ಕಾರಿನ ಸನ್‌ರೂಫ್‌ನಲ್ಲಿ ಜಾಲಿ ರೈಡ್: ಪರಸ್ಪರ ಚುಂಬಿಸಿದ ಜೋಡಿ ವಿಡಿಯೋ ವೈರಲ್

ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಮೈಮರೆಯುವ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಬೈಕ್, ಮೆಟ್ರೋ, ಟ್ರೈನ್, ಫ್ಲೈಟ್, ಬಸ್‌ಗಳಲ್ಲಿ ಲಿಪ್‌ಲಾಕ್ ಮಾಡುತ್ತಿದ್ದ ಜೋಡಿಗಳು ಸದ್ಯ ಕಾರನ್ನು ಕೂಡ ಬಿಟ್ಟಿಲ್ಲ. ಕಾರ್ ಅಲ್ಲಿ ಸಾರ್ವಜನಿಕರು ಯಾರಿರುತ್ತಾರೆ ಅಂತ ನಿಮ್ಗೆ ಯೋಚನೆ ಬರಬಹುದು. ಈ ಜೋಡಿ ಕಾರ್ ಒಳಗೆ ಮೈಮರೆತಿದ್ದರೆ ಯಾರೂ ಕೂಡ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇವರು ಸಾರ್ವಜನಿಕವಾಗಿ ಕಾರಿನ ತೆರೆದ ಸನ್‌ರೂಫ್ ನಲ್ಲಿ ಚುಂಬಿಸಿ ಕೂಗಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಎಲ್ಲೆಡೆಯಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೈದರಾಬಾದ್‌ನ ನರಸಿಂಹರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ವಿಲಕ್ಷಣ ಮತ್ತು ಜೀವಕ್ಕೆ ಅಪಾಯವನ್ನುಂಟುಮಾಡುವ ಘಟನೆ ನಡೆದಿದೆ.

jolly-ride-on-car-sunroof

ಮತ್ತೊಂದು ವಾಹನದಲ್ಲಿರುವವವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅವರಿರುವ ಕಾರು ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದೆ. ಈ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ಇರುವ ಕಾರಣ ಪೊಲೀಸರ ಮಧ್ಯಸ್ಥಿಕೆಗೆ ಬೇಡಿಕೆಯಿಟ್ಟಿದ್ದಾರೆ. ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

ವೈರಲ್ ವೀಡಿಯೊದಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ವೇಗವಾಗಿ ಚಲಿಸುತ್ತಿದೆ. ಈ ಜೋಡಿ ಪರಸ್ಪರ ಉತ್ಸಾಹದಿಂದ ಚುಂಬಿಸಿ ಜಾಯ್‌ರೈಡ್‌ನಲ್ಲಿ ಕೈ ಮಾಡುತ್ತಾರೆ. ಇದರಿಂದ ಇತರ ವಾಹನಗಳ ಸವಾರರು ಅವರತ್ತ ನೋಡುತ್ತಾ ಚಲನೆಯಲ್ಲಿ ಗಮನ ಹರಿಸದೆ ಹೋಗುವುದು ಕಾಣಬಹುದು.

ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

ಈ ವಿಡಿಯೋ ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ಹರಡಿದ ತಕ್ಷಣ ಭಾರೀ ಟೀಕೆಗೆ ಗುರಿಯಾಗಿದೆ. ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವು ಆನ್‌ಲೈನ್ ಬಳಕೆದಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಮಾಡಿದ ಪೋಸ್ಟ್ ನಲ್ಲಿ "ಹೈದರಾಬಾದ್ ನಗರ ಪೊಲೀಸರು ಈ ಅಜಾಗರೂಕ ಚಾಲನೆ ವರ್ತನೆ ಮತ್ತು ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ಪರಿಹರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ." ಎಂದು ಬರೆದಿದ್ದಾರೆ.

"ಈ ಅಸುರಕ್ಷಿತ ಡ್ರೈವಿಂಗ್ ಮೋಡ್ ಮತ್ತು ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆ ಕುರಿತು @hydcitypolic ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸುತ್ತೇವೆ'' ಎಂದು ಮತ್ತೊಬ್ಬರು ಬರೆದಿದ್ದಾರೆ.

ಈ ಹಿಂದೆ ಬೈಕ್ನನಲ್ಲಿ ಚುಂಬಿಸಿದ ಜೋಡಿ

ಕಳೆದ ಜೂನ್‌ನಲ್ಲಿ ಚಲಿಸುವ ಬೈಕ್ ಮೇಲೆ ಯುವ ಜೋಡಿಯೊಂದು ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಪ್ರದರ್ಶಿಸುವ ಮತ್ತೊಂದು ವೀಡಿಯೊ ವೈರಲ್ ಆಗಿತ್ತು. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ ಎನ್‌ಎಚ್ 9 ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಸವಾರಿ ಮಾಡುವಾಗ ದಂಪತಿಗಳು ಬಿಗಿಯಾಗಿ ಅಪ್ಪಿಕೊಂಡಿರುವುದು ಕಂಡುಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

ವಿಡಿಯೋದಲ್ಲಿ ಯುವತಿ ತನ್ನ ಪ್ರೇಮಿಗೆ ಎದುರಾಗಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದಾಳೆ. ಬೈಕ್ ಅನ್ನು ವೇಗವಾಗಿದೆ. ಹೆಲ್ಮೆಟ್ ಧರಿಸದೆ ಇಬ್ಬರು ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+