Kawasaki Ninja 400 ಸಂಪೂರ್ಣ ಸ್ಥಗಿತ, 500 ಮಾರುಕಟ್ಟೆಗೆ-ಇದರ ವಿಶೇಷತೆಗಳೇನು?
Kawasaki Ninja 400: ಕವಾಸಕಿ ಬೈಕ್ ಅಂದರೆ ಅದು Yamaha R15 ರೇಂಜ್. ಇದೀಗ ಇದರ ಮಾದರಿಯ awasaki ninja 400 ಖರೀದಿಸುವವರಿಗೆ ಶಾಕಿಂಗ್ ಸುದ್ದಿಯೊಂದು ಇದೆ. ಹಾಗಾದರೆ ಆ ಶಾಕಿಂಗ್ ಸುದ್ದಿ ಏನು ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಕವಾಸಕಿ ನಿಂಜಾ 400 ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ ಬೈಕ್ ಆಗಿತ್ತು. ಇದೀಗ ಇದರ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಇದರ ಬದಲಿಗೆ ಕಂಪನಿ ಹೊಸ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನೀವು ಕವಾಸಕಿ ನಿಂಜಾ 400 ಬೈಕ್ ಖರೀದಿಸುವ ಕನಸು ಕಾಣುತ್ತಿದ್ದರೆ, ಮರೆತುಬಿಡಿ. ಈ ನಿಂಜಾ 400 ಬೈಕ್ ಇನ್ಮುಂದೆ ಭಾರತದಲ್ಲಿ ತನ್ನ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಕಂಪನಿಯು ಅದರ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಬದಲಿಗೆ ಅದಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾದ ನಿಂಜಾ 500 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹಾಗಾದರೆ ಇದರ ವಿಶೇಷತೆ ಏನೆಂದು ಇಲ್ಲಿ ತಿಳಿಯಿರಿ.
ಭಾರತದಲ್ಲಿ ಕವಾಸಕಿ ತನ್ನ ಜನಪ್ರಿಯ ಮೋಟಾರ್ ಬೈಕ್‌ಗಳ ಮಾದರಿಯ ನಿಂಜಾ 400 ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಕವಾಸಕಿ ನಿಂಜಾ ಇನ್ನುಂದೆ ದೇಶದಲ್ಲಿ ಮಾರಾಟಕ್ಕೆ ಲಭ್ಯ ಇರುವುದಿಲ್ಲ ಎಂದು ಕಂಪನಿ ಘೋಷಣೆ ಮಾಡಿದೆ.
ನಿಂಜಾ 500 ಮಾರುಕಟ್ಟೆಗೆ ಲಗ್ಗೆಯಿಟ್ಟ ಕೆಲವೇ ತಿಂಗಳುಗಳ ನಂತರ ಕಂಪನಿಯು ನಿಂಜಾ 400 ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿತು. ನಿಂಜಾ 400 ಅನ್ನು ಕೊನೆಯದಾಗಿ ಎಕ್ಸ್ ಶೋರೂಮ್ ಬೆಲೆ 5.24 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಇದೀಹ ಇದು ನಿಂಜಾ 500ನಂತೆಯೇ ಇದೆ. ಭಾರತದಲ್ಲಿ CBU ಮತ್ತು ನಿಂಜಾ 300 ಪ್ರಸ್ತುತ ದೇಶದಲ್ಲಿ ಮಾರಾಟಕ್ಕೆ ಲಭ್ಯ ಇದೆ ಎನ್ನುವ ಮಾಹಿತಿ ಇದೆ.
ಈ ಹಿಂದೆ ಕವಾಸಕಿ ನಿಂಜಾ 400 ಅನ್ನು ಹಳೆಯ ನಿಂಜಾ 300 ಬದಲಿಗೆ ಮಾರುಕಟ್ಟೆಗೆ ತರಲಾಗಿತ್ತು. ಆದರೆ, ನಿಂಜಾ 300 ಅನ್ನು ಭಾರತದಲ್ಲಿ ಮಾತ್ರ ತಯಾರಿಸಲಾಗುತ್ತಿದ್ದು, ಇದರಿಂದ ಅದರ ಬೆಲೆ ಸಾಕಷ್ಟು ಕಡಿಮೆ ಆಗಿದೆ. ಅದೇ ಸಮಯದಲ್ಲಿ ನಿಂಜಾ 400 ಮತ್ತು ಹೊಸ ನಿಂಜಾ 500 ಅನ್ನು ವಿದೇಶದಿಂದ ತರಿಸಲಾಗುತ್ತದೆ. ಆದ್ದರಿಂದ ಅವುಗಳ ಮೇಲೆ ಇಂಪೋರ್ಟ್ ಡ್ಯೂಟಿ ಚಾರ್ಜಸ್ ಹಾಕುವುದರಿಂದ ತುಸು ದುಬಾರಿ ಆಗಿರುತ್ತವೆ ಎನ್ನಲಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಎರಡೂ ಬೈಕ್‌ಗಳ ಬೆಲೆ ಬಹುತೇಕ ಒಂದೇ ಆಗಿತ್ತು. ಆದ್ದರಿಂದ ಕಂಪನಿಯು ಕವಾಸಕಿ ನಿಂಜಾ 400 ಅನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ. ಕವಾಸಕಿ ನಿಂಜಾ 400 ಇನ್ಮುಂದೆ ವಿಶ್ವಾದಾದ್ಯಂತ ಎಲ್ಲಿಯೂ ಸಹ ಲಭ್ಯ ಇರುವುದಿಲ್ಲ. ಇದನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದಾಗ, ಅದರ ಉಳಿದ ಸ್ಟಾಕ್ ಅನ್ನು ತ್ವರಿತವಾಗಿ ಮಾರಾಟ ಮಾಡಲು ಕಂಪನಿಯು ಉತ್ತಮ ರಿಯಾಯಿತಿಗಳನ್ನು ನೀಡಿದೆ.
ಕವಾಸಕಿ ನಿಂಜಾ 400 ಮತ್ತು 500ಗಿರುವ ವ್ಯತ್ಯಾಸವೇನು?: ಕವಾಸಕಿ ನಿಂಜಾ 400 ccಗಿಂತ ಸ್ವಲ್ಪ ಕಡಿಮೆ ಅಂದರೆ 399CC ಎಂಜಿನ್ ಹೊಂದಿದ್ದು, ಈ ಇಂಜಿನ್ ಹೆಚ್ಚಿನ ವೇಗದಲ್ಲಿ 44 ಹಾರ್ಸ್ ಪವರ್ ಶಕ್ತಿಯನ್ನು ನೀಡುತಿತ್ತು. ಅಲ್ಲದೆ, ವೇಗವನ್ನು ಹೆಚ್ಚಿಸುವಾಗ ಇದು 37 ನ್ಯೂಟನ್ ಮೀಟರ್‌ಗಳ ಟಾರ್ಕ್ ಅನ್ನು ನೀಡುತ್ತಿತ್ತು. ಈ ಎಂಜಿನ್ ವಿಶೇಷ ಗೇರ್ ಬಾಕ್ಸ್ ಅನ್ನು ಹೊಂದಿತ್ತು.
ಇನ್ನು ಇದೀಗ ಹೊಸ ನಿಂಜಾ 500 ತುಸು ಬೃಹತ್ತಾಕಾರದ, ಟ್ವಿನ್ ಕೂಲ್, 451 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಆದರೂ, ಈ ಇಂಜಿನ್ ಹೆಚ್ಚಿನ ವೇಗದಲ್ಲಿ ಅತೀ ಹೆಚ್ಚು ಶಕ್ತಿಶಾಲಿ ಎಂದು ಸಾಬೀತುಪಡಿಸಿದೆ. ಇನ್ನು ಈ ಎಂಜಿನ್ 9,000 rpmನಲ್ಲಿ 45 ಹಾರ್ಸ್ ಪವರ್ ಶಕ್ತಿಯನ್ನು ಮತ್ತು 6,000 rpmನಲ್ಲಿ 42.6 ನ್ಯೂಟನ್ ಮೀಟರ್‌ಗಳ ಟಾರ್ಕ್ ಅನ್ನು ನೀಡುತ್ತದೆ. ನಿಂಜಾ 500 ಕೂಡ 6 ಗೇರ್ ಬಾಕ್ಸ್ ಕೂಡ ಹೊಂದಿದೆ. ಇನ್ನು ಇದು ಬೃಹತ್ ಗಾತ್ರದ ಇಂಜಿನ್‌ಗಳನ್ನೊಳಗೊಂಡ ಸ್ಫೋರ್ಟ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications