ಬಜಾಜ್ ಪಲ್ಸರ್ ಫ್ಲೆಕ್ಸ್ ಫ್ಯೂಯಲ್ ಬೈಕ್‌ನ ವಿಶೇಷತೆ, ದರಗಳ ಮಾಹಿತಿ ತಿಳಿಯಿರಿ
Bajaj Pulsar: ಆಟೋಮೊಬೈಲ್ ಕ್ಷೇತ್ರದಲ್ಲಿ ಬದಲಾವಣೆ ಕ್ರಾಂತಿಯೇ ಆಗುತ್ತಿದ್ದು, ತಾವೇನು ಕಡಿಕೆ ಇಲ್ಲವೆಂಬಂತೆ ಎಲ್ಲಾ ಕಂಪನಿಗಳು ಕಡಿಮೆ ದರದ ಉತ್ತಮ ಸೌಲಭ್ಯವುಳ್ಳ ಹೊಸ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸುತ್ತಲೇ ಇವೆ. ಹಾಗೆಯೇ ಬಜಾಜ್ ಪಲ್ಸರ್ ಕಂಪನಿ ಇದೀಗ ಅಪ್ಡೇಡ್ ವರ್ಷನ್ ಬೈಕ್ ಅನ್ನು ಪರಿಚಯಿಸಿದ್ದು, ಇದರ ವಿಶೇಷತೆ & ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಜಾಜ್ ಕಂಪನಿ ಅತ್ಯಾಧುನಿಕ ತಂತ್ರಜ್ಞಾನದ ವಾಹನಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ಇತ್ತೀಚೆಗಷ್ಟೇ ವಿಶ್ವದ ಮೊದಲ CNG ಬೈಕ್ ಬಜಾಜ್ ಫ್ರೀಡಂ 125 ಅನ್ನು ಪರಿಚಯಿಸಿದ್ದು, ಇದೀಗ ಕಂಪನಿಯು ತನ್ನ ಪ್ರಸಿದ್ಧ ಬೈಕ್ ಬಜಾಜ್ ಪಲ್ಸರ್ NS160ನ ಹೊಸ ಫ್ಲೆಕ್ಸ್ ಫ್ಯೂಯಲ್ ಆವೃತ್ತಿಯನ್ನು ಇಂಡಿಯಾ ಬಯೋ-ಎನರ್ಜಿ ಮತ್ತು ಟೆಕ್ ಎಕ್ಸ್‌ಪೋ 2024ರಲ್ಲಿ ಪ್ರದರ್ಶಿಸಿದೆ.

ಎಕ್ಸ್‌ಪೋ 2024ದಲ್ಲಿ ಸುಸ್ಥಿರ ಇಂಧನಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಇದನ್ನು ಇಂಡಿಯನ್ ಫೆಡರೇಶನ್ ಆಫ್ ಗ್ರೀನ್ ಎನರ್ಜಿ ಮತ್ತು ಎಂಎಂ ಆ್ಯಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಜಂಟಿಯಾಗಿ ಆಯೋಜಿಸಿವೆ.
ಫ್ಲೆಕ್ಸ್-ಫ್ಯೂಯಲ್ ಹೊಸದೇನಲ್ಲ, ಈ ರೀತಿಯ ತಂತ್ರಜ್ಞಾನದ ಬಳಕೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಲೇ ಇರುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಫ್ಲೆಕ್ಸ್-ಫ್ಯೂಯಲ್ ಎಂಜಿನ್ ಹೊಂದಿರುವ ವಾಹನಗಳ ತಯಾರಿಕೆಯನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದಾರೆ.
ಫ್ಲೆಕ್ಸ್ ಇಂಧನವು ಪೆಟ್ರೋಲ್ ಮತ್ತು ಎಥೆನಾಲ್ ಅಥವಾ ಮೆಥನಾಲ್ನಂತಹ ಇತರ ಇಂಧನಗಳ ಮಿಶ್ರಣದಿಂದ ತಯಾರಿಸಿದ ಪರ್ಯಾಯ ಇಂಧನವಾಗಿದೆ. ಫ್ಲೆಕ್ಸ್ ಇಂಧನ ವಾಹನಗಳು ನಿಯಮಿತ ಆಂತರಿಕ ದಹನಕಾರಿ ಎಂಜಿನ್ ಅನ್ನು ಒಳಗೊಂಡಿವೆ ಮತ್ತು ಒಂದಕ್ಕಿಂತ ಹೆಚ್ಚು ರೀತಿಯ ಇಂಧನದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಇಂಧನವು ಎಥೆನಾಲ್ ಮತ್ತು ಪೆಟ್ರೋಲ್ ಮಿಶ್ರಣದಿಂದ ಚಲಿಸುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಎಥೆನಾಲ್ ಚಾಲಿತ ಬೈಕ್ ಅನ್ನು ಮಾರ್ಚ್ 2025ರ ವೇಳೆಗೆ ಬಿಡುಗಡೆ ಮಾಡಬಹುದು ಎಂದು ಹೇಳಿದ್ದರು.
ಕೆಲ ಸಮಯದಿಂದ ಭಾರತ ಸರ್ಕಾರ E80/E100 ಎಥೆನಾಲ್‌ನಲ್ಲಿ ಚಲಿಸುವ ವಾಹನಗಳನ್ನು ಉತ್ತೇಜಿಸುತ್ತಿದೆ. ಟಿವಿಎಸ್ ಕೂಡ ಎಥೆನಾಲ್ ಬೈಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಕೆಲವು ವರ್ಷಗಳ ಹಿಂದೆ ಅಪಾಚಿ ಆರ್‌ಟಿಆರ್ 200ನ ಫ್ಲೆಕ್ಸ್ ಫ್ಯೂಯಲ್ ಮಾದರಿಯನ್ನು ಪ್ರದರ್ಶಿಸಿತ್ತು.
ಇನ್ನು ಬ್ರೆಜಿಲ್ ಮತ್ತು ದಕ್ಷಿಣ ಅಮೆರಿಕದ ದೇಶಗಳಲ್ಲಿ E80/100 ಇಂಧನದ ಬಳಕೆ ಹೆಚ್ಚಾಗಿದೆ. ಆ ದೇಶಗಳಲ್ಲಿ ಅದನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಫ್ಲೆಕ್ಸ್ ಫ್ಯೂಯಲ್ ಬೈಕ್ಗಳನ್ನು ಅಭಿವೃದ್ಧಿಪಡಿಸಲು ಇದು ಅರ್ಥಪೂರ್ಣ ಆಗಿದೆ. ಯಾಕೆಂದರೆ ಬಜಾಜ್ ಮತ್ತು ಟಿವಿಎಸ್‌ನಂತಹ ಕಂಪನಿಗಳು ಈ ದೇಶಗಳಲ್ಲಿ ದೊಡ್ಡ ಅಸ್ತಿತ್ವ ಹೊಂದಿವೆ.
ಭಾರತ E80/E100 ಇಂಧನದೆಡೆಗೆ ಚಲಿಸುವ ನಿರೀಕ್ಷೆಯಿದ್ದು, ಈ ಕಂಪನಿಗಳು ಫ್ಲೆಕ್ಸ್ ಫ್ಯೂಯಲ್ ವಾಹನಗಳನ್ನು ಮುಂಚಿತವಾಗಿ ಸಿದ್ಧಪಡಿಸಿದರೆ, ಮಾರುಕಟ್ಟೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸುಲಭವಾದಂತಾಗಲಿದೆ. ಪೆಟ್ರೋಲ್‌ಚಾಲಿತ ಪಲ್ಸರ್ NS160 ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 160.3 ಸಿಸಿ ಸಾಮರ್ಥ್ಯ ಹೊಂದಿದೆ.
ಇದು 17.2PS ಪವರ್ ಮತ್ತು 14.6Nm ಟಾರ್ಕ್ ಉತ್ಪಾದಿಸುತ್ತದೆ. ಸಸ್ಪೆನ್ಷನ್ ಸೆಟಪ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊಶಾಕ್ ಒಳಗೊಂಡಿದೆ. ಬ್ರೇಕ್ ವಿಭಾಗದಲ್ಲಿ 300 ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು 230 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಅಳವಡಿಕೆ ಮಾಡಲಾಗಿದೆ.
ಪಲ್ಸರ್ NS160 ಫ್ಲೆಕ್ಸ್ ಫ್ಯೂಯಲ್ ಜೊತೆಗೆ, ಬಜಾಜ್ ಆಟೋ ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಫ್ರೀಡಂ 125 CNG ಬೈಕ್ ಅನ್ನು IBET ಎಕ್ಸ್‌ಪೋ 2024ರಲ್ಲಿ ಪ್ರದರ್ಶಿಸಿದ್ದು, ಇದರ ಆರಂಭಿಕ ದರ ಎಕ್ಸ್ ಶೋ ರೂಂ ಪ್ರಕಾರ 95,000 1,10,000 ರೂಪಾಯಿ ಇದೆ. ಈ ಬೈಕ್ ಒಟ್ಟು ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರಲ್ಲಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆ ಲಭ್ಯ ಇದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications