Electric Vehicles: ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಗಾಗಿ ಹೊಸ ಮಾನದಂಡಗಳ ಪರಿಚಯ-ಮಾಹಿತಿ, ವಿವರ ಇಲ್ಲಿದೆ
Electric Vehicles: ಆಟೋಮೊಬೈಲ್ ಕ್ಷೇತ್ರಕ್ಕೆ ಬಂದರೆ, ಇದೀಗ ಮಾರಾಟದಲ್ಲಿ ಎಲೆಕ್ಟ್ರಿಕ್ ವಾಹನಗಳದ್ದೇ ದರ್ಬಾರ್ ಹೆಚ್ಚಾಗಿದೆ. ಮತ್ತೊಂದೆಡೆ ನೋಡುವುದಾದರೆ, ಈ ವಾಹನಗಳು ಹೆಚ್ಚಾಗಿ ಬೆಂಕಿಗೆ ತುತ್ತಾಗುವುದು ಕೂಡ ಹೆಚ್ಚಾಗಿದೆ. ಆದ್ದರಿಂದ ಇದನ್ನು ತಡೆದು ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಿಎಸ್‌ಐ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹಾಗಾದರೆ ಮಾನದಂಡಗಳ ವಿವರ ಇಲ್ಲಿದೆ ತಿಳಿಯಿರಿ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಎರಡು ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ (Electric Vehicles) ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

IS 18590: 2024 ಮತ್ತು IS 18606: 2024 ಈ ಮಾನದಂಡಗಳು EVಗಳ ಪವರ್ ಟ್ರೇನ್‌ಗಳಾದ L, M, ಮತ್ತು N ವಿಭಾಗಗಳಿಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳನ್ನು ಪರಿಚಯಿಸಲಾಗುತ್ತದೆ. ಇದರಿಂದ ಒಟ್ಟಾರೆ ವಾಹನದ ಸುರಕ್ಷತೆಯನ್ನು ಹೆಚ್ಚಿಸದಂತಾಗುತ್ತದೆ. ಈ ಮಾನದಂಡಗಳು ಬ್ಯಾಟರಿ ಕಾರ್ಯಕ್ಷಮತೆಯ ಮೇಲೆ ಹೆಚ್ಚು ನಿರ್ಧರಿತವಾಗಿರುತ್ತವೆ. ಈ ವಾಹನಗಳ ಚಾಲಕರ ರಕ್ಷಣೆ ಮತ್ತು ಭದ್ರತೆ ಎರಡಕ್ಕೂ ಹೆಚ್ಚು ಒತ್ತು ನೀಡುತ್ತವೆ.
ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ಮಾನದಂಡಗಳು: IS 18590: 2024 ಮತ್ತು IS 18606: 2024 ಸುರಕ್ಷಿತ ವಿದ್ಯುತ್ ಪೂರೈಕೆ, ಪರಿಸರಕ್ಕೆ ಮಾರಕವಾಗದಂತೆ ನೋಡಿಕೊಳ್ಳುವುದು ಇವುಗಳ ಪ್ರಮುಖ ಆದ್ಯತೆಯಾಗಿದೆ. ಈ ಮಾನದಂಡಗಳು ಎಲೆಕ್ಟ್ರಿಕ್ ವಾಹನಗಳ ಪವರ್‌ಟ್ರೇನ್ ವ್ಯವಸ್ಥೆಗಳಿಗೆ ಸಮಗ್ರ ಮಾರ್ಗಸೂಚಿಗಳನ್ನು ಒದಗಿಸುತ್ತವೆ. ಅವುಗಳು ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ಕಾರ್ಯಕ್ಷಮತೆಯ ಮೆಟ್ರಿಕ್‌ಗಳನ್ನು ಪೂರೈಸುತ್ತವೆ.
ಮಾರ್ಗಸೂಚಿಗಳನ್ನು ಪವರ್‌ಟ್ರೇನ್ ಕಾರ್ಯಕ್ಕೆ ಸಂಬಂಧಿಸಿದ ಅಪಾಯಗಳನ್ನು ನಿಯಂತ್ರಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಪ್ರಯಾಣಿಕರ ರಕ್ಷಣೆ ಮತ್ತು EVಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದಂತಾಗುತ್ತದೆ.
ಅಷ್ಟೇ ಅಲ್ಲದೆ, ಈ ಮಾನದಂಡಗಳು EV ಬ್ಯಾಟರಿಗಳ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಶಕ್ತಿಯುತ ಕಾರ್ಯನಿರ್ವಹಣೆಗೆ ಪ್ರಮುಖ ಅಂಶವಾಗಿದೆ. ಈ ಬ್ಯಾಟರಿಗಳು ಶಕ್ತಿಯುತವಾಗಿರುವುದಲ್ಲದೆ, ಸುರಕ್ಷಿತ ಆಗಿರುವುದನ್ನು ಖಾತ್ರಿಪಡಿಸುತ್ತದೆ. ಹಾಗೂ ಶಾರ್ಟ್-ಸರ್ಕ್ಯೂಟ್‌ಗಳು ಮತ್ತು ಇತರ ಬ್ಯಾಟರಿ ಸಂಬಂಧಿತ ಸಮಸ್ಯೆಗಳಂತಹ ಅಪಾಯಗಳನ್ನು ನಿಯಂತ್ರಿಸುತ್ತದೆ.
ಇ-ರಿಕ್ಷಾಗಳು ಮತ್ತು ಇ-ಕಾರ್ಟ್‌ಗಳ ಸೇರ್ಪಡೆ: BIS IS 18294: 2023ಅನ್ನು ಪರಿಚಯಿಸಿದ್ದು ಇದು ನಿರ್ದಿಷ್ಟವಾಗಿ ಇ-ರಿಕ್ಷಾಗಳು ಮತ್ತು ಇ-ಕಾರ್ಟ್‌ಗಳಿಗೆ ಮಾನದಂಡವಾಗಿದೆ. ಈ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಹೆಚ್ಚಾಗಿವೆ. ಇನ್ನು ಈ ಮಾನದಂಡವು ಸುಸ್ಥಿರ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಇನ್ನು ಹೊಸ ಮಾನದಂಡವು ನಿರ್ಮಾಣ ಮತ್ತು ಕಾರ್ಯಾಚರಣೆ ಅಂಶಗಳನ್ನು ಸೇರಿದಂತೆ ವಿವಿಧ ಸುರಕ್ಷತೆ ಮತ್ತು ಕ್ರಿಯಾತ್ಮಕತೆಯನ್ನು ಒಳಗೊಂಡಿದೆ. ಅಲ್ಲದೆ, ಚಾಲಕರು ಮತ್ತು ಪ್ರಯಾಣಿಕರಿಬ್ಬರ ಸುರಕ್ಷೆತೆಗೆ ಹೆಚ್ಚು ಸಹಕಾರಿಯಾಗಲಿದೆ.
ಎಲೆಕ್ಟ್ರಿಕ್ ಮೊಬಿಲಿಟಿ: ಈ ಹೊಸ ಮಾನದಂಡಗಳ ಪರಿಚಯದೊಂದಿಗೆ, BIS ಈಗ ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಾದ ಒಟ್ಟು 30 ಭಾರತೀಯ ಮಾನದಂಡಗಳನ್ನು ಮತ್ತು ಚಾರ್ಜಿಂಗ್ ಮೂಲಸೌಕರ್ಯ ಸೇರಿದಂತೆ ಅವುಗಳ ಸಂಬಂಧಿತ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತದೆ. ಸುರಕ್ಷತೆ, ದಕ್ಷತೆ ಮತ್ತು ಪರಿಸರದ ಕಾರ್ಯಕ್ಷಮತೆಗಾಗಿ ಮಾನದಂಡಗಳನ್ನು ಹೊಂದಿಸುವ ಮೂಲಕ ಹೆಚ್ಚು ಸಮರ್ಥನೀಯ ಸಾರಿಗೆ ಚೌಕಟ್ಟಿನ ಪರಿವರ್ತನೆಗೆ ಮಾರ್ಗದರ್ಶನ ನೀಡುವಲ್ಲಿ ಇವುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಲಾಗುತ್ತದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications