಲೀಸ್ ದೂರು ನೊಂದಣಿ
ಮನರಂಜನೆಗೆ ಪರವಾನಗಿ
ಆಧಾರ್ ನೊಂದಣಿ
ಆಧಾರ್‌ನಲ್ಲಿ ವಿಳಾಸ ತಿದ್ದುಪಡಿ
ಬಯೋಮೆಟ್ರಿಕ್ ನವೀಕರಣ
ಹೀಗೆ 80 ಸೇವೆಗಳನ್ನು ಜನಸೇವಕ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ಮಾಡಿಕೊಡುತ್ತಾರೆ. ಇದರ ಪ್ರಯೋಜನ ಪಡೆಯುವುದನ್ನು ಮರೆಯದಿರಿ.

ಏನು ಉಪಯೋಗ?
ಒಂದು, ನೀವು ಈ ಸೇವೆಗಳಿಗೆ ಸರಕಾರಿ ಕಚೇರಿಗಳಿಗೆ ಅಲೆಯುವ ಸಮಯ ಉಳಿತಾಯವಾಗುತ್ತದೆ. ಕ್ಯೂನಲ್ಲಿ ನಿಲ್ಲುವ ಗೋಜಲು ತಪ್ಪುತ್ತದೆ.
ಎರಡು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು.
ಮೂರು, ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ನಿಮಗೆ ಅನುಕೂಲಕರವಾದ ಸಮಯದಲ್ಲಿ ಜನಸೇವಕ ಸಿಬ್ಬಂದಿಯನ್ನು ಮನೆಗೆ ಕರೆಸಬಹುದು.
ಹಾಗು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಂತೂ ಇದು ಬಹಳ ಅನುಕೂಲಕರವಾಗುತ್ತದೆ.
ಗಮನಿಸಬೇಕಾದ ಅಂಶವೆಂದರೆ, ಜನಸೇವಕ ಯೋಜನೆಯಲ್ಲಿ ನೀವು ಒಂದು ಸೇವೆಗೆ ಬುಕ್ ಮಾಡುವಾಗ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಸಿಬ್ಬಂದಿ ಬಂದಾಗ ಆ ಒಟಿಪಿ ಸಂಖ್ಯೆ ತೋರಿಸಬೇಕು. ಹಾಗೆಯೇ, ಜನಸೇವಕ ಸಿಬ್ಬಂದಿ ಅಧಿಕೃತವಾದ ಸಮವಸ್ತ್ರ ಧರಿಸುತ್ತಾರೆ. ಅಧಿಕೃತ ಗುರುತಿನ ಚೀಟಿಯನ್ನೂ ಹೊಂದಿರುತ್ತಾರೆ.
ನೀವು ಜನಸೇವಕ ಸಿಬ್ಬಂದಿಗೆ ಅರ್ಜಿಯನ್ನು ವಿಲೇವಾರಿ ಮಾಡಿದ ಬಳಿಕವೂ ಮೊಬೈಲ್ ನಂಬರ್‌ಗೆ ಎಸ್ಸೆಮ್ಮೆಸ್ ಬರುತ್ತದೆ. ಆ ಅರ್ಜಿಯ ಸ್ಥಿತಿ ಏನಾಯಿತು ಎಂದು ಜನಸೇವಕ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಕಾಲ್ ಸೆಂಟರ್ ನಂಬರ್ ಮೂಲಕವೂ ನಿಮ್ಮ ಸೇವೆಯ ಸ್ಥಿತಿಗತಿ ತಿಳಿದುಕೊಳ್ಳಬಹುದು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications