ಮೊದಲ ಬಾರಿಗೆ ಕೊರೊನಾ ವೈರಸ್ ಕಂಡುಹಿಡಿದಿದ್ದು ಯಾರು ಗೊತ್ತೆ?

ಕೊರೊನಾ ವೈರಸ್ ಅಂದರೆ ಮಕ್ಕಳು ಬೆಚ್ಚಿಬೀಳುವಷ್ಟರ ಮಟ್ಟಿಗೆ ಭಯವನ್ನು ಮೂಡಿಸಿದೆ. ಹಾಗಾದರೆ ಈ ವೈರಸ್ ಹುಟ್ಟು ಯಾವಾಗ ಆಗಿದ್ದು, ಅದನ್ನು ಮೊದಲು ಕಂಡುಹಿಡಿದವರು ಯಾರು ಎಂಬುದರ ವಿವರಣೆ ಇಲ್ಲಿದೆ.

ಎರಡನೇ ವಿಶ್ವ ಮಹಾಯುದ್ಧದ ಬಳಿಕ ಈ ಕೊರೊನಾ ವೈರಸ್ ಹುಟ್ಟಿಕೊಂಡಿತು. ಆದರೆ ಅದು ಕೊವಿಡ್ 19 ಅಲ್ಲ ಬದಲಾಗಿ ಅದೇ ಜಾತಿಯ ಮತ್ತೊಂದು ವೈರಸ್ ಆಗಿತ್ತು. ಅದನ್ನು 1964ರಲ್ಲಿ ಮೊದಲ ಬಾರಿಗೆ ಸ್ಕಾಟ್‌ಲೆಂಡ್‌ನ ಡಾ. ಜೂನ್ ಅಲ್ಮೆಡಾ ಎನ್ನುವವರು ಕಂಡುಹಿಡಿದರು.

1964ರಲ್ಲಿ ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಅವರ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್‌ನ್ನು ಮೊದಲ ಬಾರಿಗೆ ಸಂಶೋಧಿಸಲಾಯಿತು. ರೋಗ ಸೂಕ್ಮಾಣುಗಳ ವೈಜ್ಞಾನಿಕ ಅಧ್ಯಯನವನ್ನು ಮಾಡಿದರು.

ಅವರು ಕೇವಲ ಕೊರೊನಾ ವೈರಸ್ ಮಾತ್ರವಲ್ಲದೆ ಗರ್ಭಿಣಿಯರಲ್ಲಿ ಕಂಡು ಬರುವ ರುಬೆಲ್ಲಾ ವೈರಸ್ ಕುರಿತು ಕೂಡ ಮೊದಲು ಸಂಶೋಧನೆ ನಡೆಸಿದ್ದರು.

ಡಾ. ಡೇವಿಡ್ ಟಿರಿಲ್ ಅವರ ಕಾಮನ್ ಕೋಲ್ಡ್ ಯುನಿಟ್‌ನಲ್ಲಿ ಜ್ವರದಿಂದ ಬಳಲುತ್ತಿದ್ದವರ ರಕ್ತ ಹಾಗೂ ಗಂಟಲಿನ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಯಿತು. ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಮೂಲಕ ಮನುಷ್ಯನ ದೇಹದಲ್ಲಿ ಕೊರೊನಾ ವೈರಸ್ ಇರುವುದನ್ನು ಮೊದಲು ಪತ್ತೆಹಚ್ಚಲಾಯಿತು. ಆದರೆ ಅವರ ಸಂಶೋಧನೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲೇ ಇಲ್ಲ.

ಜೂನ್ ಅಲ್ಮೆಡಾ ಅವರ ಜೀವನ

ಜೂನ್ ಅಲ್ಮೆಡಾ ಅವರ ಜೀವನ

ಡಾ. ಜೂನ್ ಅಲ್ಮೆಡಾ ಅವರು ಸ್ಕಾಟ್‌ಲೆಂಡ್‌ನಲ್ಲಿ 130ರಲ್ಲಿ ಜನಿಸಿದರು. ಇವರು ಇಮ್ಯುನೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯ ಪ್ರವರ್ತಕರಾಗಿದ್ದಾರೆ. ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದರು. ಆದರೂ ಸಂಶೋಧನೆಯನ್ನು ತಮ್ಮನ್ನು ತೊಡಗಿಸಿಕೊಂಡಿದ್ದರು.

ಲ್ಯಾಬೊರೇಟರಿ ಟೆಕ್ನಿಶಿಯನ್ ಆಗಿ ಮೊದಲ ಕೆಲಸ

ಲ್ಯಾಬೊರೇಟರಿ ಟೆಕ್ನಿಶಿಯನ್ ಆಗಿ ಮೊದಲ ಕೆಲಸ

ಅವರು ತಮ್ಮಲ್ಲಿದ್ದ ಸ್ವಲ್ಪ ಜ್ಞಾನದಿಂದಲೇ ಗ್ಲಾಸ್‌ಗೌ ರಾಯಲ್ ಇನ್‌ಫರ್ಮರಿಯಲ್ಲಿ ಲ್ಯಾಬೊರೇಟರಿ ಟೆಕ್ನಿಶಿಯನ್‌ ಆಗಿ ಕೆಲಸ ಆರಂಭಿಸಿದರು. ಅವರು ಸ್ವಲ್ಪ ವರ್ಷಗಳ ಬಳಿಕ ಒಂಟಾರಿಯೋ ಕ್ಯಾನ್ಸರ್ ಸಂಸ್ಥೆಯಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಸಂಶೋಧಿಸಿದರು.

ಇನ್‌ಫ್ಲುಯೆನ್ಝಾ ವೈರಸ್

ಇನ್‌ಫ್ಲುಯೆನ್ಝಾ ವೈರಸ್

ಡಾ. ಜೂನ್ ಅವರು ತಾವು ಕಂಡು ಹಿಡಿದ ಇಮ್ಯೂನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯಿಂದಲೇ ಮೊದಲ ಬಾರಿಗೆ ವೈರಸ್‌ನ್ನು ಪತ್ತೆಹಚ್ಚಿದರು. ಅದು ಇನ್‌ಫ್ಲುಯೆನ್ಝಾ ವೈರಸ್ ಆಗಿತ್ತು. ಬಳಿಕ ಮೊದಲ ಮನುಷ್ಯನಲ್ಲಿರುವ ಕೊರೊನಾ ವೈರಸ್‌ನ್ನು ಪತ್ತೆ ಹಚ್ಚಿದರು.

 1954ರಲ್ಲಿ ಡಾ. ಜೂನ್ ಮದುವೆ

1954ರಲ್ಲಿ ಡಾ. ಜೂನ್ ಮದುವೆ

ಜೂನ್ 1954ರಲ್ಲಿ ಎನ್ರಿಕ್ಸ್ ಅಲ್ಮೆಡಾ ಅವರನ್ನು ಮದುವೆಯಾದರು.ತಮ್ಮ ಮಗಳ ಜೊತೆಗೆ ಕೆನಡಾದ ಟೊರಾಂಟೋದಲ್ಲಿ ನೆಲೆಸಿದರು. ಅಲ್ಲಿನ ಒರಾಂಟೋ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾನ್ ಮೈಕ್ರೋಸ್ಕೋಪ್‌ನ್ನು ಸಂಶೋಧಿಸಿದರು. ಬಳಿಕ ಅವರು ಲಂಡನ್‌ನಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಬಂದರು. ಈಗ ಬೊರಿಸ್ ಜಾನ್ಸನ್ ಕೊವಿಡ್ 19 ರೋಗಕ್ಕೆ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+