ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಪ್ರತ್ಯೇಕ ಪಾಸ್‌ಪೋರ್ಟ್ ಕಡ್ಡಾಯ; ಹೇಗೆ ಮಾಡಿಸುವುದು?

|
Google Oneindia Kannada News

ವಿದೇಶಗಳಿಗೆ ಹೋಗಲು ನಮಗೆ ಪಾಸ್‌ಪೋರ್ಟ್ ಅಗತ್ಯ. ವೀಸಾ ಪಡೆಯಲು ಪಾಸ್‌ಪೋರ್ಟ್ ಇರಲೇಬೇಕು. ನಮ್ಮ ಗುರುತಿನ ದಾಖಲೆಗಳಲ್ಲಿ ಇದೂ ಒಂದು. ಹೀಗಾಗಿ, ಕೇವಲ ವಿದೇಶ ಪ್ರಯಾಣಕ್ಕಷ್ಟೇ ಅಲ್ಲ ಇನ್ನೂ ಅನೇಕ ಸಂದರ್ಭಗಳಲ್ಲಿ ಪಾಸ್‌ಪೋರ್ಟ್ ನಮಗೆ ಅಗತ್ಯಬೀಳುತ್ತದೆ.

ಈಗ ಮಕ್ಕಳಿಗೂ ಪ್ರತ್ಯೇಕವಾಗಿ ಪಾಸ್‌ಪೋರ್ಟ್ ಮಾಡಿಸಬೇಕು. ಈ ಮೊದಲು ತಂದೆಯ ಪಾಸ್‌ಪೋರ್ಟ್‌ನಲ್ಲಿ ಅಪ್ರಾಪ್ತ ವಯಸ್ಸಿನ ಮಗ ಅಥವಾ ಮಗಳ ಹೆಸರನ್ನು ಸೇರಿಸಲಾಗುತ್ತಿತ್ತು. ಇತ್ತೀಚೆಗೆ ಹೊರಡಿಸಲಾಗಿರುವ ಹೊಸ ಮಾರ್ಗಸೂಚಿಯಲ್ಲಿ, ಅಪ್ರಾಪ್ತರಿದ್ದರೆ ಅವರಿಗೆ ಬೇರೆಯೇ ಪಾಸ್‌ಪೋರ್ಟ್ ಮಾಡಿಸಬೇಕು ಎಂದು ತಿಳಿಸಲಾಗಿದೆ.

ಪೊಲೀಸರಿಗೆ ಪಾಸ್‌ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ: ಹೈಕೋರ್ಟ್ಪೊಲೀಸರಿಗೆ ಪಾಸ್‌ಪೋರ್ಟ್ ಮುಟ್ಟುಗೋಲು ಅಧಿಕಾರವಿಲ್ಲ: ಹೈಕೋರ್ಟ್

ಅಪ್ರಾಪ್ತರಿಗೆ ಪಾಸ್‌ಪೋರ್ಟ್ ಮಾಡಿಸುವಾಗ ಈ ಮಗುವಿನ ತಂದೆ ತಾಯಿಯ ಅನುಮತಿ ಅಗತ್ಯ. ಅಪ್ಪ ಅಮ್ಮ ಇಲ್ಲದಿದ್ದರೆ ಕಾನೂನು ಪ್ರಕಾರ ಅವರ ಪಾಲಕರಾದವರು ಪಾಸ್‌ಪೋರ್ಟ್‌ಗೆ ಅನುಮತಿ ಕೊಡಬೇಕು.

ಅಪ್ರಾಪ್ತ ವಯಸ್ಸಿನವರು ಎಂದರೆ 18 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಈ ಮಕ್ಕಳ ವಯಸ್ಸು ೧೮ ವರ್ಷಕ್ಕಿಂತ ಕಡಿಮೆ ಇದ್ದರೆ ಅಪ್ರಾಪ್ತರೆಂದು ಪರಿಗಣಿಸಲಾಗುತ್ತದೆ. ಆಗ ಪೋಷಕರ ಅನುಮತಿ ಅಗತ್ಯಬೀಳುತ್ತದೆ. ಅಪ್ರಾಪ್ತರಿಗೆ ಪಾಸ್‌ಪೋರ್ಟ್ ಮಾಡಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

 ಬೇಕಾಗುವ ದಾಖಲೆಗಳು

ಬೇಕಾಗುವ ದಾಖಲೆಗಳು

* ವಾಸ ಸ್ಥಳ ವಿಳಾಸದ ದಾಖಲೆ
* ಜನ್ಮ ದಿನಾಂಕದ ದಾಖಲೆ

ಇಲ್ಲಿ ಅಡ್ರೆಸ್ ಪ್ರೂಫ್‌ಗೆ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅಥವಾ ಆಧಾರ್ ಕಾರ್ಡ್‌ನ ದಾಖಲೆಗಳನ್ನು ಕೊಡಬೇಕು. ಅಥವಾ ಪೋಷಕರ ವಿಳಾಸ ದಾಖಲೆ ಅಥವಾ ಪೋಷಕರ ಬ್ಯಾಂಕ್ ಖಾತೆ ಪಾಸ್‌ಬುಕ್ ಅಥವಾ ಪೋಷಕರ ಹೆಸರಿನಲ್ಲಿರುವ ನೀರು, ವಿದ್ಯುತ್ ಬಿಲ್ ಅಥವಾ ಪೋಷಕರ ಬಾಡಿಗೆಮನೆ ದಾಖಲೆ ಕೊಡಬಹುದು. ಅಥವಾ ಪೋಷಕರ ಪಾಸ್‌ಪೋರ್ಟ್ ಇದ್ದರೆ ಅದನ್ನೇ ಸಲ್ಲಿಸಬಹುದು.

ಭಾರತೀಯ ಪಾಸ್‌ಪೋರ್ಟ್‌ಗೆ ಇನ್ನಷ್ಟು ಬಲ: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಿಭಾರತೀಯ ಪಾಸ್‌ಪೋರ್ಟ್‌ಗೆ ಇನ್ನಷ್ಟು ಬಲ: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಿ

 ವಯಸ್ಸು ಗುರುತು ದಾಖಲೆಗಳು

ವಯಸ್ಸು ಗುರುತು ದಾಖಲೆಗಳು

ಇನ್ನು, ಜನ್ಮ ದಿನಾಂಕದ ದಾಖಲೆಗೆ ಪಾಲಿಕೆ ಅಥವಾ ಪಂಚಾಯತಿಯಿಂದ ನೀಡಲಾಗುವ ಜನನ ಪ್ರಮಾಣಪತ್ರ ಇದ್ದರೆ ಸಾಕು. ಅಥವಾ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಾದರೂ ಆದೀತು. ಮಕ್ಕಳ ಪಾಲನಾ ಕೇಂದ್ರದಲ್ಲಿ ಬೆಳೆಯುತ್ತಿದ್ದರೆ ಆ ಸಂಸ್ಥೆಯ ಮುಖ್ಯಸ್ಥರಿಂದ ಘೋಷಣಾ ಪತ್ರ ತರಬೇಕು. ಆ ಮಗುವಿನ ಹೆಸರಿನಲ್ಲಿ ಯಾವುದಾದರೂ ಜೀವ ವಿಮೆ ಮಾಡಿಸಿದ್ದರೆ ಆ ಪಾಲಿಸಿ ಬಾಂಡ್ ಸಲ್ಲಿಸಬಹುದು.

 ಪಾಸ್‌ಪೋರ್ಟ್ ಮಾಡಿಸುವುದು ಹೇಗೆ?

ಪಾಸ್‌ಪೋರ್ಟ್ ಮಾಡಿಸುವುದು ಹೇಗೆ?

* ಪಾಸ್‌ಪೋರ್ಟ್ ಸೇವಾ ವೆಬ್ ಸೈಟ್‌ನಲ್ಲಿ ಮಗುವಿನ ಹೆಸರನ್ನು ಮೊದಲಿಗೆ ನೊಂದಾಯಿಸಿರಿ.
(https://www.passportindia.gov.in/AppOnlineProject/welcomeLink)
* ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ನಲ್ಲಿ ನಿಮ್ಮ ಮಗುವಿಗಾಗಿ ಹೊಸ ಲಾಗಿನ್ ರಚಿಸಬೇಕು.
* ಅಲ್ಲಿ ಸಿಗುವ ಅಪ್ಲಿಕೇಶನ್ ಫಾರ್ಮ್‌ನಲ್ಲಿ ಮಗುವಿನ ಎಲ್ಲಾ ವಿವರ ಭರ್ತಿ ಮಾಡಿ.
* ನಂತರ ಈ ಅರ್ಜಿಯನ್ನು ಸಬ್ಮಿಟ್ ಮಾಡಿ, ಬಳಿಕ ಅಗತ್ಯಬಿದ್ದರೆ ಶುಲ್ಕ ಪಾವತಿಸಬೇಕಾಗಬಹುದು.

 ಐದು ವರ್ಷದವರೆಗೆ ಸಿಂಧು

ಐದು ವರ್ಷದವರೆಗೆ ಸಿಂಧು

ಅಪ್ರಾಪ್ತರಿಗೆ ಮಾಡಿಸಲಾಗುವ ಪಾಸ್‌ಪೋರ್ಟ್ ಐದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಅಥವಾ ೧೮ ವರ್ಷ ವಯಸ್ಸು ಮುಟ್ಟುವವರೆಗೂ ಸಿಂಧುವಾಗಿರುತ್ತದೆ. 18 ವರ್ಷ ವಯಸ್ಸು ದಾಟಿದಾಗ ವಯಸ್ಕರಿಗೆ ಮಾಡಿಸಲಾಗುವ ಪಾಸ್‌ಪೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಒಂದು ವೇಳೆ, 15-18 ವರ್ಷ ವಯಸ್ಸಿನವರು ಪಾಸ್‌ಪೋರ್ಟ್ ಮಾಡಿಸುತ್ತಿದ್ದರೆ 10 ವರ್ಷಗಳವರೆಗೆ ಮಾನ್ಯವಿರುವ ಪಾಸ್‌ಪೋರ್ಟ್ ಮಾಡಿಸುವ ಅವಕಾಶ ಇರುತ್ತದೆ. ಆದರೆ, ಈ 10 ವರ್ಷ ಅವಧಿಯ ಪಾಸ್‌ಪೋರ್ಟ್ ಮಾಡಿಸಲು ಹೆಚ್ಚು ಬೀಳುತ್ತದೆ. ಅಲ್ಲದೇ ಪೊಲೀಸ್ ತಪಾಸಣೆಯ ಪ್ರಕ್ರಿಯೆಯೂ ಇರುತ್ತದೆ.

ಮತ್ತೊಂದು ಪ್ರಮುಖ ಅಂಶ ಎಂದರೆ, ಬೇರೆ ದೇಶಕ್ಕೆ ಮಗುವನ್ನು ಕಳುಹಿಸಲು ಅಥವಾ ಕರೆದೊಯ್ಯಲು ಪಾಸ್‌ಪೋರ್ಟ್ ಮಾಡಿಸುತ್ತಿದ್ದರೆ ಅಂತಾರಾಷ್ಟ್ರೀಯ ಟ್ರಾವಲ್ ಇನ್ಷೂರೆನ್ಸ್ ಮಾಡಿಸಬೇಕಾಗಬಹುದು. ಕೆಲ ದೇಶಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಟ್ರಾವೆಲ್ ಇನ್ಷೂರೆನ್ಸ್ ಪಾಲಿಸಿ ಕಡ್ಡಾಯ ಮಾಡಲಾಗಿರುತ್ತದೆ. ಹೀಗಾಗಿ, ಮಗುವಿಗೆ ವಿಮೆ ಮಾಡಿಸುವುದು ಉತ್ತಮ. ಆನ್‌ಲೈನ್‌ನಲ್ಲೇ ನೀವು ಇನ್ಷೂರೆನ್ಸ್ ಖರೀದಿಸಬಹುದು.

(ಒನ್ಇಂಡಿಯಾ ಸುದ್ದಿ)

Recommended Video

Ganga ನದಿಯ ಸೇತುವೆಯ ಮೇಲಿಂದ ಅಜ್ಜಿ ಸಾಹಸ | *India | OneIndia Kannada

English summary
As per new guidelines from Indian govt, a minor is required to make separate passport. Here is procedure how to apply for passport for minor on online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X