ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯದಾನ ವ್ಯವಸ್ಥೆ:ಯಾವ ರಾಜ್ಯಕ್ಕೂ ಇಲ್ಲ ಶೇ.60 ಕ್ಕಿಂತ ಹೆಚ್ಚು ಅಂಕ

|
Google Oneindia Kannada News

ನವದೆಹಲಿ, ನವೆಂಬರ್ 28: ಯಾವುದೇ ದೇಶದ ನೈತಿಕ ಗುಣಮಟ್ಟ ಅಳೆಯುವುದು ಆಯಾ ದೇಶದ ನ್ಯಾಯಂಗ ವ್ಯವಸ್ಥೆಯ ಆಧಾರದ ಮೇಲೆ. 2012-2017 ರ ಜಾಹೀರಾತು ಡೆಟಾ ಆಧಾರದ ಮೇಲೆ ತಯಾರಿಸಲಾದ 'ಇಂಡಿಯಾ ಜಸ್ಟೀಸ್ ರಿಪೋರ್ಟ್' ಯನ್ನು ಟಾಟಾ ಟ್ರಸ್ಟ್ ಬಿಡುಗಡೆ ಮಾಡಿದ್ದು, ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಕೈಗನ್ನಡಿ ಎನ್ನಿಸಿದೆ.

ಈ ವರದಿ ನೀಡಿದ ಮಾಹಿತಿ ಪ್ರಕಾರ, ನ್ಯಾಯದಾನ ಪದ್ಧತಿಯಲ್ಲಿ ಭಾರತದ 29 ರಾಜ್ಯಗಳಲ್ಲಿ ಯಾವ ರಾಜ್ಯವೂ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ! ನ್ಯಾಯ ವ್ಯವಸ್ಥೆಯ ನಾಲ್ಕು ಸ್ತಂಭಗಳಾದ ಪೊಲೀಸ್, ಜೈಲು, ನ್ಯಾಯಾಂಗ, ಕಾನೂನು ನೆರವಿನಲ್ಲೂ ಯಾವ ರಾಜ್ಯವೂ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ.

ವಿಚಾರಣೆ ಮುಗಿಯೊಲ್ಲ, ಸೆರೆವಾಸ ತಪ್ಪೊಲ್ಲ: ಇದು ಭಾರತೀಯ ಜೈಲುಗಳ ಸ್ಥಿತಿವಿಚಾರಣೆ ಮುಗಿಯೊಲ್ಲ, ಸೆರೆವಾಸ ತಪ್ಪೊಲ್ಲ: ಇದು ಭಾರತೀಯ ಜೈಲುಗಳ ಸ್ಥಿತಿ

ನ್ಯಾಯದಾನ ವ್ಯವಸ್ಥೆಯಲ್ಲಿ ಮಹಾರಾಷ್ಟ್ರ ಮೊದಲು, ಕೇರಳ, ತಮಿಳುನಾಡು ರಾಜ್ಯಗಳು ಕ್ರಮವಾಗಿ ಎರಡೂ ಮತ್ತು ಮೂರನೇ ಸ್ಥಾನ ಪಡೆದಿವೆ.

ಈ ವರದಿಯ ಬಗ್ಗೆ ಮಾತನಾಡಿದ ನಿವೃತ್ತ ಹಿರಿಯ ನ್ಯಾಯಮೂರ್ತಿ ಮದನ್ ಬಿ ಲೊಕುರ್, "ನ್ಯಾಯದಾನ ವ್ಯಸವ್ಥೆಯಲ್ಲಿ ಯಾವ ರಾಜ್ಯ ಉತ್ತಮ ಸಾಧನೆ ಮಾಡಿದೆ ಎಂಬುದನ್ನು ತೋರಿಸುವುದಕ್ಕೆ ತಯಾರಿಸಿದ ವರದಿ ಇದಲ್ಲ. ಈ ವರದಿಯ ಉದ್ದೇಶ, ನ್ಯಾಯದಾನ ಮಾಡುವ ಸಾಮರ್ಥ್ಯ ಮತ್ತು ನ್ಯಾಯದಾನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಎಲ್ಲಾ ರಾಜ್ಯಗಳಿಗೂ ಸಲಹೆ ನೀಡುವುದು" ಎಂದಿದ್ದಾರೆ.

 ನ್ಯಾಯಾಂಗ, ನ್ಯಾಯದ ಪರ ದನಿ ಎತ್ತಿದ್ದೇವೆ: ನ್ಯಾ. ಕುರಿಯನ್ ಜೋಸೆಫ್ ನ್ಯಾಯಾಂಗ, ನ್ಯಾಯದ ಪರ ದನಿ ಎತ್ತಿದ್ದೇವೆ: ನ್ಯಾ. ಕುರಿಯನ್ ಜೋಸೆಫ್

ಕೋರ್ಟುಗಳಲ್ಲಿ ಇನ್ನೂ ಒಟ್ಟು 28 ಮಿಲಿಯನ್ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ!

ಭಾರತದ 29 ರಾಜ್ಯಗಳ ನ್ಯಾಯದಾನ ವ್ಯವಸ್ಥೆಯ ಕುರಿತ ಮಾಹಿತಿ ಇಲ್ಲಿದೆ.

ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ಕರ್ನಾಟಕ ಒಟ್ಟಾರೆ ಶ್ರೇಯಾಂಕದಲ್ಲಿ 6 ಸ್ಥಾನದಲ್ಲಿದೆಯಾದರೂ, ಪೊಲೀಸ್ 6, ಜೈಲು 3, ನ್ಯಾಯಾಂಗ 16 ಮತ್ತು ಕಾನೂನು ನೆರವಿನಲ್ಲಿ 7 ನೇ ಸ್ಥಾನ ಪಡೆದಿದೆ.

ಮೊದಲ ಸ್ಥಾನ ಮಹಾರಾಷ್ಟ್ರಕ್ಕೆ

ಮೊದಲ ಸ್ಥಾನ ಮಹಾರಾಷ್ಟ್ರಕ್ಕೆ

ಈ ವರದಿಯಲ್ಲಿ 5.92 ಅಂಕದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದಿದ್ದರೆ, ಕೇರಳ 5.85 ಅಂಕದೊಂದಿಗೆ ಎರಡನೇ ಸ್ಥಾನ, ತಮಿಳುನಾಡು 5.76 ಅಂಕಗಳೊಂದಿಗೆ ಮೂರನೇ ಸ್ಥಾನ ಮತ್ತು ಪಂಜಾಬ್ 5.53 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

ಕೊನೆಯ ಸ್ಥಾನದಲ್ಲಿ ಉತ್ತರ ಪ್ರೇಶ!

ಕೊನೆಯ ಸ್ಥಾನದಲ್ಲಿ ಉತ್ತರ ಪ್ರೇಶ!

ಪೊಲೀಸ್ ವ್ಯವಸ್ಥೆಯಲ್ಲಿ 18, ಜೈಲು ವ್ಯವಸ್ಥೆಯಲ್ಲಿ 14, ನ್ಯಾಯಾಂಗದಲ್ಲಿ 17 ಮತ್ತು ಕಾನೂನು ನೆರವಿನಲ್ಲಿ 18 ನೇ ಸ್ಥಾನ ಪಾಡೆಯುವ ಮೂಲಕ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ವರದಿ ಬಗ್ಗೆ...

ವರದಿ ಬಗ್ಗೆ...

ಸೆಂಟರ್ ಫಾರ್ ಸೋಶಿಯಲ್ ಜಸ್ಟಿಸ್, ಕಾಮನ್ ಕಾಸ್, ಕಾಮಲ್ ವೆಲ್ತ್ ಹ್ಯೂಮನ್ ಇಂಟರೆಸ್ಟ್ ಇನಿಶಿಯೇಟಿವ್ (ಸಿಎಚ್ ಆರ್ ಐ), ದಕ್ಷ್, ಟಿಐಎಸ್ಎಸ್-ಪ್ರಯಾವ್ ಮತ್ತು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಹಭಾಗಿತ್ವದೊಂದಿಗೆ ಇಂಥದೊಂದು ವರದಿ ತಯಾರಿಸಲು ಟಾಟಾ ಟ್ರಸ್ಟ್ ಮುಂದಾಗಿತ್ತು. ಈ ವರದಿಯ ಮುಖ್ಯ ಸಂಪಾದಕರು ಮಾಜಾ ದಾರುವಾಲಾ.

English summary
India Justice Report Says, Justice Delivery System: No States Score Above 60%,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X